ಕಾಶ್ಮೀರದಲ್ಲಿ ಹಿಮಕಣಿವೆಗೆ ಬಿದ್ದು ಇಬ್ಬರು ಚಾರಣಿಗರ ಸಾವು

news18
Updated:September 8, 2018, 9:16 AM IST
ಕಾಶ್ಮೀರದಲ್ಲಿ ಹಿಮಕಣಿವೆಗೆ ಬಿದ್ದು ಇಬ್ಬರು ಚಾರಣಿಗರ ಸಾವು
  • News18
  • Last Updated: September 8, 2018, 9:16 AM IST
  • Share this:
ನ್ಯೂಸ್​18 ಕನ್ನಡ

ಶ್ರೀನಗರ (ಸೆ. 8): ಹಿಮನದಿಯ ಕಣಿವೆಯೊಳಗೆ ಬಿದ್ದು ಇಬ್ಬರು ಚಾರಣಿಗರು ಮೃತಪಟ್ಟ ಘಟನೆ ಜಮ್ಮು ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯಲ್ಲಿ ನಿನ್ನೆ ನಡೆದಿದೆ.

ಕಾಶ್ಮೀರದ ಕೊಲಹೊಯ್​ ಹಿಮನದಿಯ ಬಳಿ ಚಾರಣಕ್ಕೆ ಹೋಗಿದ್ದ ಚಾರಣಿಗರಲ್ಲಿ ಇಬ್ಬರು ಹಿಮನದಿಯ ಕಣಿವೆಯ ಒಳಗೆ ಜಾರಿ ಮೃತಪಟ್ಟಿದ್ದಾರೆ. ಒಬ್ಬರಿಗೆ ಗಂಭೀರವಾದ ಗಾಯಗಳಾಗಿವೆ. ಘಟನೆ ನಡೆದಿರುವ ಸ್ಥಳಕ್ಕೆ ರಕ್ಷಣಾ ಕಾರ್ಯಾಚರಣೆ ತಂಡವನ್ನು ಈಗಾಗಲೇ ಕಳುಹಿಸಲಾಗಿದೆ. ಅಲ್ಲಿನ ರಾಜ್ಯ ಸರ್ಕಾರ ವಾಯುಪಡೆ ಮತ್ತು ಭಾರತೀಯ ಸೇನೆಯ ಸಹಾಯವನ್ನು ಕೋರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲಾಹೊಯ್​ ಹಿಮನದಿಯಿಂದ ವಾಪಾಸಾಗುತ್ತಿದ್ದ ಸುಮಾರು 10 ಜನ ಚಾರಣಿಗರಲ್ಲಿ ಮೂವರು ಆಯತಪ್ಪಿ ಹಿಮ ಹೆಪ್ಪುಗಟ್ಟಿದ್ದ ನದಿಯ ಕಣಿವೆಯೊಳಗೆ ಬಿದ್ದಿದ್ದಾರೆ. ಅವರಲ್ಲಿ ಒಬ್ಬರನ್ನು ಮಾತ್ರ ಉಳಿಸಲು ಸಾಧ್ಯವಾಗಿದೆ. ಜಮ್ಮು ಕಾಶ್ಮೀರದ ಅಬಕಾರಿ ಮತ್ತು ತೆರಿಗೆ ಅಧಿಕಾರಿ ನವೀದ್‌ ಜೀಲಾನಿ ಮತ್ತು ಆಲ್​ಪೈನ್​ ಗ್ರೂಪ್​ ಎಂಬ ಪ್ರವಾಸ ಪ್ರವಾಸ ತಂಡದಲ್ಲಿ ಕೆಲಸ ಮಾಡುತ್ತಿದ್ದ ಆದಿಲ್‌ ಷಾ ಮೃತಪಟ್ಟಿದ್ದಾರೆ. ಹಜೀಕ್ಎಂ​ಬ ಚಾರಣಿಗನಿಗೆ ಗಂಭೀರ ಗಾಯಗಳಾಗಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.

5 ಕಿ.ಮೀ. ಉದ್ದದಲ್ಲಿ ಹರಿಯುವ ಕೊಲಾಹೊಯ್​ ಹಿಮನದಿ ಕಾಶ್ಮೀರದ ನದಿಗಳಿಗೆ ನೀರನ್ನು ಒದಗಿಸುತ್ತದೆ. ಇದು ಚಾರಣಿಗರ ಪಾಲಿನ ಮೆಚ್ಚಿನ ಕಣಿವೆಯೂ ಹೌದು. ಇದು ಪ್ರಸಿದ್ಧ ಪ್ರವಾಸಿ ತಾಣವಾದ ಪಹ್ಲಾಗಾಂನಿಂದ 26 ಕಿ.ಮೀ. ದೂರದಲ್ಲಿದೆ.

 
First published: September 8, 2018, 9:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading