ಒಬ್ಬ ಸ್ಟೂಡೆಂಟ್, ಇಬ್ಬರು ಟೀಚರ್; ಲವ್ ಹುಚ್ಚಿಗೆ ಬಿದ್ದು ಮಸಣ ಸೇರಿದ ಶಿಕ್ಷಕರು

ಪ್ರೀತಿಯ ಅಮಲಿನಲ್ಲಿದ್ದ ಶಿಕ್ಷಕನೋರ್ವ ಆತನ ಸಹಚರನನ್ನು ಕೊಲೆ ಮಾಡಿದ್ದಾನೆ. ನಂತರ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುತ್ತಾರೆ ಸ್ಥಳೀಯ ಪೊಲೀಸರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಲಕ್ನೋ(ಫೆ.19): ಒಂದೇ ವಿದ್ಯಾರ್ಥಿಯನ್ನ ಪ್ರೀತಿಸುತ್ತಿದ್ದ ಇಬ್ಬರು ಶಿಕ್ಷಕರು ಸಾವಿನಲ್ಲಿ ಅಂತ್ಯಕಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಮಿರ್ಜಾಪುರ್ ಜಿಲ್ಲೆಯ ಕುರೈಥಿಯ ಎಚ್​​​.ಪಿ ತಿವಾರಿ ಎಂಬ ಪಬ್ಲಿಕ್ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಸೂರಜ್ ಮತ್ತು ಅನೂಜ್ ಎಂಬ ಶಿಕ್ಷಕರು ಆಪ್ತ ಸ್ನೇಹಿತರು. ಅನೂಜ್ ಮೂರು ವರ್ಷಗಳಿಂದ ಅದೇ ಶಾಲೆಯ ವಿದ್ಯಾರ್ಥಿನಿಯನ್ನ ಪ್ರೀತಿಸುತ್ತಿದ್ದ. ಇದೇ ಹುಡುಗಿ ಜತೆ ಸೂರಜ್​​ ಕೂಡ ಲವ್​​ನಲ್ಲಿದ್ದ. ಈ ವಿಷಯ ತಿಳಿಯುತ್ತಿದ್ದಂತೆಯೇ ಅನೂಜ್​​ ಸೂರಜ್​ ಮೇಲೆ ಕೋಪಗೊಂಡಿದ್ದಾನೆ. ಸೂರಾಜ್ ತನ್ನ ಪ್ರೀತಿಯನ್ನುಅನೂಜ್​​ಗೆ​ ಮನವರಿಕೆ ಮಾಡಲು ಯತ್ನಿಸಿದ್ದಾನೆ. ಆಗ ನಾನು ಪ್ರೀತಿಸಿದ ಹುಡುಗಿಯನ್ನೇ ಪ್ರೀತಿಸುತ್ತೀಯಾ ಎಂದು ಅನೂಜ್​​ ತನ್ನ ಸ್ನೇಹಿತ ಜತೆ ಸೇರಿ ಅಜೂನ್​​ನನ್ನು ಕೊಲೆ ಮಾಡಿದ್ಧಾನೆ. ಬಳಿಕ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್​​ ಮೂಲಗಳು ತಿಳಿಸಿವೆ.

  ಇನ್ನು, ಇಬ್ಬರು ಶಿಕ್ಷಕರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಸಹಶಿಕ್ಷಕರು ಒಮ್ಮೆ ಅನೂಜ್​​​ ಮತ್ತು ಸೂರಜ್​​​​ ಜತೆಗೆ ಮಾತುಕತೆ ನಡೆಸಿದ್ದರು. ಈ ಹುಡುಗಿ ವಿಚಾರದಲ್ಲಿ ಮುಂದುವರಿಯಬೇಡಿ ಎಂದು ಎಚ್ಚರಿಕೆಯೂ ನೀಡಿದ್ದರು. ಆದರೂ, ಇವರ ಮಾತನ್ನು ಅರ್ಥ ಮಾಡಿಕೊಳ್ಳಲು ಇಬ್ಬರು ತಯಾರಿರಲಿಲ್ಲ.

  ಪ್ರೀತಿಯ ಅಮಲಿನಲ್ಲಿದ್ದ ಶಿಕ್ಷಕನೋರ್ವ ಆತನ ಸಹಚರನನ್ನು ಕೊಲೆ ಮಾಡಿದ್ದಾನೆ. ನಂತರ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುತ್ತಾರೆ ಸ್ಥಳೀಯ ಪೊಲೀಸರು.

  ಇದನ್ನೂ ಓದಿ: ಸಿಎಂ ಕೇಜ್ರಿವಾಲ್​​​-ಅಮಿತ್​​ ಶಾ ಮೊದಲ ಭೇಟಿ: ದೆಹಲಿ ಅಭಿವೃದ್ದಿಗೆ ಒಟ್ಟಾಗಿ ಕೆಲಸ ಮಾಡುವ ಶಪಥ

  ಕೊಲೆ ಮಾಡಿದ್ದೇಗೆ?: ಅನೂಜ್ ತನ್ನ ಸ್ನೇಹಿತ ರತ್ನೇಶ್ ಜತೆ ಸೇರಿ ಫೆಬ್ರವರಿ 11ನೇ ತಾರೀಕಿನಂದು ಮಫ್ಲರ್​​ನಿಂದ ಸೂರಜ್ ಉಸಿರುಗಟ್ಟಿಸಿ ಕೊಂದಿದ್ದಾರೆ. ಬಳಿಕ ಸೂರಜ್​​​ ಮೃತದೇಹವನ್ನು ಬಾವಿಗೆ ಎಸೆದಿದ್ದರು. ಇದಾದ ಮರುದಿನ  ಅನೂಜ್ ಆತ್ಮಹತ್ಯೆಗೆ ಶರಣಾಗಿದ್ದ. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರು ರತ್ನೇಶ್​​ನನ್ನು ಬಂಧಿಸಿದರು.
  First published: