ನಾಳೆಯಿಂದ ಭಾರತೀಯರು UAEಗೆ ಪ್ರಯಾಣಿಸಬಹುದು; 2 ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಅವಕಾಶ

ಅಬುಧಾಬಿಯಲ್ಲಿ ಮಾಲ್​ಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ಹಾಗೂ ಲಸಿಕೆ ಪಡೆದವರಿಗೆ UAEಯಲ್ಲಿ ಒದಗಿಸಲಾದ ಪ್ರಯೋಜನಗಳನ್ನು ಪಡೆಯಲು ಬಯಸುವವರು ತಮ್ಮ ಲಸಿಕೆಯ ಸ್ಟೇಟಸ್​​ನ್ನು ICA ಪ್ಲಾಟ್​ಫಾರ್ಮ್​ ಅಥವಾ Al Hosn ಅಪ್ಲಿಕೇಶನ್ ಮೂಲಕ ನೊಂದಾಯಿಸಿಕೊಳ್ಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೋವಿಡ್ ಕಾರಣದಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್​(UAE)/ ಸಂಯುಕ್ತ ಅರಬ್ ಸಂಸ್ಥಾನವು ಭಾರತೀಯರಿಗೆ ವಿಧಿಸಿದ್ಧ ನಿರ್ಬಂಧವನ್ನು ಸದ್ಯ ತೆಗೆದು ಹಾಕಿದೆ. ನಾಳೆಯಿಂದ ಅಂದರೆ ಸೆ.12ರಿಂದ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿರುವ ಲಸಿಕೆಯ ಎಡರೂ ಡೋಸ್ ಪಡೆದ ಭಾರತೀಯರು ಸಂಯುಕ್ತ ಅರಬ್ ಸಂಸ್ಥಾನಕ್ಕೆ ಪ್ರಯಾಣಿಸಬಹುದಾಗಿದೆ. ಈವರೆಗೆ ಭಾರತೀಯರಿಗೆ UAEಗೆ ಪ್ರಯಾಣಿಸಲು ನಿರ್ಬಂಧ ಇತ್ತು. ಈಗ ಎರಡೂ ಡೋಸ್ ಲಸಿಕೆ ಪಡೆದಿದ್ದರೆ, ಆರಾಮಾಗಿ ಅರಬ್ ರಾಷ್ಟ್ರಗಳಿಗೆ ತೆರಳಬಹುದಾಗಿದೆ. ಭಾರತದ ಜೊತೆಗೆ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ವಿಯೆಟ್ನಾಂ, ನಮೀಬಿಯಾ, ಜಾಂಬಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಉಗಾಂಡ, ಸಿರ್ರಾ ಲಿಯೋನ್, ಲಿಬೇರಿಯಾ, ದಕ್ಷಿಣ ಆಫ್ರಿಕಾ, ನೈಜೀರಿಯಾ ಮತ್ತು ಅಪ್ಘಾನಿಸ್ತಾದ ಪ್ರಜೆಗಳೂ ಸಹ ಸೆ.12ರಿಂದ UAEಗೆ ಪ್ರಯಾಣ ಬೆಳೆಸಬಹುದಾಗಿದೆ.

  ಕಳೆದ ವಾರ, ಸಂಪೂರ್ಣ ಲಸಿಕೆ ಪಡೆದ ಪ್ರಯಾಣಿಕರಿಗೆ ಟೂರಿಸ್ಟ್​ ವೀಸಾಗೆ ಅರ್ಜಿ ಸಲ್ಲಿಸಬಹುದು ಎಂದು UAE ಹೇಳಿತ್ತು. ದಿನೇ ದಿನೇ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆ ಈ ನಿರ್ಧಾರ ತೆಗೆದುಕೊಂಡಿದೆ. ಕಳೆದ ವಾರದಿಂದ 1 ಸಾವಿರಕ್ಕಿಂತ ಕಡಿಮೆ ಕೊರೋನಾ ಕೇಸ್​ಗಳು ಪತ್ತೆಯಾಗುತ್ತಿವೆ. ಲಸಿಕೆದ ದರವೂ ಸಹ ಶೇ.92ರಷ್ಟಿದ್ದು, ಅತ್ಯುನ್ನತ ಮಟ್ಟದಲ್ಲಿದೆ. ಇಡೀ ವಿಶ್ವದಲ್ಲಿ ಮಾಲ್ಟಾ ದೇಶದ ಬಳಿಕ ಅತೀ ಹೆಚ್ಚು ವ್ಯಾಕ್ಸಿನ್ ಹಾಕಿರುವುದು UAE ರಾಷ್ಟ್ರದಲ್ಲೇ.

  ಇದನ್ನೂ ಓದಿ:Gold Price Today: ಹಬ್ಬದ ಬಳಿಕ ಏರಿಕೆ ಕಂಡ ಚಿನ್ನ; ಬೆಂಗಳೂರಿನಲ್ಲಿ ಇಂದಿನ ರೇಟ್ ಹೀಗಿದೆ ನೋಡಿ

  ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಮತ್ತು ಸಿಟಿಜನ್‌ಶಿಪ್ (ICA) ಮತ್ತು ರಾಷ್ಟ್ರೀಯ ತುರ್ತುಸ್ಥಿತಿ ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ (NCEMA) ಜಂಟಿಯಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಅನುಮೋದಿತ ಲಸಿಕೆಗಳನ್ನು ಪಡೆದ ಎಲ್ಲಾ ದೇಶಗಳ ಜನರಿಗೆ ಟೂರಿಸ್ಟ್​ ವೀಸಾಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಘೋಷಿಸಿತು.

  ಅಬುಧಾಬಿಯಲ್ಲಿ ಮಾಲ್​ಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ಹಾಗೂ ಲಸಿಕೆ ಪಡೆದವರಿಗೆ UAEಯಲ್ಲಿ ಒದಗಿಸಲಾದ ಪ್ರಯೋಜನಗಳನ್ನು ಪಡೆಯಲು ಬಯಸುವವರು ತಮ್ಮ ಲಸಿಕೆಯ ಸ್ಟೇಟಸ್​​ನ್ನು ICA ಪ್ಲಾಟ್​ಫಾರ್ಮ್​ ಅಥವಾ Al Hosn ಅಪ್ಲಿಕೇಶನ್ ಮೂಲಕ ನೊಂದಾಯಿಸಿಕೊಳ್ಳಬಹುದು.

  ಜೂನ್ 3 ರ ಹೊತ್ತಿಗೆ, WHO ಅನುಮೋದಿಸಿದ ಕೋವಿಡ್ -19 ಲಸಿಕೆಗಳಲ್ಲಿ ಆಸ್ಟ್ರಾಜೆನೆಕಾ/ಆಕ್ಸ್‌ಫರ್ಡ್/ಕೋವಿಶೀಲ್ಡ್, ಜಾನ್ಸನ್ ಮತ್ತು ಜಾನ್ಸನ್, ಮಾಡರ್ನಾ, ಫೈಜರ್/ಬಯೋಟೆಕ್, ಸಿನೋಫಾರ್ಮ್ ಮತ್ತು ಸಿನೋವಾಕ್ ಸೇರಿವೆ. "ಪ್ರವಾಸಿ ವೀಸಾಗಳಲ್ಲಿ ಬರುವ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಆರ್​ಟಿ- ಪಿಸಿಆರ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು" ಎಂದು UAEನ ಅಧಿಕೃತ ನ್ಯೂಸ್ ಏಜೆನ್ಸಿ WAM ಹೇಳಿದೆ.

  ಇದನ್ನೂ ಓದಿ:Belagavi: MESಗೆ ಮತ್ತೊಂದು ಶಾಕ್ ಕೊಡಲು ಬಿಜೆಪಿ ಪ್ಲ್ಯಾನ್; ಮೇಯರ್, ಉಪಮೇಯರ್ ಆಯ್ಕೆಯಲ್ಲಿ ಜಾಣ ನಡೆ!

  ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
  Published by:Latha CG
  First published: