Sushma ChakreSushma Chakre
|
news18-kannada Updated:May 25, 2020, 8:40 PM IST
ಪ್ರಾತಿನಿಧಿಕ ಚಿತ್ರ.
ಶ್ರೀನಗರ (ಮೇ 25): ಭಾರತೀಯ ಭದ್ರತಾ ಪಡೆ ಜಮ್ಮು ಕಾಶ್ಮೀರದ ಕುಲ್ಗಾಂನಲ್ಲಿ ಇಂದು ನಡೆಸಿದ ಎನ್ಕೌಂಟರ್ನಲ್ಲಿ ಐಎಸ್ಜೆಕೆಯಿಂದ ಪ್ರಭಾವಿತಗೊಂಡಿದ್ದ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ. ಸಾವನ್ನಪ್ಪಿದ ಉಗ್ರರನ್ನು ಆದಿಲ್ ಅಹಮದ್ ವಾನಿ ಅಲಿಯಾಸ್ ಅಬು ಇಬ್ರಾಹಿಂ ಮತ್ತು ಶಹೀನ್ ಬಾಶಿರ್ ತೋಕರ್ ಎಂದು ಗುರುತಿಸಲಾಗಿದೆ.
ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಖುರ್ ಗ್ರಾಮದ ದಾಮ್ ಹಾಲ್ ಹಾಂಜಿಪೋರಾ ಪ್ರದೇಶದಲ್ಲಿ ಎನ್ಕೌಂಟರ್ ನಡೆಸಲಾಗಿದೆ. ಈ ಇಬ್ಬರು ಉಗ್ರರು ಕೂಡ ಐಎಸ್ಜೆಕೆಗೆ ಸೇರಿದವರು ಎನ್ನಲಾಗಿದೆ. ಕುಲ್ಗಾಂನಲ್ಲಿ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಕುಲ್ಗಾಮ್ ಪೊಲೀಸ್, ಸಿಆರ್ಪಿಎಫ್ ಪಡೆ ಕಾರ್ಯಾಚರಣೆ ನಡೆಸಿತ್ತು.
ಇದನ್ನೂ ಓದಿ: Ramzan: ರಂಜಾನ್ ವೇಳೆ 1 ತಿಂಗಳ ಕಠಿಣ ಉಪವಾಸ ಮಾಡಿದ 6 ವರ್ಷದ ಬಾಲಕಿ!ಮೃತಪಟ್ಟ ಇಬ್ಬರು ಉಗ್ರರು ಕೂಡ ಕಾಶ್ಮೀರದ ಶೋಫಿಯಾನ್ನವರಾಗಿದ್ದಾರೆ. ತೋಕರ್ ಲಷ್ಕರ್-ಇ-ತಯ್ಬಾ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಎನ್ಕೌಂಟರ್ ಕಾರ್ಯಾಚರಣೆ ನಡೆದಿದ್ದರಿಂದ ಮಿರ್ವಾಣಿ ಗ್ರಾಮದ ಕೆಲವು ಮನೆಗಳನ್ನು ಭದ್ರತಾ ಪಡೆಯ ಸಿಬ್ಬಂದಿ ತೆರವುಗೊಳಿಸಿದ್ದರು. ಉಗ್ರರು ಮನೆಗಳಿಗೆ ನುಗ್ಗಿ ಜನರಿಗೆ ಅಪಾಯ ಉಂಟುಮಾಡುವ ಸಾಧ್ಯತೆ ಇದ್ದುದರಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರು.
First published:
May 25, 2020, 8:40 PM IST