ಚೀನಾದಲ್ಲಿ ಪ್ರಬಲ ಭೂಕಂಪ; 12 ಜನರು ಸಾವು, 120 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಈ ಪ್ರಬಲ ಭೂಕಂಪದಿಂದಾಗಿ ಹಲವೆಡೆ ಹೆದ್ದಾರಿಗಳು ಬಿರುಕುಬಿಟ್ಟಿವೆ. ಭೂಕಂಪವಾದ ಸ್ಥಳಗಳಿಗೆ 300ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ.

Latha CG | news18
Updated:June 19, 2019, 3:19 PM IST
ಚೀನಾದಲ್ಲಿ ಪ್ರಬಲ ಭೂಕಂಪ; 12 ಜನರು ಸಾವು, 120 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ಸಾಂದರ್ಭಿಕ ಚಿತ್ರ
  • News18
  • Last Updated: June 19, 2019, 3:19 PM IST
  • Share this:
ಬೀಜಿಂಗ್,(ಜೂ.18): ನೈಋತ್ಯ ಚೀನಾದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಎರಡು ಪ್ರಬಲ ಭೂಕಂಪದಲ್ಲಿ ಸುಮಾರು 12 ಮಂದಿ ಸಾವನ್ನಪ್ಪಿದ್ದು, 120ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ರಿಕ್ಟರ್​ ಮಾಪನದಲ್ಲಿ 6.0 ತೀವ್ರತೆಯ ಭೂಕಂಪ ದಾಖಲಾಗಿದೆ. ಮೊದಲ ಭೂಕಂಪ ಸಿಚುವಾನ್ ಪ್ರಾಂತ್ಯದ ಯಿಬಿನ್‌ ನಗರದ ಚಾನ್ನಿಂಗ್​ ಕೌಂಟಿಯಲ್ಲಿ ಸೋಮವಾರ ರಾತ್ರಿ 10.55 ರಲ್ಲಿ ಸಂಭವಿಸಿತು. ಎರಡನೇ ಭೂಕಂಪ ಮಂಗಳವಾರ ಮುಂಜಾನೆ 5.30 ರಲ್ಲಿ ಸಂಭವಿಸಿದೆ ಎಂದು ಭೂಕಂಪನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಬಲ ಭೂಕಂಪದಿಂದಾಗಿ ಹಲವೆಡೆ ಹೆದ್ದಾರಿಗಳು ಬಿರುಕುಬಿಟ್ಟಿವೆ. ಭೂಕಂಪವಾದ ಸ್ಥಳಗಳಿಗೆ 300ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಜೊತೆಗೆ ರಕ್ಷಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. 5,000 ಟೆಂಟ್‌ಗಳು, 10,000 ಮಡಚುವ ಮಂಚಗಳು ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ಒಯ್ಯಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 126 ಮಕ್ಕಳ ಮಾರಣಹೋಮದ ಬಳಿಕ ಎಚ್ಚೆತ್ತುಕೊಂಡ ಬಿಹಾರ ಸಿಎಂ; ಆಸ್ಪತ್ರೆಯಲ್ಲಿ ಹೆಚ್ಚಿನ ಬೆಡ್​ ವ್ಯವಸ್ಥೆಗೆ ಆದೇಶ

ಅಮೆರಿಕದ ಜಾಗತಿಕ ಭೂಕಂಪ ಮಾಪನ ಕೇಂದ್ರದ ಪ್ರಕಾರ, ಚೀನಾದಲ್ಲಿ 5.8ರ ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ಭಾರೀ ಹಾನಿ ಉಂಟು ಮಾಡುವ ಭೂಕಂಪನವೆಂದು ಅಮೆರಿಕ ಹೇಳಿದೆ.

ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಪದೇ ಪದೇ ಭೂಕಂಪಗಳು ಸಂಭವಿಸುತ್ತಿವೆ. 2008ರಲ್ಲಿ 7.9 ತೀವ್ರತೆ ಭಾರೀ ಭೂಕಂಪ ಸಂಭವಿಸಿದ್ದು 87,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
First published: June 18, 2019, 5:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading