ಗೋರಕ್ಷಕರ ಗುಂಪಿನಿಂದ ಪೆಹ್ಲೂ ಖಾನ್ ಹತ್ಯೆ ಪ್ರಕರಣ: ಎಲ್ಲಾ 6 ಆರೋಪಿಗಳೂ ಖುಲಾಸೆ

2017ರ ಏಪ್ರಿಲ್ ತಿಂಗಳಲ್ಲಿ ನಡೆದ ಘಟನೆಯಲ್ಲಿ ಗೋರಕ್ಷಕರ ಗುಂಪೊಂದು ಪೆಹ್ಲೂ ಖಾನ್ ಮೇಲೆ ಹಲ್ಲೆ ಮಾಡಿ ಹತ್ಯೆಗೈದಿತ್ತು. ಆದರೆ, ಸಾಕ್ಷ್ಯಾಧಾರದ ಕೊರತೆಯಿಂದ ರಾಜಸ್ಥಾನದ ಕೋರ್ಟ್ ಈ ಆರೋಪಿಗಳನ್ನು ಖುಲಾಸೆಗೊಳಿಸಿದೆ.

news18
Updated:August 14, 2019, 7:07 PM IST
ಗೋರಕ್ಷಕರ ಗುಂಪಿನಿಂದ ಪೆಹ್ಲೂ ಖಾನ್ ಹತ್ಯೆ ಪ್ರಕರಣ: ಎಲ್ಲಾ 6 ಆರೋಪಿಗಳೂ ಖುಲಾಸೆ
ಪೆಹ್ಲು ಖಾನ್
  • News18
  • Last Updated: August 14, 2019, 7:07 PM IST
  • Share this:
ನವದೆಹಲಿ(ಆ. 14): ಎರಡು ವರ್ಷಗಳ ಹಿಂದೆ ರಾಜಸ್ಥಾನದ ಆಲ್ವಾರ್​ನಲ್ಲಿ ಸಂಭವಿಸಿದ ಗುಂಪು ಹಲ್ಲೆಯಲ್ಲಿ 55 ವರ್ಷದ ಪೆಹ್ಲೂ ಖಾನ್ ಹತ್ಯೆಯಾಗಿದ್ದರು. ಗೋ ಕಳ್ಳಸಾಗಾಣಿಕೆ ಮಾಡುತ್ತಿದ್ದನೆಂದು ಆರೋಪಿಸಿ ಗೋರಕ್ಷಕರಿಂದ ಈತನ ಹತ್ಯೆಯಾಗಿತ್ತೆಂಬ ಆರೋಪವಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ 6 ಆರೋಪಿಗಳನ್ನೂ ರಾಜಸ್ಥಾನದ ಕೋರ್ಟ್ ಖುಲಾಸೆಗೊಳಿಸಿದೆ. ಆರೋಪಕ್ಕೆ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಹೇಳಿ ಆಲ್ವಾರ್​ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ.

ಪೆಹ್ಲೂ ಖಾನ್ ಮೇಲೆ ಹಲ್ಲೆಯಾಗಿದ್ದ ವಿಡಿಯೋ ಚಿತ್ರೀಕರಣವನ್ನು ನ್ಯಾಯಾಲಯಕ್ಕೆ ತೋರಿಸಲಾಗಿತ್ತು. ಹಾಗೆಯೇ, ಈ ಘಟನೆಗೆ ಪೆಹ್ಲೂ ಖಾನ್​ರ ಇಬ್ಬರು ಮಕ್ಕಳು ಸೇರಿದಂತೆ 40ಕ್ಕೂ ಹೆಚ್ಚು ಮಂದಿಯ ಸಾಕ್ಷ್ಯವನ್ನೂ ಒದಗಿಸಲಾಗಿತ್ತು. ಆದರೆ, ಈ ಸಾಕ್ಷ್ಯಾಧಾರಗಳು ಸಮರ್ಪಕವಾಗಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿಗಳೂ ಖುಲಾಸೆಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಭಾರತ, ಚೀನಾ ಅಭಿವೃದ್ಧಿಶೀಲ ದೇಶಗಳಲ್ಲ, ಇನ್ನು ಮುಂದೆ ಯಾವುದೇ ಪ್ರಯೋಜನ ಪಡೆಯಲು ಬಿಡುವುದಿಲ್ಲ: ಟ್ರಂಪ್

ಹರಿಯಾಣದ ನುಹ್ ಗ್ರಾಮದವರಾಗಿದ್ದ 55 ವರ್ಷದ ಪೆಹ್ಲೂ ಖಾನ್ ಅವರು ರಂಜಾನ್ ಹಬ್ಬಕ್ಕೆ ಹಾಲಿನ ಪೂರೈಕೆಗಾಗಿ ಹಸುಗಳನ್ನ ಖರೀದಿಸುತ್ತಾರೆ. ಅವುಗಳನ್ನು ಸಾಗಿಸುವಾಗ ದೆಹಲಿ-ಆಲ್ವಾರ್ ಹೆದ್ದಾರಿಯಲ್ಲಿ 2017ರ ಏಪ್ರಿಲ್ 1ರಂದು ಗೋರಕ್ಷಕರ ಗುಂಪೊಂದು ಅಡ್ಡಗಟ್ಟುತ್ತದೆ. ತನ್ನ ಬಳಿ ಇರುವ ದಾಖಲೆಗಳನ್ನು ತೋರಿಸಿದರೂ ಕಿವಿಗೊಡದ ಗುಂಪು ಕಬ್ಬಿಣದ ರಾಡ್ ಮತ್ತು ಕೋಲುಗಳಿಂದ ಬಡಿದು ಪೆಹ್ಲೂ ಖಾನ್​ರ ಮೇಲೆ ಹಲ್ಲೆ ಮಾಡುತ್ತದೆ. ಗಂಭೀರವಾಗಿ ಗಾಯಗೊಂಡ ಪೆಹ್ಲೂ ಖಾನ್ ಕೆಲ ದಿನಗಳ ನಂತರ ಸಾವನ್ನಪ್ಪುತ್ತಾರೆ.

ಈ ಪ್ರಕರಣದಲ್ಲಿ ಒಟ್ಟು 9 ಮಂದಿ ಆರೋಪಿಗಳಿದ್ದಾರೆ. ಇವರ ಪೈಕಿ ಒಬ್ಬಾತ ಸಾವನ್ನಪ್ಪಿದ್ದಾನೆ. ಇಬ್ಬರು ಆರೋಪಿಗಳು ಅಪ್ರಾಪ್ತರಾಗಿದ್ದಾರೆ. ಈಗ ಆರು ಮಂದಿಯು ಖುಲಾಸೆಗೊಂಡಿದ್ದಾರೆ. ಇಬ್ಬರು ಅಪ್ರಾಪ್ತರನ್ನು ಬಾಲಾಪರಾಧ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲಾಗಿದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ