ವೆಬಿನಾರ್‌ಗಳಿಗೆ ಸರ್ಕಾರದ ಅನುಮತಿ ಕಡ್ಡಾಯ; ಶಿಕ್ಷಣ ಸಚಿವಾಲಯಕ್ಕೆ ವಿಜ್ಞಾನ ಅಕಾಡೆಮಿಗಳಿಂದ ಪತ್ರ

ಈ ಮೊದಲು ಸಂಘಟಕರಿಗೆ (ವರ್ಚುವಲ್ ಅಲ್ಲದ) ಸೆಮಿನಾರ್‌ಗಳಲ್ಲಿ ಭಾರತಕ್ಕೆ ಬರಲು ವಿದೇಶಿ ಅತಿಥಿ ಭಾಷಣಕಾರರಿಗೆ ರಾಜಕೀಯ ಅನುಮತಿ ಅಗತ್ಯವಿತ್ತು. ಆದರೆ ಅವರು ಮಾತನಾಡುವ ವಿಷಯಕ್ಕೆ ಯಾವುದೇ ಪೂರ್ವ ಅನುಮೋದನೆ ಅಗತ್ಯವಿರಲಿಲ್ಲ. ‘ಭಾರತದ ಆಂತರಿಕ ವಿಷಯಗಳು’ ಎಂದು ಯಾವುದೇ ನಿರ್ದಿಷ್ಟ ವರ್ಗವನ್ನು ನಿಷೇಧಿಸಲಾಗಿರಲಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಶಿಕ್ಷಣ ಸಂಸ್ಥೆಗಳು ನಡೆಸುವ ವೆಬಿನಾರ್ ‌ಗಳಿಗೆ ಸರ್ಕಾರದ ಅನುಮತಿ ಕಡ್ಡಾಯಗೊಳಿಸುವ ಇತ್ತೀಚಿನ ಆದೇಶವನ್ನು ಪ್ರಶ್ನಿಸಿ ಭಾರತದ ಎರಡು ಅತಿದೊಡ್ಡ ಮತ್ತು ಹಳೆಯ ವಿಜ್ಞಾನ ಅಕಾಡೆಮಿಗಳು ಶಿಕ್ಷಣ ಸಚಿವಾಲಯಕ್ಕೆ ಪತ್ರ ಬರೆದಿವೆ. ಇನ್ನೊಂದು ಶಿಕ್ಷಣ ಸಂಸ್ಥೆ ಕೂಡ ಪತ್ರ ಬರೆಯುವ ಸಾಧ್ಯತೆ ಇದೆ. ಸರ್ಕಾರದ ಈ ಆದೇಶದಿಂದ ‘ಎಲ್ಲಾ ಸಾಮಯಿಕ ವೈಜ್ಞಾನಿಕ ಚರ್ಚೆಗಳ ಸಂಪೂರ್ಣ ಸ್ಥಗಿತಕ್ಕೆ ಕಾರಣವಾಗಬಹುದು’ ಮತ್ತು ‘ಯುವಕರಲ್ಲಿರುವ ವಿಜ್ಞಾನದ ಆಸಕ್ತಿಗೆ ಈ ನಿಯಮ ಅಡ್ಡಿಪಡಿಸುತ್ತದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

  ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್, ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಮತ್ತು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಸಂಸ್ಥೆಗಳು ಭಾರತದ 2,500 ಕ್ಕೂ ಹೆಚ್ಚು ವಿಜ್ಞಾನಿಗಳನ್ನು ಒಳಗೊಂಡಿವೆ. ಸರ್ಕಾರದ ಈ ನಿರ್ಬಂಧವನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಮೊದಲ ಎರಡು ಶಿಕ್ಷಣ ಸಂಸ್ಥೆಗಳು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರಿಗೆ ಪ್ರತ್ಯೇಕ ಪತ್ರಗಳನ್ನು ಕಳುಹಿಸಿವೆ. 3ನೇ ಶಿಕ್ಷಣ ಸಂಸ್ಥೆ ಕೂಡ ಈ ಅರ್ಜಿಯನ್ನು ಬೆಂಬಲಿಸುವ ಬಗ್ಗೆ ಯೋಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

  ಕಳೆದ ನವೆಂಬರ್‌ನಲ್ಲಿ ವಿದೇಶಾಂಗ ಸಚಿವಾಲಯ ಸೂಚಿಸಿದ ಹೊಸ ಕಾರ್ಯವಿಧಾನದ ಹಿನ್ನೆಲೆ ಜನವರಿ 15 ರಂದು ಹೊರಡಿಸಲಾದ ಈ ಆದೇಶವು ಸಾರ್ವಜನಿಕವಾಗಿ ಧನಸಹಾಯ ಪಡೆದ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಸೇರಿ ಎಲ್ಲಾ ಸರ್ಕಾರಿ ಸಂಸ್ಥೆಯಗಳು ಯಾವುದೇ ಆನ್‌ಲೈನ್/ವರ್ಚುವಲ್ ಅಂತಾರಾಷ್ಟ್ರೀಯ ಸಮ್ಮೇಳನಗಳು/ಸೆಮಿನಾರ್‌ಗಳು ಅಥವಾ ತರಬೇತಿ ಇತ್ಯಾದಿಗಳನ್ನು ಆಯೋಜಿಸಲು ಆಯಾ ಆಡಳಿತ ಕಾರ್ಯದರ್ಶಿಯ ಅನುಮೋದನೆ ಪಡೆಯುವಂತೆ ಹೇಳಲಾಗಿತ್ತು.

  ಸಚಿವಾಲಯವು ಅಂತಹ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡುವಾಗ ಈವೆಂಟ್‌ನ ವಿಷಯ ‘ರಾಜ್ಯ, ಗಡಿ, ಈಶಾನ್ಯ ರಾಜ್ಯಗಳ ಭದ್ರತೆ, ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನಂತಹ ಕೇಂದ್ರಾಡಳಿತ ಪ್ರದೇಶ ಸಂಬಂಧ ಹೊಂದಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅದು ಹೇಳುತ್ತದೆ. ಅಲ್ಲದೆ ಭಾರತದ ಆಂತರಿಕ ವಿಷಯಗಳಿಗೆ ಸ್ಪಷ್ಟವಾಗಿ ಅಥವಾ ಸಂಪೂರ್ಣವಾಗಿ ಸಂಬಂಧಿಸಿದ ಯಾವುದೇ ಸಮಸ್ಯೆಗಳ ವಿಷಯಗಳ ಬಗ್ಗೆಯೂ ಗಮನಿಸಬೇಕು ಎಂದು ಹೇಳಲಾಗಿದೆ.

  ಕೊರೋನಾ ವೈರಸ್‌ ದಕ್ಷಿಣ ಆಫ್ರಿಕಾ ರೂಪಾಂತರಿ ಅಂದ್ರೆ ಏನು..? ಭಾರತೀಯರು ಆತಂಕಪಡಬೇಕೆ..?

  ಈ ಮೊದಲು ಸಂಘಟಕರಿಗೆ (ವರ್ಚುವಲ್ ಅಲ್ಲದ) ಸೆಮಿನಾರ್‌ಗಳಲ್ಲಿ ಭಾರತಕ್ಕೆ ಬರಲು ವಿದೇಶಿ ಅತಿಥಿ ಭಾಷಣಕಾರರಿಗೆ ರಾಜಕೀಯ ಅನುಮತಿ ಅಗತ್ಯವಿತ್ತು. ಆದರೆ ಅವರು ಮಾತನಾಡುವ ವಿಷಯಕ್ಕೆ ಯಾವುದೇ ಪೂರ್ವ ಅನುಮೋದನೆ ಅಗತ್ಯವಿರಲಿಲ್ಲ. ‘ಭಾರತದ ಆಂತರಿಕ ವಿಷಯಗಳು’ ಎಂದು ಯಾವುದೇ ನಿರ್ದಿಷ್ಟ ವರ್ಗವನ್ನು ನಿಷೇಧಿಸಲಾಗಿರಲಿಲ್ಲ.

  ‘ನಮ್ಮ ರಾಷ್ಟ್ರದ ಸುರಕ್ಷತೆಯನ್ನು ರಕ್ಷಿಸಬೇಕಾಗಿದೆ ಎಂದು ಅಕಾಡೆಮಿ ಬಲವಾಗಿ ನಂಬುತ್ತದೆ. ಆದರೂ ಭಾರತದ ಆಂತರಿಕ ವಿಷಯಗಳಿಗೆ ಸ್ಪಷ್ಟವಾಗಿ/ಸಂಪೂರ್ಣವಾಗಿ ಸಂಬಂಧಿಸಿರುವ ವರ್ಚುವಲ್ ವೈಜ್ಞಾನಿಕ ಸಭೆಗಳು ಅಥವಾ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಪೂರ್ವಾನುಮತಿ ಪಡೆಯಲು ಭಾರತದ ಆಂತರಿಕ ವಿಷಯಗಳು ಎಂದರೇನು ಎಂದು ವ್ಯಾಖ್ಯಾನಿಸದೆ ನಿರ್ಬಂಧ ವಿಧಿಸುವುದು ಸರಿಯಲ್ಲವೆಂದು ಪೋಖ್ರಿಯಾಲ್ ಅವರಿಗೆ ಬರೆದ ಪತ್ರದಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಅಧ್ಯಕ್ಷ ಪಾರ್ಥ ಮಜುಂದಾರ್ ಮನವಿ ಮಾಡಿದ್ದಾರೆ.

  ‘ಈ ಆದೇಶವು ಭಾರತದ ಆಂತರಿಕ ವಿಷಯಗಳನ್ನು ಸಹ ವ್ಯಾಖ್ಯಾನಿಸಿಲ್ಲ ಅಥವಾ ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಎಂದರೇನು ಎಂಬುದನ್ನು ಸ್ಪಷ್ಟಪಡಿಸಿಲ್ಲ’ ಎಂದು ಭಾರತದ ಅತ್ಯಂತ ಪ್ರಖ್ಯಾತ ಜೈವಿಕ ಸಂಖ್ಯಾಶಾಸ್ತ್ರಜ್ಞರಲ್ಲಿ ಒಬ್ಬರಾಗಿರುವ ಮತ್ತು ಕಲ್ಯಾಣಿ ಮೂಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಜೀನೋಮಿಕ್ಸ್‌ ನ ಸ್ಥಾಪಕ ನಿರ್ದೇಶಕರಾಗಿರುವ ಮಜುಂದಾರ್ ಹೇಳಿದ್ದಾರೆ.

  ‘ಎಲ್ಲಾ ಭಾಷಣಕಾರರು ಮತ್ತು ತರಬೇತುದಾರರು ಭಾರತೀಯ ಸಂಸ್ಥೆಗಳ ವಿಜ್ಞಾನಿಗಳಾಗಿದ್ದರೂ ಸಹ ಭಾರತದ ಹೊರಗಿನ ಸಂಸ್ಥೆಗಳ ವಿಜ್ಞಾನಿಗಳು ಆನ್‌ಲೈನ್‌ನಲ್ಲಿ ಮಾಡಿದ ಉಪನ್ಯಾಸವನ್ನು ಕೇಳಲು, ಪ್ರಶ್ನೆಗಳನ್ನು ಕೇಳಲು ಮತ್ತು ಚರ್ಚೆಗಳಲ್ಲಿ ಭಾಗವಹಿಸಲು ಸಾಧ್ಯವಿದೆ. ಅಂತಹ ಘಟನೆಗಳನ್ನು ‘ಅಂತಾರಾಷ್ಟ್ರೀಯ ಎಂದು ಪರಿಗಣಿಸಲಾಗುತ್ತದೆಯೇ ಎಂಬುದು ಅಕಾಡೆಮಿಗೆ ಸ್ಪಷ್ಟವಾಗಿಲ್ಲ ಮತ್ತು ಮೊದಲು ಅನುಮತಿ ಪಡೆಯುವ ಅಗತ್ಯವಿದೆ. ಹಾಗಿದ್ದಲ್ಲಿ ಎಲ್ಲಾ ಸಾಮೂಹಿಕ ವೈಜ್ಞಾನಿಕ ಘಟನೆಗಳಿಗೆ ಅನುಮತಿ ಪಡೆಯುವುದಕ್ಕೆ ಸಮನಾಗಿರುತ್ತದೆ. ಇದು ಭಾರತದೊಳಗಿನ ಎಲ್ಲಾ ಸಾಮಯಿಕ ವೈಜ್ಞಾನಿಕ ಚರ್ಚೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಕಾರಣವಾಗುತ್ತದೆ. ಏಕೆಂದರೆ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಯಾವುದೇ ಸಮಯದಲ್ಲಿ ಅನುಮೋದನೆಗಾಗಿ ಕಾಯುತ್ತಿವೆ’ ಎಂದು ಮಜುಂದಾರ್ ತಿಳಿಸಿದ್ದಾರೆ.

  ‘ಈ ಆದೇಶವು ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಆದೇಶವು ತಿಳಿಸುತ್ತದೆ. ಇದು ಸಾರ್ವಜನಿಕವಾಗಿ ವೈಜ್ಞಾನಿಕ ಅನ್ವೇಷಣೆಗಳಿಗೆ ತೀವ್ರ ನಿರ್ಬಂಧ ವಿಧಿಸುತ್ತದೆ, ಆದರೆ ಖಾಸಗಿ ಸಂಸ್ಥೆಗಳಲ್ಲಿ ಅಲ್ಲ. ಅಕಾಡೆಮಿ ಇದನ್ನು ಸೂಕ್ತವಲ್ಲವೆಂದು ಪರಿಗಣಿಸುತ್ತದೆ. ಹೊಸ ನಿಯಮಗಳು ಭಾರತದಲ್ಲಿ ಯುವ ಪೀಳಿಗೆಗೆ ಶೈಕ್ಷಣಿಕ ಅವಕಾಶಗಳ ಬೆಳವಣಿಗೆ ಮತ್ತು ವಿಜ್ಞಾನದ ಮೇಲಿನ ಆಸಕ್ತಿಯನ್ನು ತಡೆಯುತ್ತದೆ. ತಾನು ಆಯೋಜಿಸುತ್ತಿರುವ ಮುಂಬರುವ ಕಾರ್ಯಕ್ರಮಗಳಿಗೆ ಸರ್ಕಾರದ ಅನುಮತಿ ಪಡೆಯುವುದಿಲ್ಲವೆಂದು ಅವರು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
  Published by:Latha CG
  First published: