ಕೇರಳ ಸಂತ್ರಸ್ತರ ಬದುಕು ಕಟ್ಟಿಕೊಳ್ಳಲು 700 ಕೋಟಿ ನೆರವು ನೀಡಿದ ಅರಬ್​ ಸಂಯುಕ್ತ ಸಂಸ್ಥಾನ

news18
Updated:August 21, 2018, 12:47 PM IST
ಕೇರಳ ಸಂತ್ರಸ್ತರ ಬದುಕು ಕಟ್ಟಿಕೊಳ್ಳಲು 700 ಕೋಟಿ ನೆರವು ನೀಡಿದ ಅರಬ್​ ಸಂಯುಕ್ತ ಸಂಸ್ಥಾನ
news18
Updated: August 21, 2018, 12:47 PM IST
ನ್ಯೂಸ್​ 18

ಕೇರಳ (ಆ.21): ಪ್ರವಾಹಕ್ಕೆ ಒಳಗಾಗಿರುವ ದೇವರ ನಾಡಿನ ಜನರ ಬದುಕು ಕಟ್ಟಿಕೊಳ್ಳಲು ಅರಬ್​ ಸಂಯುಕ್ತ ಸಂಸ್ಥಾನ 700 ಕೋಟಿ ನೆರವನ್ನು ನೀಡಿದೆ

ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ದೇಶ- ವಿದೇಶದಿಂದ ಸಹಾಯದ ಹೊಳೆ ಹರಿದು ಬರುತ್ತಿದ್ದು, ನೆರವು ನೀಡುತ್ತಿರುವರಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್​ ಧನ್ಯವಾದ ತಿಳಿಸಿದ್ದಾರೆ,

ರಾಜ್ಯಕ್ಕೆ ಸಹಾಯ ನೀಡಲು ಹಲವರು ರಾಜ್ಯಗಳಿಂದ ಮುಂದೆ ಬರುತ್ತಿದ್ದಾರೆ. ವಿದೇಶಗಳು ತಮ್ಮ ನೆರವನ್ನು ನೀಡಿ ನೋವಿಗೆ ಸ್ಪಂದಿಸಿದ್ದಾರೆ, ಅರಬ್​ ಮತ್ತು ಗಲ್ಫ್​ ರಾಷ್ಟ್ರಗಳು ಪರಿಹಾರ ನಿಧಿಯನ್ನು ಒದಗಿಸುತ್ತಿದ್ದಾರೆ. ಅವರ ನೆರವಿಗೆ ನಾವು ಅಭಾರಿಗಳಾಗಿದೆ ಎಂದು ವಿಜಯನ್​ ತಿಳಿಸಿದರು.

ಈ ಸಂಬಂಧ  ಅಬುದಾಬಿ  ರಾಜ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿದ್ದು  ಪರಿಹಾರ ಕಾರ್ಯಕ್ಕೆ ಮುಂದಾಗಲು ಹಣದ ನೆರವು ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಮಳೆಯ ನೆರೆ ಕಡಿಮೆಯಾದರೂ ಮನೆಗಳಲ್ಲಿ ಜನರು ವಾಸಿಸಲು ಸಾಧ್ಯವಿಲ್ಲ. ಮನೆಗಳ ಸ್ವಚ್ಛಗೊಳಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ, ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಪರಿಶೀಲಿಸಲಾಗುತ್ತಿದೆ. ಮನೆಗಳಲ್ಲಿ ಅಪಾಯಕಾರಿ ಹಾವುಗಳು ಸೇರಿಕೊಂಡಿದ್ದು, ಇಲ್ಲಿ ಯಂತ್ರಗಳು ಕೆಲಸ ಮಾಡುವುದು ಕೂಡ ಅಸಾಧ್ಯವಾಗಿದೆ, ಜನರು ಮನೆಗೆ ಮರಳುವ ಮುನ್ನ ಸಾಕಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ, ಹಾನಿಗೊಳಗಾದ ಮನೆಗಳಿಗೆ ಕುಟುಂಬಗಳು ಮರಳುವುದು ಕೂಡ ಉತ್ತಮವಲ್ಲ ಎಂದು ಸಲಹೆ ನೀಡಿದರು.
Loading...

ಮಳೆ ಹಾನಿಗೊಳಗಾಗಿರುವ ಕೇರಳದಲ್ಲಿ ಯಾವ ರೀತಿ ಪರಿಹಾರ ಕ್ರಮ ನಡೆಸಬಹುದು ಎಂಬ ಕುರಿತು ಚರ್ಚಿಸಲು ಕೇರಳ ಸರ್ಕಾರ ಸರ್ವಪಕ್ಷ ಸಭೆಯನ್ನು ಮಂಗಳವಾರ ಸಂಜೆ 4ಕ್ಕೆ ಕರೆದಿದೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...