Monkeypox: ಉತ್ತರ ಪ್ರದೇಶದಲ್ಲಿ 2 ಶಂಕಿತ ಮಂಕಿಪಾಕ್ಸ್ ಪ್ರಕರಣಗಳು ವರದಿ: ಹೆಚ್ಚಾದ ಆತಂಕ, ತೀವ್ರ ಕಟ್ಟೆಚ್ಚರ!

ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ಶಂಕಿತ ಇಬ್ಬರಲ್ಲಿ ಮಂಗನ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಒಬ್ಬ ರೋಗಿಯ ಸ್ವ್ಯಾಬ್ ಮಾದರಿಯನ್ನು ಪುಣೆಗೆ ಕಳುಹಿಸಲಾಗಿದೆ. ಮತ್ತೊಬ್ಬ ವ್ಯಕ್ತಿಯನ್ನು ದೆಹಲಿಯ ಲೋಕನಾಯಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಉತ್ತರ ಪ್ರದೇಶದ ಜನರಲ್ಲಿ ಈಗ ಆತಂಕ ಹೆಚ್ಚಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಂಕಿಪಾಕ್ಸ್ (Monkeypox) ಪ್ರಕರಣಗಳು (Cases) ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ದೇಶದೆಲ್ಲೆಡೆ ಆತಂಕ ಹೆಚ್ಚಾಗುತ್ತಿದೆ. ಭಾರತದಲ್ಲೀ ಈಗಾಗಲೇ 4 ಮಂಕಿಪಾಕ್ಸ್ ಕೇಸ್ ಇರೋದು ದೃಢಪಟ್ಟಿದೆ. 3 ಕೇಸ್‍ಗಳು ಕೇರಳದಲ್ಲಿ ದೃಢಪಟ್ಟಿವೆ. ಕೇರಳ (Kerala)ದ ಕೆಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ (Delhi)ಯಲ್ಲಿ ಒಂದು ಕೇಸ್ ದೃಢ ಪಟ್ಟಿದ್ದು, ಅಲ್ಲೂ ಆತಂಕ ಹೆಚ್ಚಾಗಿದೆ. ಇನ್ನೂ ಉತ್ತರ ಪ್ರದೇಶದ (Utter Pradesh) ಗಾಜಿಯಾಬಾದ್‍ (Ghaziabad)ನಲ್ಲಿ ಶಂಕಿತ (suspected) ಇಬ್ಬರಲ್ಲಿ ಮಂಗನ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಒಬ್ಬ ರೋಗಿಯ ಸ್ವ್ಯಾಬ್ ಮಾದರಿಯನ್ನು ಪುಣೆಗೆ ಕಳುಹಿಸಲಾಗಿದೆ. ಮತ್ತೊಬ್ಬ ವ್ಯಕ್ತಿಯನ್ನು ದೆಹಲಿಯ ಲೋಕನಾಯಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಉತ್ತರ ಪ್ರದೇಶದ ಜನರಲ್ಲಿ ಈಗ ಆತಂಕ ಹೆಚ್ಚಾಗಿದೆ.

ಗಾಜಿಯಾಬಾದ್‍ನಲ್ಲಿ 2 ಶಂಕಿತ ಮಂಕಿಪಾಕ್ಸ್ ಪ್ರಕರಣಗಳು
ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ಬುಧವಾರ ಎರಡು ಶಂಕಿತ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿವೆ. ದೃಢೀಕರಣಕ್ಕಾಗಿ ಮಾದರಿಗಳನ್ನು ಎನ್‍ಐವಿ ಪುಣೆಗೆ ಕಳುಹಿಸಲಾಗಿದೆ. ಮತ್ತೊಬ್ಬ ವ್ಯಕ್ತಿಯನ್ನು ದೆಹಲಿಯ ಲೋಕನಾಯಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಮುಂಜಾನೆ, ಯುಪಿಯ ಔರಿಯಾದಲ್ಲಿ ಮಂಕಿಪಾಕ್ಸ್‍ನ ಶಂಕಿತ ಪ್ರಕರಣ ಪತ್ತೆಯಾಗಿತ್ತು. ಮಹಿಳೆ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಪರಿಹಾರ ಸಿಗದಿದ್ದಾಗ ಭಾನುವಾರ ಬೈಪಾಸ್ ರಸ್ತೆಯಲ್ಲಿರುವ ಮಾಜಿ ವೈದ್ಯಾಧಿಕಾರಿ ಬಳಿ ಔಷಧ ಪಡೆಯಲು ತೆರಳಿದ್ದರು. ಮಾಜಿ ವೈದ್ಯಕೀಯ ಅಧಿಕಾರಿ ಮಹಿಳೆಯ ದೇಹದ ಮೇಲೆ ಸಣ್ಣ ಕಲೆಗಳನ್ನು ಗಮನಿಸಿದರು. ಇದು ಮಂಕಿಪಾಕ್ಸ್ ಇರಬಹುದು ಎಂದು ಶಂಕಿಸಿದ್ರು.

ಮಂಕಿಪಾಕ್ಸ್ ಅನ್ನು ಎದುರಿಸಲು ಯುಪಿ ಸಿದ್ಧತೆ
ಉತ್ತರ ಪ್ರದೇಶದಲ್ಲಿ ಇದುವರೆಗೆ ಯಾವುದೇ ಮಂಕಿಪಾಕ್ಸ್ ಕೇಸ್ ವರದಿಯಾಗಿಲ್ಲ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ರೋಗ ಬಂದ್ರೆ ತಡೆಯಲು ತಯಾರಿಯನ್ನು ಪ್ರಾರಂಭಿಸಲು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದೆ. ರಾಜ್ಯಾದ್ಯಂತ ಕೋವಿಡ್ ಆಸ್ಪತ್ರೆಗಳಲ್ಲಿ ತಲಾ 10 ಹಾಸಿಗೆಗಳನ್ನು ಮಂಗನ ಕಾಯಿಲೆ ರೋಗಿಗಳಿಗೆ ಮೀಸಲಿಡಲಾಗಿದೆ. ಇದಲ್ಲದೆ, ಹೆಚ್ಚುತ್ತಿರುವ ಮಂಗನ ಕಾಯಿಲೆಯ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲೂ ಕಣ್ಗಾವಲು ಘಟಕಗಳನ್ನು ಸಕ್ರಿಯಗೊಳಿಸಲಾಗಿದೆ.

ಇದನ್ನೂ ಓದಿ: Explained: ಮಂಕಿಪಾಕ್ಸ್ ಮತ್ತು ಚಿಕನ್ ಪಾಕ್ಸ್ ಇವೆರಡರ ನಡುವಿನ ವ್ಯತ್ಯಾಸವೇನು; ಇವುಗಳ ಸಾಮಾನ್ಯ ರೋಗಲಕ್ಷಣ ಯಾವುದು?

ಭಾರತದಲ್ಲಿ ಮಂಕಿಪಾಕ್ಸ್ ಕೇಸ್‍ಗಳು
ಇಲ್ಲಿಯವರೆಗೆ, ಭಾರತದಲ್ಲಿ 4 ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದೆ. ದೆಹಲಿಯಲ್ಲಿ ಒಂದು ಮತ್ತು ಕೇರಳದಲ್ಲಿ ಮೂರು. ನಿನ್ನೆ ಈ ಬಗ್ಗೆ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ ವಿಕೆ ಪಾಲ್, ಈಗ ಭಾರತದಲ್ಲಿ 4 ಮಂಗನ ಕಾಯಿಲೆ ಪ್ರಕರಣಗಳಿವೆ. ಕೆಲವು ವಾರಗಳ ಹಿಂದೆಯೇ ಸರ್ಕಾರ ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ. ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. 15 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಪರಿಸ್ಥಿತಿ ಹತೋಟಿಯಲ್ಲಿದ್ದು, ಆತಂಕ ಪಡುವ ಅಗತ್ಯವಿಲ್ಲ. ಯಾರಿಗಾದರೂ ಮಂಕಿಪಾಕ್ಸ್‍ನ ಲಕ್ಷಣಗಳು ಕಂಡುಬಂದರೆ, ಮರೆಮಾಚದೇ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: Monkeypox V/s Marburg Virus: ಮಾನವರಿಗೆ ಯಾವುದು ಮಾರಣಾಂತಿಕ? ಮಂಕಿಪಾಕ್ಸ್ ಅಥವಾ ಮಾರ್ಬರ್ಗ್?

ಮಂಕಿಪಾಕ್ಸ್ ರೋಗಕ್ಕೆ ತುತ್ತಾದಾಗ ಏನು ಮಾಡಬೇಕು?
ನೀವು ಮಂಗನ ಕಾಯಿಲೆಗೆ ತುತ್ತಾಗಿರಬಹುದು ಎಂದು ಗೊತ್ತಾದ ತಕ್ಷಣ ನೀವು ಇತರರೊಂದಿಗೆ ದೈಹಿಕ ಸಂಪರ್ಕ ಮಾಡಬಾರದು ಮತ್ತು ತಕ್ಷಣವೇ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಮಂಕಿಪಾಕ್ಸ್ ನ ಆರಂಭಿಕ ಲಕ್ಷಣಗಳು ಜ್ವರ, ತಲೆನೋವು, ಸ್ನಾಯು ನೋವು, ಊತ ಮತ್ತು ಬೆನ್ನುನೋವು. ದದ್ದುಗಳು ಮತ್ತು ಗಾಯಗಳು ಸಾಮಾನ್ಯವಾಗಿ ಒಂದರಿಂದ ಐದು ದಿನಗಳಲ್ಲಿ ಮುಖ, ಕೈಗಳು, ಕಾಲುಗಳು, ಕಣ್ಣುಗಳು, ಬಾಯಿ ಅಥವಾ ಜನನಾಂಗಗಳ ಮೇಲೆ ಕಂಡುಬರುತ್ತವೆ. ಆ ದದ್ದುಗಳು ಬೆಳೆದ ಉಬ್ಬುಗಳು ಮತ್ತು ನಂತರ ಗುಳ್ಳೆಗಳಾಗಿ ಬದಲಾಗುತ್ತವೆ, ಅದು ಒಡೆಯುವ ಮತ್ತು ತುರಿಕೆ ಮಾಡುವ ಮೊದಲು ಕೀವು ತುಂಬಿಕೊಳ್ಳುತ್ತದೆ. ಇವುಗಳ ಅನುಭವ ಆಗುತ್ತಿದ್ದಂತೆ ವೈದ್ಯರನ್ನು ಸಂಪರ್ಕಿಸಿ.
Published by:Savitha Savitha
First published: