UCO Bank Recruitment 2020: ಯುಕೊ ಬ್ಯಾಂಕ್​ನಲ್ಲಿ ಉದ್ಯೋಗವಕಾಶ; 91 ವಿಶೇಷ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Specialist Cadre Officer: ಪದವಿ, ಪೋಸ್ಟ್ ಗ್ರಾಜುಯೇಶನ್, ಪಿಹೆಚ್.ಡಿ, ಬಿ.ಇ/ಬಿ.ಟೆಕ್, ಎಂಸಿಎ ಮತ್ತು ಸಿಎ/ಸಿಎಫ್ಎ ವಿದ್ಯಾರ್ಹತೆಯನ್ನು ಪಡೆದವರು ಅರ್ಜಿಸಬಹುದಾಗಿದೆ.

jobs

jobs

  • Share this:
    ಯುಕೊ ಬ್ಯಾಂಕ್ ನಲ್ಲಿ ಖಾಲಿ ಇರುವ 91 ವಿಶೇಷ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್​ಸೈಟ್​ಗೆಗೆ ತೆರಳಿ ಅರ್ಜಿ ಸಲ್ಲಿಸಬಹುದಾದೆಂದು ತಿಳಿಸಿದೆ. ನವೆಂಬರ್ 17,2020 ಕೊನೆಯ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

    ವಿದ್ಯಾರ್ಹತೆ:

    ಪದವಿ, ಪೋಸ್ಟ್ ಗ್ರಾಜುಯೇಶನ್, ಪಿಹೆಚ್.ಡಿ, ಬಿ.ಇ/ಬಿ.ಟೆಕ್, ಎಂಸಿಎ ಮತ್ತು ಸಿಎ/ಸಿಎಫ್ಎ ವಿದ್ಯಾರ್ಹತೆಯನ್ನು ಪಡೆದವರು ಅರ್ಜಿಸಬಹುದಾಗಿದೆ.

    ಹುದ್ದೆಗಳ ವಿವರ:

    ವಯೋಮಿತಿ: ವಿಶೇಷ ಅಧಿಕಾರಿ ಹುದ್ದೆಗಳಿಗೆ ಕನಿಷ್ಟ 21 ರಿಂದ ಗರಿಷ್ಟ 30 ಮತ್ತು ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

    ವೇತನದ ವಿವರ: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 23,700/- ರಿಂದ 45,950 /-ರೂ ವೇತನವನ್ನು ನೀಡಲಾಗುವುದು. ಆಯಾ ಹುದ್ದೆಗಳಿಗೆ ತಕ್ಕಂತೆ ವೇತನದಲ್ಲಿ ಬದಲಾವಣೆ ಇರಲಿದೆ.

    ಅರ್ಜಿ ಶುಲ್ಕ:  ಅರ್ಜಿ ಸಲ್ಲಿಸುವ ಆಸಕ್ತರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದೆ. ಸಾಮಾನ್ಯ /ಓಬಿಸಿ ಅಭ್ಯರ್ಥಿಗಳು 1,000/-ರೂ ಮತ್ತು ಪ.ಜಾ/ಪ.ಪಂಗಡ/ಅಂಗವಿಕಲ ಅಭ್ಯರ್ಥಿಗಳು 118/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ.

    ಅರ್ಜಿ ಸಲ್ಲಿಸುವುದು ಹೇಗೆ?;

    ಆನ್​ಲೈನ್​ ಮೂಲಕ ಅಧಿಕೃತ ವೆಬ್​ಸೈಟ್​  https://www.ucobank.com/english/Home.aspx ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ಮಾಹಿತಿಯನ್ನು ಓದಿ, ನಂತರ ಭರ್ತಿ ಮಾಡುವ ಮೂಲಕ ನವೆಂಬರ್‌ 17,2020ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.

    ಭಾರತದಲ್ಲಿ ಉದ್ಯೋಗ ಸ್ಪರ್ಧೆ ಶೇ30ರಷ್ಟು ಹೆಚ್ಚಳ; ಲಿಂಕ್ಢೇನ್​ ಅಧ್ಯಯನದಲ್ಲಿ ಬಯಲು
    Published by:Harshith AS
    First published: