HOME » NEWS » National-international » UDAIPUR JAIN FAMILY MAN NAMES HIS SON NAME AS CONGRESS GNR

ಮಗುವಿಗೆ ಕಾಂಗ್ರೆಸ್ ಎಂದು ಹೆಸರಿಟ್ಟ ರಾಜಸ್ಥಾನಿ ಜೈನ್ ಕುಟುಂಬ

ನಮ್ಮ ಇಡೀ ಕುಟುಂಬ ಕಾಂಗ್ರೆಸ್​ನೊಂದಿಗೆ ಗುರುತಿಸಿಕೊಂಡಿದೆ. ಅನಾದಿಕಾಲದಿಂದಲೂ ನಾವು ಕಾಂಗ್ರೆಸ್ ಜತೆಗೆ​​ ನಿಷ್ಠೆ ಹೊಂದಿದ್ದೇವೆ. ನಮ್ಮ ಮುಂದಿನ ಪೀಳಿಗೆಯೂ ಕಾಂಗ್ರೆಸ್​​ ಪಕ್ಷವನ್ನೇ ಹಿಂಬಾಲಿಸಬೇಕೆಂಬುದು ನಮ್ಮ ಆಶಯ ಎಂದು ಮಾಧ್ಯಮದವರೊಂದಿಗೆ ವಿನೋದ್​​​​ ಜೈನ್ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.

news18-kannada
Updated:January 22, 2020, 7:25 AM IST
ಮಗುವಿಗೆ ಕಾಂಗ್ರೆಸ್ ಎಂದು ಹೆಸರಿಟ್ಟ ರಾಜಸ್ಥಾನಿ ಜೈನ್ ಕುಟುಂಬ
ಕಾಂಗ್ರೆಸ್​​ ಜೈನ್​
  • Share this:
ನವದೆಹಲಿ(ಜ.22): ರಾಜಸ್ಥಾನದ ಮುಖ್ಯಮಂತ್ರಿ ಕಚೇರಿಯಲ್ಲಿ ಮೀಡಿಯಾ ಆಫೀಸರ್‌ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೋರ್ವ ತನ್ನ ಮಗುವಿಗೆ ಕಾಂಗ್ರೆಸ್​​ ಎಂದು ಹೆಸರಿಟ್ಟ ಘಟನೆ ನಡೆದಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​ ಕಾರ್ಯಕರ್ತ ಮತ್ತು ಸಿಎಂ ಅಶೋಕ್​ ಗೆಹ್ಲೋಟ್ ಕಚೇರಿಯಲ್ಲಿ ಮೀಡಿಯಾ ಆಫೀಸರ್ ಆಗಿರುವ ವಿನೋದ್​ ಜೈನ್​​ ಎಂಬುವರು ತನ್ನ ಮಗುವಿಗೆ ಕಾಂಗ್ರೆಸ್​ ಜೈನ್​​ ಎಂದು ನಾಮಕರಣ ಮಾಡಿದ್ದಾರೆ.

ನಮ್ಮ ಇಡೀ ಕುಟುಂಬ ಕಾಂಗ್ರೆಸ್​ನೊಂದಿಗೆ ಗುರುತಿಸಿಕೊಂಡಿದೆ. ಅನಾದಿಕಾಲದಿಂದಲೂ ನಾವು ಕಾಂಗ್ರೆಸ್ ಜತೆಗೆ​​ ನಿಷ್ಠೆ ಹೊಂದಿದ್ದೇವೆ. ನಮ್ಮ ಮುಂದಿನ ಪೀಳಿಗೆಯೂ ಕಾಂಗ್ರೆಸ್​​ ಪಕ್ಷವನ್ನೇ ಹಿಂಬಾಲಿಸಬೇಕೆಂಬುದು ನಮ್ಮ ಆಶಯ ಎಂದು ಮಾಧ್ಯಮದವರೊಂದಿಗೆ ವಿನೋದ್​​​​ ಜೈನ್ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.




ಇದನ್ನೂ ಓದಿ: ಕೆಪಿಸಿಸಿ ಪಟ್ಟಕ್ಕಾಗಿ ಡಿಕೆಶಿ, ಎಂಬಿ ಪಾಟೀಲ್​​ ನಡುವೇ ತೀವ್ರ ಪೈಪೋಟಿ: ಅಧ್ಯಕ್ಷರ ನೇಮಕಕ್ಕೆ ವಿಳಂಬ ಯಾಕೆ ಗೊತ್ತೇ?

ನಮ್ಮ ಕುಟುಂಬದ ಕೆಲವರಿಗೆ ನನ್ನ ಮಗುವನ್ನು ಕಾಂಗ್ರೆಸ್​ ಜೈನ್​​ ಎಂದು ಇಷ್ಟವಿಲ್ಲ. ನಾನು ಮಾತ್ರ ಅವರು ನನ್ನ ಮಗನನ್ನು ಕಾಂಗ್ರೆಸ್​​ ಜೈನ್​​ ಎಂದು ಕರೆಯಬೇಕೆಂದು ಕಾಯುತ್ತಿದ್ದೇನೆ. ನನ್ನ ಮಗು ಕಳೆದ ಜುಲೈ ತಿಂಗಳಿನಲ್ಲಿ ಜನಿಸಿದ. ನಂತರ ನಾನೇ ಆತನಿಗೆ ಕಾಂಗ್ರೆಸ್​ ಜೈನ್​​ ಎಂದು ನಾಮಕರಣ ಮಾಡಿದೆ. ಇದೀಗ ರಾಜ್ಯ ಸರ್ಕಾರದಿಂದ ಜನನ ಪ್ರಮಾಣ ಪತ್ರ ಸಿಕ್ಕಿದೆ. ನನ್ನ ಮಗನ ಹೆಸರು ಇಂದಿನಿಂದ ಕಾಂಗ್ರೆಸ್​ ಜೈನ್​​ ಆಗಿದೆ ಎಂದರು.
Youtube Video
First published: January 22, 2020, 7:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories