• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Inspirational Story: ಕ್ಯಾಬ್‌ ಹತ್ತಿದ ಪ್ಯಾಸೆಂಜರ್‌ಗೆ ಉಬರ್ ಚಾಲಕನಿಂದ ಕಿಡ್ನಿ ದಾನ! ಅಬ್ಬಾ, ಜಗತ್ತಿನಲ್ಲಿ ಇಂಥಾ ವ್ಯಕ್ತಿಗಳೂ ಇರ್ತಾರಾ?

Inspirational Story: ಕ್ಯಾಬ್‌ ಹತ್ತಿದ ಪ್ಯಾಸೆಂಜರ್‌ಗೆ ಉಬರ್ ಚಾಲಕನಿಂದ ಕಿಡ್ನಿ ದಾನ! ಅಬ್ಬಾ, ಜಗತ್ತಿನಲ್ಲಿ ಇಂಥಾ ವ್ಯಕ್ತಿಗಳೂ ಇರ್ತಾರಾ?

ಪ್ರಯಾಣಿಕನಿಗೆ ಕಿಡ್ನಿ ದಾನ ಮಾಡಿದ ಉಬರ್ ಚಾಲಕ

ಪ್ರಯಾಣಿಕನಿಗೆ ಕಿಡ್ನಿ ದಾನ ಮಾಡಿದ ಉಬರ್ ಚಾಲಕ

ಗುಡ್ ನ್ಯೂಸ್ ಮೂವ್‌ಮೆಂಟ್‌ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಟಿಮ್ ಲೆಟ್ಸ್ ಎಂಬ ಉಬರ್ ಚಾಲಕ ತನ್ನ ಕಿಡ್ನಿಯನ್ನು ಬಿಲ್ ಸುಮಿಯೆಲ್ ಎಂಬ 73 ವರ್ಷದ ಪ್ರಯಾಣಿಕನಿಗೆ ದಾನ ಮಾಡಿದ ಮನಮುಟ್ಟುವ ಕಥೆಯನ್ನು ವಿವರಿಸಿದೆ.

  • Share this:

ನ್ಯೂಯಾರ್ಕ್​: ತಾವೂ, ತಮ್ಮ ಕುಟುಂಬ ಚೆನ್ನಾಗಿದ್ದರೆ ಸಾಕು ಎಂಬ ಬಹುತೇಕ ಜನರು ಆಲೋಚಿಸುತ್ತಾರೆ. ಆದರೂ ಅವಾಗವಾಗ ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಮಾನವೀಯತೆ (Humanity) ಮೆರೆದ ಅನೇಕ ಘಟನೆಗಳನ್ನು ನಾವು ಕೇಳಿರುತ್ತೇವೆ. ಆದರೆ ಕಷ್ಟದಲ್ಲಿರುವವರಿಗೆ ಊಟವನ್ನೋ, ಒಂದಷ್ಟು ದುಡ್ಡು ಕೊಡುವುದನ್ನ ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ತನ್ನ ಮೂತ್ರಪಿಂಡವನ್ನೇ (Kidney Donate) ದಾನ ಮಾಡಿದ್ದಾನೆ. ವೃತ್ತಿಯಲ್ಲಿ ಉಬರ್ ಚಾಲಕನಾಗಿ (Uber Driver) ಜೀವನ ಸಾಗಿಸುತ್ತಿರುವ ಮಾಜಿ ಸೈನಿಕನೊಬ್ಬ ತನ್ನ ಕಾರಿಗೆ ಹತ್ತಿದ ವೃದ್ಧರೊಬ್ಬರ ಕಥೆ ಕೇಳಿ ಮೂತ್ರಪಿಂಡವನ್ನು (ಕಿಡ್ನಿ) ದಾನ ಮಾಡಿದ್ದಾರೆ. ಈ ಹೃದಯಸ್ಪರ್ಶಿ ಕಥೆ (Heartwarming Incident) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರ ಹೃದಯವನ್ನು ಗೆದ್ದಿದೆ.


ಡಯಾಲಿಸಿಸ್​ಗೆ ಹೋಗಲು ಕ್ಯಾಬ್ ಹತ್ತಿದ್ದ ವ್ಯಕ್ತಿ


ಗುಡ್ ನ್ಯೂಸ್ ಮೂವ್‌ಮೆಂಟ್‌ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಟಿಮ್ ಲೆಟ್ಸ್ ಎಂಬ ಉಬರ್ ಚಾಲಕ ತನ್ನ ಕಿಡ್ನಿಯನ್ನು ಬಿಲ್ ಸುಮಿಯೆಲ್ ಎಂಬ 73 ವರ್ಷದ ಪ್ರಯಾಣಿಕನಿಗೆ ದಾನ ಮಾಡಿದ ಮನಮುಟ್ಟುವ ಕಥೆಯನ್ನು ವಿವರಿಸಿದೆ.


30 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದ ಸುಮಿಯೆಲ್​ಗೆ ಎರಡೂ ಕಿಡ್ನಿಗಳು ವೈಫಲ್ಯಗೊಂಡಿದ್ದವು. ಹೀಗಾಗಿ ನಿಯಮಿತವಾಗಿ ಡಯಾಲಿಸೀಸ್‌ಗೆ ಒಳಪಡಬೇಕಿತ್ತು. ಅಂದೂ ಕೂಡಾ ಡಯಾಲಿಸೀಸ್‌ಗಾಗಿ ಆಸ್ಪತ್ರೆಗೆ ಹೋಗಲು ಟಿಮ್ ಲೆಟ್ಸ್ ಕ್ಯಾಬ್​ ಹತ್ತಿದ್ದಾರೆ. ಈ ವೇಳೆ ಟಿಮ್ ಲಿಟ್ಸ್ ಪ್ರಯಾಣಿಕನ ಆರೋಗ್ಯ ವಿಚಾರಿಸಿದ್ದು, ಡಯಾಲಿಸೀಸ್ ಸೆಂಟರ್‌ಗೆ ಏಕೆ ಹೋಗುತ್ತಿದ್ದೀರಿ ಎಂದು ವಿಚಾರಿಸಿದ್ದಾರೆ. ಈ ವೇಳೆ ಸುಮಿಯೆಲ್ ತಮ್ಮ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Kidney: ಈ ಗಿಡಮೂಲಿಕೆಗಳನ್ನು ಬಳಸಿ ನಿಮ್ಮ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಿ


ಡೋನರ್​ಗಾಗಿ ಮೂರು ವರ್ಷಗಳಿಂದ ಹುಡುಕಾಟ


ಮೂರು ವರ್ಷಗಳಿಂದ ಸುಮಿಯೆಲ್ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಅವರಿಗೆ ಮೂತ್ರಪಿಂಡ ಕಸಿ ಅಗತ್ಯವಿರುವುದರಿಂದ ಡೋನರ್​ಗೆ ಕಾಯುವ ಬದಲು ಮೂತ್ರಪಿಂಡ ದಾನಿಗಳನ್ನ ತಾವೇ ಸಕ್ರಿಯವಾಗಿ ಹುಡುಕುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ಎಲ್ಲಾ ವಿಚಾರವನ್ನು ಸುಮಿಯೆಲ್ ಕ್ಯಾಬ್​ ಡ್ರೈವರ್​ ಬಳಿ ಹೇಳಿಕೊಂಡಿದ್ದಾರೆ.




ಕಿಡ್ನಿ ನೀಡುವ ಆಫರ್ ನೀಡಿದ ಸುಮಿಯೆಲ್


ಇಬ್ಬರ ನಡುವೆ ಸಂಭಾಷಣೆ ನಡೆಯುತ್ತಿದ್ದಂತೆ ವೃದ್ಧ ತಲುಪಬೇಕಿದ್ದ ಜಾಗಕ್ಕೆ ಕಾರು ಬಂದು ನಿಂತಿದೆ. ವೃದ್ಧನ ಕಥೆ ಕೇಳಿದ ಟಿಮ್ ಲೆಟ್ಸ್​ ತಾನು ತನ್ನ ಕಿಡ್ನಿ ದಾನ ಮಾಡಲು ಸಿದ್ಧ ಎಂದು ಸುಮಿಯೆಲ್​ಗೆ ತಿಳಿಸಿ ತನ್ನ ಮೊಬೈಲ್ ನಂಬರ್ ಹಾಗೂ ಹೆಸರನ್ನು ಕೊಟ್ಟಿದ್ದಾರೆ.


ನಂತರ ಅಸ್ಪತ್ರೆಗೆ ಭೇಟಿ ನೀಡಿ ಲೆಟ್ಸ್​ ಕಿಡ್ನಿ ಸುಮೆಯೆಲ್​ಗೆ ಹೊಂದಿಕೆಯಾಗುವುದೇ ಎಂಬುದನ್ನ ತಿಳಿದುಕೊಳ್ಳಲು ವೈದ್ಯಕೀಯ ಪರೀಕ್ಷೆ ಒಳಗಾಗಿದ್ದಾರೆ. ಹೊಂದಿಕೆಯಾಗುವುದು ಖಚಿತವಾದ ಮೇಲೆ ವೈದ್ಯರು ಕಿಡ್ನಿ ಕಸಿಗೆ ಸಮ್ಮತಿ ನೀಡಿದ್ದಾರೆ. ನಂತರ ಟಿಮ್​ ಲೆಟ್ಸ್​ರ ಒಂದು ಕಿಡ್ನಿಯನ್ನು ಸರ್ಜರಿ ಮೂಲಕ ವೈದ್ಯರು ಸುಮಿಯೆಲ್​ಗೆ​ ಅಳವಡಿಸಿದ್ದಾರೆ.


ಶಾಶ್ವತ ಸ್ನೇಹಿತರಾದ ಚಾಲಕ -ವೃದ್ಧ


ಈ ಘಟನೆ ನಡೆದು ಒಂದು ವರ್ಷ ಕಳೆದಿದೆ. ಸುಮಿಯೆಲ್ ಯಶಸ್ವಿ ಶಸ್ತ್ರಚಿಕಿತ್ಸೆ ನಂತರ ಪ್ರಸ್ತುತ ಡೆಲವೇರ್ ವಿಶ್ವವಿದ್ಯಾಲಯದ ಮೂತ್ರಪಿಂಡದ ಪುನರ್ವಸತಿ ಕೇಂದ್ರದಲ್ಲಿ ಪುನಶ್ಚೇತನದಲ್ಲಿದ್ದಾರೆ. ಲೆಟ್ಸ್ ಕೂಡ ಜರ್ಮನಿಯಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಜೀವ ಉಳಿಸಿದ ಟಿಮ್​ ಲೆಟ್ಸ್​ಗೆ ಸುಮಿಯೆಲ್ ಮತ್ತು ಆತನ ಪತ್ನಿ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ ತಮ್ಮ ಜೀವ ಉಳಿಸಿದ ಲೆಟ್ಸ್​​ರೊಂದಿಗೆ ಇನ್ನೂ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: Kidney Care: ಕಿಡ್ನಿಗೆ ಯಾವುದೇ ಸಮಸ್ಯೆ ಬರಬಾರದು ಅಂದ್ರೆ ಈ 7 ಅಂಶಗಳನ್ನು ಪಾಲಿಸಿ, ಆರೋಗ್ಯವಾಗಿರಿ


ಸುಮಿಯೆಲ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ ಇಬ್ಬರು ಆಸ್ಪತ್ರೆಯಲ್ಲಿರುವ ಫೋಟೋವನ್ನು ಗುಡ್ ನ್ಯೂಸ್ ಮೂವ್‌ಮೆಂಟ್ ಸಹ ಹಂಚಿಕೊಂಡಿದೆ.


ಗುರುತು ಪರಿಚಯವಿಲ್ಲದವರ ಜೊತೆ ಮಾತನಾಡಲು ಹಿಂದೆ ಮುಂದೆ ನೋಡುವ ಈ ಕಾಲದಲ್ಲಿ ಆನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ತಾನಾಗಿಯೇ ಕಿಡ್ನಿಯನ್ನು ದಾನ ಮಾಡಿರುವುದನ್ನು ಸಾಮಾಜಿಕ ಜಾಲಾತಾಣದಲ್ಲಿ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

top videos
    First published: