ಇತ್ತೀಚೆಗೆ ಮನಕಲುಕುವ ಘಟನೆಯೊಂದು ನಡೆದಿದೆ. ಮೂಕ ಪ್ರಾಣಿಯ ಮೇಲೆ ಇಬ್ಬರು ಮಹಿಳೆಯರು ದೌರ್ಜನ್ಯ ಎಸಗಿದ ಅಮಾನವೀಯ ಘಟನೆ ಜರುಗಿದೆ.ಇಬ್ಬರು ಅಪರಿಚಿತ ಮಹಿಳೆಯರು ನಾಯಿಯ ಮೇಲೆ ಕ್ರೌರ್ಯ ಎಸಗಿದ್ದು, ಕೇಳುಗರಿಗೆ, ನೋಡುಗರಿಗೆ ಕಣ್ಣೀರು ತರಿಸಿದ್ದು ಮಾತ್ರ ಸತ್ಯ. ಈ ಘಟನಾ ಸಂಬಂಧದ ವಿಡಿಯೋ ವೈರಲ್ ಆಗಿದೆ. ಈಗಾಗಲೇ ಈ ಅಪರಿಚಿತ ಮಹಿಳೆಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಇಬ್ಬರು ಅಪರಿಚಿತ ಮಹಿಳೆಯರು ನಾಯಿಯನ್ನು ದ್ವಿಚಕ್ರ ವಾಹನಕ್ಕೆ ಕಟ್ಟಿಕೊಂಡು ವಾಹನವನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಇವರು ಹೋಗಿರುವ ವೇಗಕ್ಕೆ ನಾಯಿ ಸತ್ತೇ ಹೋಗಿವೆ.
ಈ ಘಟನೆ ಜೂನ್ 20 ರಂದು ಪಂಜಾಬಿನ ಪಟಿಯಾಲಾದಲ್ಲಿ ನಡೆದಿದೆ. ಈ ಕೃತ್ಯದಿಂದ ನಾಯಿಗಳಿಗೆ ತೀವ್ರವಾದ ಪೆಟ್ಟಾಗಿತ್ತು. ಈ ನೋವನ್ನು ತಾಳಲಾರದ ನಾಯಿ ಜೂನ್ 24ರಂದು ಕೊನೆ ಉಸಿರೆಳೆಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ದಿ ಟ್ರಿಬ್ಯೂನ್ ಪ್ರಕಾರ, ನಗರ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 429 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ಕಾಯ್ದೆಯ ಸೆಕ್ಷನ್ 11 (ಪ್ರಾಣಿಗಳನ್ನು ಕ್ರೂರವಾಗಿ ನಡೆಸಿಕೊಳ್ಳುವುದು) ಈ ಮೂಲಕ ಪ್ರಕರಣ ದಾಖಲಿಸಿದ್ದಾರೆ. ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ.
ಪ್ರಾಣಿ ಹಕ್ಕುಗಳ ಎನ್ಜಿಒ ಚೋಪಾಯ ಜೀವ್ ರಾಖಾ ಫೌಂಡೇಶನ್ನಿಂದ ದೂರು ಸ್ವೀಕರಿಸಿದ ನಂತರ ಪೊಲೀಸರು ಪ್ರಾಣಿಗಳ ಮೇಲಿನ ಕ್ರೌರ್ಯ ಪ್ರಕರಣ ದಾಖಲಿಸಿದ್ದಾರೆ.
ಚೋಪಾಯ ಜೀವ್ ರಾಖಾ ಫೌಂಡೇಶನ್ನ ಸಂಸ್ಥಾಪಕ ಸುಷ್ಮಾ ಸಿಂಗ್ ರಾಥೋಡ್ ಅವರ ಪ್ರಕಾರ, “ಆರೋಪಿಗಳನ್ನು ಬಂಧಿಸುವಲ್ಲಿ ಯಾರಾದರೂ ಸಹಾಯ ಮಾಡಿದರೆ ಅವರಿಗೆ ಬಹುಮಾನ ನೀಡಲಾಗುವುದು ಎಂದು ಬಹುಮಾನದ ಮೊತ್ತವನ್ನೂ ಘೋಷಿಸಿದ್ದಾರೆ. ವಿಡಿಯೋದಲ್ಲಿ ನೋಡಿದ ಇಬ್ಬರು ಮಹಿಳೆಯರನ್ನು ಗುರುತಿಸುವಲ್ಲಿ ಆಕೆಯ ಸಂಸ್ಥೆ ಪೊಲೀಸರಿಗೆ ಸಹಾಯ ಮಾಡುತ್ತಿದೆ.
ಸ್ಟೇಷನ್ ಹೌಸ್ ಅಧಿಕಾರಿ ಗುರ್ಪ್ರೀತ್ ಭಿಂದರ್ ಅವರ ಪ್ರಕಾರ, ನಾಯಿಯನ್ನು ದ್ವಿಚಕ್ರ ವಾಹನಕ್ಕೆ ಕಟ್ಟಿ ಎಳೆದುಕೊಂಡು ಹೋಗಿರುವ ಘಟನೆಯ ತನಿಖೆ ನಡೆಯುತ್ತಿದೆ ಮತ್ತು ಈಗಾಗಲೇ ಈ ಘಟನೆಗೆ ಸಂಬಂಧಿಸಿದ ಇಬ್ಬರು ಶಂಕಿತರನ್ನು ಹುಡುಕಲು ಶೋಧ ತಂಡಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಜೂನ್ 18 ರಂದು ಇದೇ ರೀತಿಯ ವಿಡಿಯೋ ಒಂದು ವೈರಲ್ ಆಗಿತ್ತು. ನಾಯಿಯೊಂದು ರಸ್ತೆಯ ಮೇಲೆ ಓಡಾಡಿಕೊಂಡಿರುತ್ತದೆ. ಆಗ ವೇಗವಾಗಿ ಬಂದ ದ್ವಿ ಚಕ್ರ ಸವಾರರೊಬ್ಬರು ನಾಯಿಯ ಮೇಲೆ ಬೈಕ್ ಹತ್ತಿಸಿಕೊಂಡು ಹೋಗಿರುವ ಘಟನೆ ದೆಹಲಿಯಲ್ಲಿ ಆಗ್ರಾದ ಸಿಕಂದರಾ ಪ್ರದೇಶದಲ್ಲಿ ನಡೆದಿತ್ತು. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿಯಲ್ಲಿ ಸೆರೆಯಾಗಿತ್ತು. ಆ ಅಪರಿಚಿತ ವ್ಯಕ್ತಿಯ ಮೇಲೆ ಪೊಲೀಸರು, ವೇಗದ ಚಾಲನೆ ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ