ಆಟದ ಮೈದಾನದಲ್ಲಿ ಈ ತಾಯಿ-ಮಗ ಮಾಡಿರೋದನ್ನು ನೋಡಿದರೆ ನೀವು ನಗುವುದು ಗ್ಯಾರಂಟಿ..!

‘ಮೇಜರ್ ಲೀಗ್ ಸಾಕರ್’ ತನ್ನ ಟ್ವಿಟ್ಟರ್ ಖಾತೆಯ ಪುಟದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅದಕ್ಕೆ “ಈ ಪುಟ್ಟ ಮಗು ಮತ್ತು ಆತನ ತಾಯಿ ಫುಟ್‌ಬಾಲ್‌ ಆಟದ ಮೈದಾನಕ್ಕೆ ನುಗ್ಗಿ ತುಂಬಾ ಸಂತೋಷ ಪಟ್ಟಿರಬೇಕು” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಅಮ್ಮ-ಮಗನ ವೈರಲ್ ವಿಡಿಯೋ

ಅಮ್ಮ-ಮಗನ ವೈರಲ್ ವಿಡಿಯೋ

  • Share this:
ಕ್ರಿಕೆಟ್ ಪಂದ್ಯ ಮತ್ತು ಫುಟ್‌ಬಾಲ್‌ ಪಂದ್ಯಗಳು ನಡೆಯುವಾಗ ಪ್ರೇಕ್ಷಕರು ತುಂಬಾ ಗಮನವಿಟ್ಟು ಪಂದ್ಯ ವೀಕ್ಷಿಸುತ್ತಿರುತ್ತಾರೆ. ಆದರೆ. ಕೆಲವು ವ್ಯಕ್ತಿಗಳು ತಮ್ಮ ನೆಚ್ಚಿನ ಆಟಗಾರರಿಗಾಗಿ ಮತ್ತು ನೆಚ್ಚಿನ ತಂಡದ ಅಭಿಮಾನಕ್ಕಾಗಿ ಆಟದ ಮೈದಾನದೊಳಗೆ ಓಡಿ ಬರುತ್ತಾರೆ. ಅವರನ್ನು ಹಿಡಿಯಲು ಮೈದಾನದ ಸಿಬ್ಬಂದಿ ಬರುವುದನ್ನು ಬಹಳ ಸಾರಿ ನಾವು ನೋಡಿದ್ದೇವೆ. ಇನ್ನು,ಕೆಲವು ಸಂದರ್ಭಗಳಲ್ಲಿ ಯಾರೋ ಒಬ್ಬ ಅಭಿಮಾನಿ ಹಠಾತ್ತನೆ ತನ್ನ ನೆಚ್ಚಿನ ಆಟಗಾರನನ್ನು ಹತ್ತಿರದಿಂದ ನೋಡಲು ಮತ್ತು ಆತನಿಗೆ ಅಭಿನಂದನೆ ತಿಳಿಸಲು ಆಟದ ಮೈದಾನಕ್ಕೆ ಓಡಿ ಬಂದಿರುವ ಸಂದರ್ಭಗಳು ಇವೆ.ಇಂತಹ ಘಟನೆಗಳು ಆಟವನ್ನು ತುಂಬಾ ಗಮನವಿಟ್ಟು ನೋಡುವವರಿಗೆ ಕಿರಿಕಿರಿ ಉಂಟು ಮಾಡಿದರೆ, ಕೆಲವರಿಗೆ ಈ ಘಟನೆಗಳು ಮಜಾ ನೀಡುತ್ತವೆ. ಇಲ್ಲಿ ಇಂತಹದೇ ಒಂದು ಘಟನೆಯು ಫುಟ್‌ಬಾಲ್‌ ಆಟದ ಮೈದಾನದಲ್ಲಿ ನಡೆದಿದೆ. ವ್ಯತ್ಯಾಸ ಏನಂದರೆ ಇಲ್ಲಿ ಮೈದಾನಕ್ಕೆ ಓಡಿಬಂದದ್ದು ಪುಟ್ಟ ಮಗು.

ಯುಎಸ್‌ನಲ್ಲಿ ನಡೆದ ಒಂದು ಫುಟ್‌ಬಾಲ್‌ ಪಂದ್ಯದ ಸಮಯದಲ್ಲಿ ಚಿಕ್ಕ ಮಗು ಆಟದ ಮೈದಾನಕ್ಕೆ ಓಡಿ ಬರುತ್ತಾನೆ. ಅದನ್ನು ತಕ್ಷಣವೇ ನೋಡಿದ ಅವನ ತಾಯಿಯು ಅವನ ಹಿಂದೆಯೇ ಓಡಿ ಬಂದು ಮಗುವನ್ನು ಎತ್ತಿಕೊಂಡು ಓಡಿ ಹೋಗುತ್ತಾರೆ. ಮಗುವನ್ನು ಹಿಡಿಯಲು ಓಡಿ ಹೋದ ಅಮ್ಮ ಆಟದ ಮೈದಾನದಲ್ಲಿ ಜಾರಿ ಬಿದ್ದು ಮತ್ತೆ ಎದ್ದು ಆ ಮಗುವನ್ನು ತನ್ನ ಕಂಕುಳಲ್ಲಿ ಎತ್ತಿಕೊಂಡು ಓಡಿ ಹೋಗುತ್ತಾರೆ.‘ಮೇಜರ್ ಲೀಗ್ ಸಾಕರ್’ ತನ್ನ ಟ್ವಿಟ್ಟರ್ ಖಾತೆಯ ಪುಟದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅದಕ್ಕೆ “ಈ ಪುಟ್ಟ ಮಗು ಮತ್ತು ಆತನ ತಾಯಿ ಫುಟ್‌ಬಾಲ್‌ ಆಟದ ಮೈದಾನಕ್ಕೆ ನುಗ್ಗಿ ತುಂಬಾ ಸಂತೋಷ ಪಟ್ಟಿರಬೇಕು” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಹಾರರ್ ಸಿನಿಮಾ ಮಾಡಿದರೆ ಹೀಗೆಲ್ಲಾ ಆಗುತ್ತಾ: ಶಾರ್ದೂಲ ಚಿತ್ರದ ಸಮಯದಲ್ಲಿ ಅದೇನಾಗಿತ್ತು ಗೊತ್ತಾ...?

ಈ ವೀಡಿಯೋ ತುಂಬಾ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ನೋಡಿ ನಕ್ಕಿದ್ದು, ಹೆತ್ತವರು ಮಕ್ಕಳನ್ನು ಗಮನಿಸದೆ ಇದ್ದಾಗ ಈ ರೀತಿಯಲ್ಲಿ ಮಕ್ಕಳು ಓಡಿ ಹೋಗುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. 26 ಸೆಕೆಂಡುಗಳ ಈ ವೀಡಿಯೋವನ್ನು ತುಂಬಾ ಜನರು ವೀಕ್ಷಿಸಿದ್ದು, 3,000 ಕ್ಕೂ ಹೆಚ್ಚು ಜನರು ಇದನ್ನು ಇಷ್ಟ ಪಟ್ಟಿದ್ದಾರೆ.

ಇದನ್ನೂ ಓದಿ: Fighter: ಹೃತಿಕ್​ ರೋಷನ್- ದೀಪಿಕಾ ಪಡುಕೋಣೆ ಅಭಿನಯದ ಫೈಟರ್​ ಸಿನಿಮಾದ ರಿಲೀಸ್​ ದಿನಾಂಕ ಫಿಕ್ಸ್​

ಓಹಿಯೋ ಮೂಲದ 2 ವರ್ಷದ ಮಗುವನ್ನು ಜೈಡೆಕ್ ಕಾರ್ಪೆಂಟರ್ ಮತ್ತು ಆತನ ತಾಯಿಯನ್ನು ಮಾರ್ಗನ್ ಟಕ್ಕರ್ ಎಂದು ಗುರುತಿಸಲಾಗಿದೆ. “ನಾನು ಒಂದು ಕ್ಷಣ ಬೇರೆ ಕಡೆಗೆ ನೋಡಿದೆ. ಅಷ್ಟರಲ್ಲಿಯೇ ನನ್ನ ಪುಟ್ಟ ಮಗ ಸಿನ್ಸಿನಾಟಿ ಎಫ್ ಸಿ ಮತ್ತು ಒರ್ಲ್ಯಾಂಡೊ ಸಿಟಿ ಎಸ್‌ಸಿ ನಡುವೆ ನಡೆಯುತ್ತಿರುವ ಪಂದ್ಯದ ದ್ವಿತೀಯಾರ್ಧದಲ್ಲಿ ಮೈದಾನದಲ್ಲಿ ಓಡಿ ಹೋದನು. ಅವನನ್ನು ನೋಡಿ ನಾನು ವೇಗವಾಗಿ ಓಡಿ ಹೋಗಿ ಎತ್ತಿಕೊಂಡು ಬಂದೆ”ಎಂದು ಟಕ್ಕರ್ ಹೇಳಿದ್ದಾರೆ.

ಇದನ್ನೂ ಓದಿ: Kangana Ranaut: ಲೇಸ್ ಬ್ರಾಲೆಟ್​ ಡ್ರೆಸ್​ನಲ್ಲಿ ಕಂಗನಾ: ಧಾಕಡ್​ ಸಿನಿಮಾದ ಪಾರ್ಟಿ ಫೋಟೋಗಳು ವೈರಲ್​

ನಂತರ ರಗ್ಬಿ ಆಟಗಾರ ಸ್ಯಾಮ್ ಗ್ರೀನ್ ತಾಯಿ ಮಗನ ಈ ಘಟನೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯ ಇನ್ನೂ ಸಂಪೂರ್ಣವಾಗಿ ತಪ್ಪಿಲ್ಲ. ಹೀಗಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಆದ್ದರಿಂದಲೇ ಪ್ರತಿಯೊಬ್ಬರು ಕೋವಿಡ್​​ ನಿಯಮಗಳನ್ನು ತಪ್ಪದೇ ಪಾಲಿಸಬೇಕಾಗಿದೆ. ನಿತ್ಯ ಹೊರಗೆ ಹೋದರೆ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಮನೆಗೆ ಬಂದ ಕೂಡಲೆ ಕೈ ತೊಳೆಯುವುದನ್ನು ಮರೆಯಬೇಡಿ. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Anitha E
First published: