ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಜಮ್ಮು ಮತ್ತಿ ಕಾಶ್ಮೀರದ ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಈ ಕಳಗದಲ್ಲಿ ಭಾರತದ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ. ಹಲವು ದಿನಗಳಿಂದ ಗಡಿ ನಿಯಂತ್ರಣ ರೇಳೆ ಬಳಿ ಕದನ ವಿರಾಮ ಉಲ್ಲಂಘನೆ ನಡೆಯುತ್ತಿದ್ದು. ಇದು ಎರಡನೇ ಎನ್ಕೌಂಟರ್ ನಡೆದಿದೆ . ಇತ್ತೀಚೆಗಷ್ಟೇ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ ಜಮ್ಮುನಲ್ಲಿ ಭಾರತೀಯ ವಾಯುಪಡೆಯ ನೆಲೆ ಮೇಲೆ ಡ್ರೋನ್ ದಾಳಿ ನಡೆಸಿತ್ತು. ಇದಾದ ಒಂದು ತಿಂಗಳೊಳಗೆ ನಡೆದ ಎರಡನೇ ಎನ್ಕೌಂಟರ್ ದಾಳಿ ಇದಾಗಿದೆ.
ರಾಜೌರಿ ಜಿಲ್ಲೆಯ ದಾದಲ್, ಸುಂದರಬಾನಿ ಸೆಕ್ಟರ್ನಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಕುರಿತು ಮಾಹಿತಿಯ ಲಭ್ಯವಾಗಿತ್ತು. ಈ ಹಿನ್ನಲೆ ಜೂನ್ 29ರಂದು ಸೈನ್ಯವು ವ್ಯಾಪಕ ಶೋಧ ನಡೆಸಿ ಕಾರ್ಯಾಚರಣೆ ನಡೆಸಿತ್ತು. ಇದಾದ ಬಳಿಕ ಇಂದು ಕೂಡ ಭಯೋತ್ಪಾದಕರ ನುಸುಳಿವಿಕೆ ಬಗ್ಗೆ ಮಾಹಿತಿ ಲಭ್ಯವಾಯಿತು. ದಾದಲ್ ಅರಣ್ಯ ಪ್ರದೇಶದಲ್ಲಿ ಅವರ ಚಲನವಲನ ಮಾಹಿತಿ ಲಭ್ಯವಾಗಿದ್ದು ದಾಳಿ ನಡೆಸಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ದಾಳಿ ವೇಳೆ ಭಯೋತ್ಪಾದಕರು ಗುಂಡಿನ ಚಕಮಕಿ ನಡೆಸಿದರು. ಅಲ್ಲದೇ, ಗ್ರೇನೇಡ್ ಮೂಲಕ ದಾಳಿ ನಡೆಸಿದರು. ಇದರಿಂದ ಇಬ್ಬರು ಸೈನಿಕರು ಗಂಭೀರವಾಗಿ ಗಾಯಗೊಂಡರು. ಈ ವೇಳೆ ಇಬ್ಬರು ಭಯೋತ್ಪಾದಕರು ಕೂಡ ಸಾವನ್ನಪ್ಪಿದ್ದು, ಶೋಧ ಕಾರ್ಯ ಮುಂದುವರೆದಿದೆ.
Published by:Seema R
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ