• Home
  • »
  • News
  • »
  • national-international
  • »
  • Passport Name: ಪಾಸ್​ಪೋರ್ಟ್​ನಲ್ಲಿ ಒಂದೇ ಹೆಸರನ್ನು ಹೊಂದಿದ್ದೀರಾ? ಈ ದೇಶಕ್ಕೆ ಹೋಗೋ ಮುನ್ನ ಯೋಚಿಸಿ!

Passport Name: ಪಾಸ್​ಪೋರ್ಟ್​ನಲ್ಲಿ ಒಂದೇ ಹೆಸರನ್ನು ಹೊಂದಿದ್ದೀರಾ? ಈ ದೇಶಕ್ಕೆ ಹೋಗೋ ಮುನ್ನ ಯೋಚಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನವೆಂಬರ್ 21 ರಂದು ಈ ಬಗ್ಗೆ ಏರ್ ಇಂಡಿಯಾ ಹಾಗೂ ಏಐ ಎಕ್ಸ್ ಪ್ರೆಸ್ ಪ್ರಕಟಣೆಯೊಂದನ್ನು ಹೊರಡಿಸಿದ್ದು ಅದರ ಶೀರ್ಷಿಕೆಯನ್ನು "ಯುಎಇಗೆ ತೆರಳುವಾಗ ಪಾಸ್ಪೋರ್ಟ್​ನಲ್ಲಿ ಹೆಸರು ಬರಬೇಕಾಗಿರುವ ಬಗೆ" ಎಂಬುದಾಗಿ ನೀಡಿದೆ.

  • Share this:

ನಾವು ಯಾವುದಾದರೂ ಅರ್ಜಿಯಲ್ಲಿ ಅಥವಾ ಸಂದರ್ಶನದಲ್ಲಿ ನಮ್ಮ ಹೆಸರನ್ನು ಹೇಳುವಾಗ ಸಾಮಾನ್ಯವಾಗಿ ನಮ್ಮ ಪೂರ್ಣ ಹೆಸರನ್ನು (Complete Name)  ಬರೆಯುತ್ತೇವೆ ಅಥವಾ ಹೇಳುತ್ತೇವೆ. ಒಂದೇ ಹೆಸರಿರುವ ವ್ಯಕ್ತಿಗಳು ಅನೇಕರಿರಬಹುದು ಆದರೆ ಪೂರ್ಣ ಹೆಸರಿನ ಮೂಲಕ ಒಬ್ಬ ನಿರ್ದಿಷ್ಟ ವ್ಯಕ್ತಿ ಇತನೇ ಎಂದು ಹೇಳಬಹುದು. ಹಾಗಾಗಿ, ಪೂರ್ಣ ಹೆಸರು ಅಂದರೆ ನಿಮ್ಮ ಹೆಸರಿನ ಜೊತೆ ತಂದೆಯ ಹೆಸರು (Father Name) ಹಾಗೂ ಇದ್ದರೆ ಅಡ್ಡ ಹೆಸರನ್ನೂ ಸಹ ಹೇಳುವುದು ಪ್ರಯೋಜನಕಾರಿಯಾಗಿರುತ್ತದೆ. ಸದ್ಯ ಯಾಕಪ್ಪಾ ಈ ವಿಷಯವೆಂದರೆ ಈ ಹೆಸರು (Name) ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ತೋರಿಸಲು ಈ ಒಂದು ಸುದ್ದಿ ಸಾಕ್ಷಿಯಾಗಿದೆ ಅಂತ ಹೇಳಬಹುದು.


ಏರ್ ಇಂಡಿಯಾ ಹಾಗೂ ಏಐ ಎಕ್ಸ್​ಪ್ರೆಸ್ ಇತ್ತೀಚೆಗೆ ಬಿಡುಗಡೆ ಮಾಡಿರುವ ತನ್ನ ಸಲಹಾಸೂಚಿಯಲ್ಲಿ ಇನ್ನು ಮುಂದೆ ಏಕನಾಮವನ್ನು ಅಥವಾ ಒಂದೇ ಹೆಸರನ್ನು (ಕೇವಲ ಒಂದು ಪದದ ತಮ್ಮ ಹೆಸರು ಮಾತ್ರ) ಹೊಂದಿರುವ ಪ್ರಯಾಣಿಕರಿಗೆ ಯುಎಇ ತನ್ನಲ್ಲಿ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಹೇಳಿದೆ. ಈ ಹೇಳಿಕೆಯನ್ನು ಏಐ ಇತ್ತೀಚೆಗೆ ಯುಎಇ ಜಾರಿ ಮಾಡಿರುವ ತನ್ನ ಮಾರ್ಗದರ್ಶಿಗಳಿಗನುಗುಣವಾಗಿ ನೀಡಿರುವುದಾಗಿ ತಿಳಿದುಬಂದಿದೆ.


ಯುಎಇಗೆ ಹೋಗ್ಬೇಕಾದ್ರೆ ಹೆಸರು ಹೀಗಿರಬಾರದು
ನವೆಂಬರ್ 21 ರಂದು ಈ ಬಗ್ಗೆ ಏರ್ ಇಂಡಿಯಾ ಹಾಗೂ ಏಐ ಎಕ್ಸ್ ಪ್ರೆಸ್ ಪ್ರಕಟಣೆಯೊಂದನ್ನು ಹೊರಡಿಸಿದ್ದು ಅದರ ಶೀರ್ಷಿಕೆಯನ್ನು "ಯುಎಇಗೆ ತೆರಳುವಾಗ ಪಾಸ್ಪೋರ್ಟ್​ನಲ್ಲಿ ಹೆಸರು ಬರಬೇಕಾಗಿರುವ ಬಗೆ" ಎಂಬುದಾಗಿ ನೀಡಿದೆ.


ಒಂದೇ ಪದದ ಹೆಸರಿದ್ದರೆ ಏನಾಗುತ್ತೆ?
ಈ ಪ್ರಕಟಣೆಯ ಅನುಸಾರ, "ಯುಎಇಯ ನ್ಯಾಷನಲ್ ಅಡ್ವಾನ್ಸ್ ಸೆಂಟರ್, ಯುಎಇ ಪ್ರವೇಶಿಸ ಬಯಸುವ ಪ್ರಯಾಣಿಕರಿಗೆ ತಕ್ಷಣಕ್ಕೆ ಲಾಗು ಆಗುವಂತೆ ಈ ಕೆಳಗಿನ ಮಾರ್ಗಸೂಚಿಯನ್ನು ಜಾರಿ ಮಾಡಿರುತ್ತದೆ. ಯಾವುದೇ ವ್ಯಕ್ತಿ ತಮ್ಮ ಪಾಸ್ಪೋರ್ಟಿನಲ್ಲಿ ಕೇವಲ ಏಕಪದದ ಹೆಸರನ್ನು ಹೊಂದಿದ್ದರೆ (ಅದು ವ್ಯಕ್ತಿಯ ಹೆಸರಾಗಿರಬಹುದು ಇಲ್ಲವೆ ಅಡ್ಡಹೆಸರಾಗಿರಬಹುದು) ಆ ವ್ಯಕ್ತಿಯನ್ನು ಯುಎಇಯ ವಲಸೆ ಇಲಾಖೆಯು ಅನರ್ಹ ಅಥವಾ INAD ಎಂದು ಪರಿಗಣಿಸುತ್ತದೆ ಹಾಗೂ ಅವರು ಅವರನ್ನು ಯುಎಇಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ" ಎಂದು ಉಲ್ಲೇಖಿಸಲಾಗಿದೆ.


ಮಾರ್ಗಸೂಚಿ ಬಿಡುಗಡೆ
ಇನ್ನು INAD ಎಂಬುದು ವೈಮಾನಿಕ ಸೇವೆಯಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಪದವಾಗಿದ್ದು ಇದು ಇನಡ್ಮಿಸ್ಸಿಬಲ್ ಪ್ಯಾಸೆಂಜರ್ ಎಂಬ ಪದದ ಸಂಕ್ಷಿಪ್ತ ರೂಪವಾಗಿದೆ. ಅಂದರೆ ಇನಾಡ್ ಎಂದು ಪರಿಗಣಿಸಲ್ಪಡುವ ವ್ಯಕ್ತಿಗಳಿಗೆ ಆ ದೇಶದ ಒಳಗೆ ಪ್ರವೇಶಿಸಲು ಅನುಮತಿ ಇರುವುದಿಲ್ಲ ಎಂಬರ್ಥವನ್ನು ಇದು ತೋರಿಸುತ್ತದೆ. ಇಂತಹ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ಪುನಃ ಏರ್ಲೈನ್ ಸಂಸ್ಥೆಯೇ ಮರಳಿ ಅವನು ಬಂದಿದ್ದ ತವರು ದೇಶಕ್ಕೆ ಕೊಂಡೊಯ್ಯಬೇಕಾಗಿರುತ್ತದೆ. ಹಾಗಾಗಿ, ಇದನ್ನು ತಪ್ಪಿಸುವ ಉದ್ದೇಶದಿಂದಾಗಿಯೇ ಏರ್ ಇಂಡಿಯಾ ಪ್ರಯಾಣಿಕರಿಗೆ ಅರಿವಾಗುವಂತೆ ತನ್ನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ ಎಂದು ಹೇಳಬಹುದು.


ಇದನ್ನೂ ಓದಿ: Mobile Tower Theft: 19 ಲಕ್ಷ ಬೆಲೆಬಾಳುವ ಮೊಬೈಲ್ ಟವರ್ ಕದ್ದೊಯ್ದ ಕಳ್ಳರು!


ಇಲ್ಲಿದೆ ಸರಳ ಉದಾಹರಣೆ
ಈ ಬಗ್ಗೆ ಒಂದು ಉದಾಹರಣೆಯನ್ನೂ ಸಹ ಮಾರ್ಗಸೂಚಿಯಲ್ಲಿ ಏರ್ ಇಂಡಿಯಾ ಉಲ್ಲೇಖಿಸಿದೆ. ಇದನ್ನು ಇನ್ನಷ್ಟು ಸರಳವಾಗಿ ತಿಳಿಯಬೇಕೆಂದರೆ ಈ ರೀತಿ ಕಲ್ಪಿಸಿಕೊಳ್ಳಿ. ಒಬ್ಬ ವ್ಯಕ್ತಿಯ ಹೆಸರು ಪಾಸ್ಪೋರ್ಟಿನಲ್ಲಿ ಕೇವಲ ಸಂದೀಪ್ ಎಂಬುದಾಗಿ ನಮೂದಿತವಾಗಿರುತ್ತದೆ. ಅದು ಅವರ ಹೆಸರಾಗಿರಬಹುದು ಅಥವಾ ಸರ್ನೇಮ್ ಅಷ್ಟೇ ಸಹ ಇರಬಹುದು. ಈಗ ಸಂದೀಪ ಅವರಿಗೆ ಯುಎಇಯ ವೀಸಾ ದೊರೆಯುವುದಿಲ್ಲ ಅಥವಾ ಈ ಹಿಂದೆಯೇ ಸಂದೀಪ ಅವರಿಗೆ ವೀಸಾ ದೊರೆತಿದ್ದು ಒಂದು ವೇಳೆ ಪ್ರಸ್ತುತ ಸಂದೀಪ್ ಯುಎಇಗೆ ಪ್ರಯಾಣಿಸಿದರೆ ಅವರನ್ನು ಯುಎಇ ವಿಮಾನ ನಿಲ್ದಾಣದಲ್ಲೇ INAD ಎಂದು ಪರಿಗಣಿಸಲಾಗುತ್ತದೆ. ಮರಳಿ ಅವರ ದೇಶಕ್ಕೆ ಕಳುಹಿಸಲಾಗುತ್ತದೆ.


ಹೀಗಾದರೆ ಪರಿಗಣಿಸಲ್ಲ
ಇನ್ನು ಯಾರನ್ನು INAD ಎಂದು ಪರಿಗಣಿಸಲಾಗುವುದಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಪ್ರಕಟಣೆಯಲ್ಲಿ ಈ ರೀತಿ ಉದಾಹರಿಸಲಾಗಿದೆ. ಒಂದು ವೇಳೆ ಸಂದೀಪ್ ಕುಮಾರ್ ಎಂಬ ಮೊದಲ ಹೆಸರಿದ್ದವರು ಅಥವಾ ಸಂದೀಪ್ ಕುಮಾರ್ ಎಂದೇ ಅಡ್ಡಹೆಸರಿದ್ದವರು ಇಲ್ಲವೇ ಸಂದೀಪ್ ಎಂಬ ಮೊದಲ ಹೆಸರು ಹಾಗೂ ಕುಮಾರ್ ಎಂಬ ಸರ್ನೇಮ್ ಇದ್ದವರು INAD ಎಂದು ಪರಿಗಣಿಸಲಾಗುವುದಿಲ್ಲ ಎಂದು ವಿವರಿಸಲಾಗಿದೆ.


ಇದನ್ನೂ ಓದಿ: Zomato: ಫುಡ್ ಡೆಲಿವರಿ ಸೇವೆ ಸ್ಥಗಿತಗೊಳಿಸಿದ ಝೊಮ್ಯಾಟೊ- ಕಾರಣ ಇಲ್ಲಿದೆ


ಇದಲ್ಲದೆ, ಪ್ರಸ್ತುತ ಈ ನಿಯಮವು ಭೇಟಿಯ ವಿಸಾ/ ಉದ್ಯೋಗದ ವಿಸಾ, ತಾತ್ಕಾಲಿಕ ವಿಸಾ ಹೊಂದಿರುವವರಿಗೆ ಮಾತ್ರವೇ ಅನ್ವಯವಾಗಲಿದ್ದು ಯುಎಇ ರೆಸಿಡೆಂಟ್ ಕಾರ್ಡ್ ಹೋಲ್ಡರ್​ಗಳಿಗೆ ಈ ನಿಯಮ ಲಾಗು ಆಗುವುದಿಲ್ಲವೆಂದು ಸಹ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು