435ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತೊಗೆದ ಊಬರ್​​​ ಸಂಸ್ಥೆ

2018-2019ರಲ್ಲಿ ಊಬರ್​​​ ಆದಾಯ ಕಡಿಮೆಯಾಗಿದೆ. ಸ್ವಂತ ಉದ್ಯೋಗ ಮಾಡಬೇಕೆನ್ನುವರಿಗೆ ಉಬರ್ ಕೆಲಸ ನೀಡುತ್ತಿದೆ ಎನ್ನಲಾಗಿತ್ತು. ಸದ್ಯಕ್ಕೀಗ ಅದೇ ಸಂಸ್ಥೆಯೂ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತೊಗೆದಿದೆ. ​​

news18
Updated:September 12, 2019, 10:47 AM IST
435ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತೊಗೆದ ಊಬರ್​​​ ಸಂಸ್ಥೆ
ಉಬರ್​​
  • News18
  • Last Updated: September 12, 2019, 10:47 AM IST
  • Share this:
ಬೆಂಗಳೂರು(ಸೆ.09): ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಊಬರ್​​ ಸಂಸ್ಥೆಯು, ಸುಮಾರು 435ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಿತ್ತೊಗೆದಿದೆ. "2018-19ರಲ್ಲಿ 5.2 ಮಿಲಿಯನ್​​ನಷ್ಟು ಆದಾಯ ಕಡಿಮೆಯಾಗಿದ್ದು, ಊಬರ್​​​ ಕಂಪನಿ ನಷ್ಟದಲ್ಲಿದೆ. ಹೀಗಾಗಿ ಇಂಜಿನಿಯರಿಂಗ್​​ ವಿಭಾಗದ ಕೆಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ" ಎಂದು ಊಬರ್​​ ಕಂಪನಿಯ ಮುಖ್ಯ ಕಾರ್ಯದರ್ಶಿ ದಾರಾ ಕೋಸ್ರೋಶಾ ತಿಳಿಸಿದ್ದಾರೆ.

ಕಳೆದ ವರ್ಷ ಕಂಪನಿಗೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ. ಹೀಗಾಗಿ ಒಂದಷ್ಟು ಜನರನ್ನು ಕೆಲಸದಿಂದ ತೆಗೆಯಬೇಕಾಯ್ತು. ಸದ್ಯ ನಮ್ಮಲ್ಲಿ 27,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ಧಾರೆ. ಇದೀಗ ಊಬರ್​​ ಕಂಪನಿ ಆದಾಯ ಹೆಚ್ಚಿಸಲು ಸಂಸ್ಥೆಯ ಕಾರ್ಯವೈಖರಿ ಬದಲಾಯಿಸಬೇಕಿದೆ ಎನ್ನುತ್ತಾರೆ ಕೋಸ್ರೋಶಾ.

ಕಳೆದ ವರ್ಷ ಉಬರ್‌ ಇಂಡಿಯಾ ಕಂಪನಿಯು 2017-18ರಲ್ಲಿ ತನ್ನ ಆದಾಯವನ್ನು ಶೇ.30ರಷ್ಟು ವೃದ್ಧಿಸಿತ್ತು. ಕಂಪನಿ 2018ರ ಮಾರ್ಚ್‌ ಅಂತ್ಯಕ್ಕೆ ಮುಕ್ತಾಯವಾದ ಆರ್ಥಿಕ ವರ್ಷದಲ್ಲಿ 533 ಕೋಟಿ ರೂ. ಆದಾಯ ಗಳಿಸಿತ್ತು.

ಇದನ್ನೂ ಓದಿ: ಅಖಾಡಕ್ಕೆ ಇಳಿದ ಪೈಲ್ವಾನ್​: ಸುದೀಪ್​ ಅಭಿನಯಕ್ಕೆ ಅಭಿಮಾನಿಗಳು ಫಿದಾ..!

2017-18ರಲ್ಲಿ ಕಂಪನಿ 26.4 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.40 ಏರಿಕೆಯಾಗಿದೆ. ಉಬರ್‌ ಜಾಗತಿಕ ಮಟ್ಟದಲ್ಲಿ 2017-18ರಲ್ಲಿ ಅತ್ಯುತ್ತಮ ಮಟ್ಟದ ಆದಾಯ ಗಳಿಸಿರಲಿಲ್ಲ. ಕಂಪನಿಯ ಸಿಇಒ ಟ್ರೆವಿಸ್‌ ಕಾಲ್ನಿಕ್‌ ಕೂಡ 2017ರಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ಉಬರ್‌ ಇಂಡಿಯಾದ ಸಾಧನೆ ಮಹತ್ವ ಪಡೆದಿದೆ ಎನ್ನಲಾಗಿತ್ತು.

2018-2019ರಲ್ಲಿ ಉಬರ್​​​ ಆದಾಯ ಕಡಿಮೆಯಾಗಿದೆ. ಸ್ವಂತ ಉದ್ಯೋಗ ಮಾಡಬೇಕೆನ್ನುವರಿಗೆ ಊಬರ್ ಕೆಲಸ ನೀಡುತ್ತಿದೆ ಎನ್ನಲಾಗಿತ್ತು. ಸದ್ಯಕ್ಕೀಗ ಅದೇ ಸಂಸ್ಥೆಯೂ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತೊಗೆದಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ-------------
​​
First published: September 12, 2019, 9:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading