ನಾನು ಆರ್​ಬಿಐ ಗವರ್ನರ್ ಆಗಿ ಬಹುಪಾಲು ಕಾರ್ಯ ನಿರ್ವಹಿಸಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲೇ: ರಘುರಾಮ್ ರಾಜನ್​

ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಉತ್ತಮ ಆರ್ಥಿಕತೆ ಸಾಧಿಸಲು ಸಾಧ್ಯವಾಗಿಲ್ಲ. ಏಕೆಂದರೆ, ಈ ಸರ್ಕಾರದ ಆಡಳಿತ ಸಂಪೂರ್ಣ ಕೇಂದ್ರೀಕೃತವಾಗಿತ್ತು. ಆರ್ಥಿಕ ಪ್ರಗತಿಯನ್ನು ಸಾಧಿಸುವ ದೃಷ್ಟಿಕೋನ ನಾಯಕತ್ವಕ್ಕೆ ಇರಲಿಲ್ಲ ಎಂಬುದು ರಘುರಾಮ್​ ಅವರ ಅಭಿಪ್ರಾಯ.

Latha CG | news18-kannada
Updated:October 31, 2019, 7:17 PM IST
ನಾನು ಆರ್​ಬಿಐ ಗವರ್ನರ್ ಆಗಿ ಬಹುಪಾಲು ಕಾರ್ಯ ನಿರ್ವಹಿಸಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲೇ: ರಘುರಾಮ್ ರಾಜನ್​
ಮಾಜಿ ಆರ್​ಬಿಐ ಗವರ್ನರ್​ ರಘುರಾಮ್ ರಾಜನ್
  • Share this:
ನವದೆಹಲಿ(ಅ.31): ಭಾರತೀಯ ಬ್ಯಾಂಕಿಂಗ್​ ವಲಯ ರಘುರಾಮ್​ ರಾಜನ್​ ಕಾಲದಲ್ಲಿ ಕೆಟ್ಟ ಪರಿಸ್ಥಿತಿಯನ್ನು ಅನುಭವಿಸಿತ್ತು ಎಂಬ ಕೇಂದ್ರ ಹಣಕಾಸು ಸಚಿವೆಯ ಆರೋಪಕ್ಕೆ ಮಾಜಿ ಆರ್​ಬಿಐ ಗವರ್ನರ್​ ತಿರುಗೇಟು ನೀಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್​ನ ಗವರ್ನರ್ ಆಗಿ ನನ್ನ ಸೇವಾವಧಿಯ 3ನೇ 2ಭಾಗ ಬಿಜೆಪಿ ಸರ್ಕಾರದ ಅವಧಿಯಲ್ಲೇ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ರಘುರಾಮ್ ರಾಜನ್​ ಹೇಳಿದ್ದಾರೆ.

ರಘುರಾಮ್ ರಾಜನ್​ ಸೆ. 5 2013ರಿಂದ ಸೆ. 16 2016ರ ವರೆಗೆ ರಿಸರ್ವ್​ ಬ್ಯಾಂಕ್​ ಇಂಡಿಯಾದ ಗವರ್ನರ್​ ಆಗಿ ಕಾರ್ಯನಿರ್ವಹಿಸಿದ್ದರು. ತನ್ನ ಸೇವಾವಧಿಯ ವೇಳೆ ಕೆಟ್ಟ ಸಾಲಗಳಿಂದ ಜರ್ಝರಿತಗೊಂಡಿದ್ದ ಬ್ಯಾಂಕಿಂಗ್​ ವಲಯವನ್ನು ಶುದ್ಧಗೊಳಿಸುವ ಕಾರ್ಯ ಪ್ರಾರಂಭವಾಯಿತು. ಇನ್ನೂ ಸಹ ಶುದ್ದಗೊಳಿಸುವ ಕಾರ್ಯ ಪೂರ್ಣವಾಗಿಲ್ಲ ಎಂದು ರಘರಾಮ್​ ಹೇಳಿದ್ದಾರೆ.

ಆರ್ಥಿಕ ಪ್ರಗತಿ ಉತ್ತೇಜಿಸಲು ದೇಶಕ್ಕೆ ಹೊಸ ಸ್ತರದಲ್ಲಿ ಸುಧಾರಣೆಗಳ ಅಗತ್ಯವಿದೆ. ಶೇ. 5ರಷ್ಟು ಕುಸಿದಿರುವ ಜಿಡಿಪಿ ದರ ದೇಶದ ಗಣನೀಯ ಆರ್ಥಿಕ ಕುಸಿತಕ್ಕೆ ಸಾಕ್ಷಿಯಾಗಿದೆ ಎಂದು ರಂಜನ್​ ಹೇಳಿದರು.

ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್; ಯಾರಿಗೆ ಟಿಕೆಟ್​?​

ನಾನು ಕೇವಲ 8 ತಿಂಗಳು ಮಾತ್ರ ಹಿಂದಿನ ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದೆ. ಸುಮಾರು 26 ತಿಂಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರ್​ಬಿಐ ಗವರ್ನರ್​ ಆಗಿ ಕೆಲಸ ಮಾಡಿದ್ದೇನೆ. ಹೀಗಾಗಿ ಬಿಜೆಪಿ ಸರ್ಕಾರದಲ್ಲೇ ನಾನು ಆರ್​ಬಿಐ ಗವರ್ನರ್​​ ಆಗಿ ಹೆಚ್ಚು ಕಾಲ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿಕೊಂಡರು.

ಕೆಲವು ದಿನಗಳ ಹಿಂದೆ ಕೇಂದ್ರ ಹಣಕಾಸು ಸಚಿವೆ ನ್ಯೂಯಾರ್ಕ್​​ನಲ್ಲಿ ಮಾತನಾಡುತ್ತಾ, ಮನಮೋಹನ್ ಸಿಂಗ್​ ಪ್ರಧಾನಿಯಾಗಿದ್ಧಾಗ ಮತ್ತು ರಘುರಾಮ್​ ರಾಜನ್​ ಆರ್​ಬಿಐ ಗವರ್ನರ್​ ಆಗಿದ್ಧಾಗ ಭಾರತದ ಸಾರ್ವಜನಿಕ ಬ್ಯಾಂಕಿಂಗ್​ ವಲಯ ಕೆಟ್ಟ ದಿನಗಳನ್ನು ಅನುಭವಿಸಿತ್ತು ಎಂದು ಹೇಳಿದ್ದರು.

‘ಕಾಶ್ಮೀರದ ವಾಸ್ತವ ಅರಿಯಲು ಯೂರೋಪ್​​ ಸಂಸದರ ಭೇಟಿಯೇ ಹೊರತು, ಇನ್ಯಾವುದೇ ಉದ್ದೇಶದಿಂದಲ್ಲ‘: ಕೇಂದ್ರ ಸರ್ಕಾರರಘುರಾಮ್​ ರಾಜನ್​ ಆರ್​​​ಬಿಐ ಗವರ್ನರ್​ ಆಗಿ ಸೇವೆ ಸಲ್ಲಿಸುವ ಸಮಯದಲ್ಲಿ ರಾಜಕಾರಣಿಗಳ ಫೋನ್ ಕರೆಯ ಆಧಾರದ ಮೇಲೆ ಬ್ಯಾಂಕುಗಳು ಸಾಲ ನೀಡುತ್ತಿದ್ದವು. ಈಗಲೂ ಕೂಡ ಸರ್ಕಾರಿ ಬ್ಯಾಂಕುಗಳು ಸರ್ಕಾರದ ಸಹಾಯ ನೆಚ್ಚಿಕೊಳ್ಳುವುದು ತಪ್ಪಿಲ್ಲ ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದ್ದರು.

ಈ ವಿಚಾರದ ಬಗ್ಗೆ ಮಾತನಾಡಿದ ರಘುರಾಮ್ ರಾಜನ್ ಈ ರಾಜಕೀಯ ಚರ್ಚೆಗೆ ತಾನು ಚರ್ಚಿಸುವ ಗೋಜಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಉತ್ತಮ ಆರ್ಥಿಕತೆ ಸಾಧಿಸಲು ಸಾಧ್ಯವಾಗಿಲ್ಲ. ಏಕೆಂದರೆ, ಈ ಸರ್ಕಾರದ ಆಡಳಿತ ಸಂಪೂರ್ಣ ಕೇಂದ್ರೀಕೃತವಾಗಿತ್ತು. ಆರ್ಥಿಕ ಪ್ರಗತಿಯನ್ನು ಸಾಧಿಸುವ ದೃಷ್ಟಿಕೋನ ನಾಯಕತ್ವಕ್ಕೆ ಇರಲಿಲ್ಲ ಎಂಬುದು ರಘುರಾಮ್​ ಅವರ ಅಭಿಪ್ರಾಯ.

‘ಡಿಕೆಶಿ ಬೆದರಿಕೆಗೆ ನಾವು ಬಗ್ಗಬಾರದು‘: ಸಚಿವ ಸಂಪುಟ ಸಭೆಯಲ್ಲಿ ಡಿಸಿಎಂ ಅಶ್ವಥ್​​ ನಾರಾಯಣ್​​

First published: October 31, 2019, 7:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading