• Home
  • »
  • News
  • »
  • national-international
  • »
  • Sidhu Moose Wala: ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ; ಇಬ್ಬರು ಶಂಕಿತ ಗ್ಯಾಂಗ್​ಸ್ಟರ್​ಗಳ ಎನ್​ಕೌಂಟರ್

Sidhu Moose Wala: ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ; ಇಬ್ಬರು ಶಂಕಿತ ಗ್ಯಾಂಗ್​ಸ್ಟರ್​ಗಳ ಎನ್​ಕೌಂಟರ್

ಪಂಜಾಬ್ ಪೊಲೀಸ್ ಸಿಬ್ಬಂದಿ
(ಕೃಪೆ: ಪಿಟಿಐ)

ಪಂಜಾಬ್ ಪೊಲೀಸ್ ಸಿಬ್ಬಂದಿ (ಕೃಪೆ: ಪಿಟಿಐ)

ಸಿಧು ಮೂಸೆ ವಾಲಾ ಅವರ ಹತ್ಯೆ ಮಾಡಿದ್ದರು ಎನ್ನಲಾದ ಆರೋಪಿಗಳನ್ನು ಪಂಜಾಬ್ ಪೊಲೀಸರು ಎನ್‍ಕೌಂಟರ್ ಮಾಡಿದ್ದಾರೆ. ಕ್ರಿಮಿನಲ್‍ಗಳು ಮತ್ತು ಪಂಜಾಬ್ ಪೊಲೀಸರ ನಡುವೆ ಗುಂಡಿನ ಕಾಳಗ ನಡೆದಿದೆ. ಆಗ ಪೊಲೀಸರು ಆರೋಪಿಗಳಿಗೆ ಗುಂಡು ಹಾರಿಸಿದ್ದಾರೆ. ಪೊಲೀಸರ ಗುಂಡಿಗೆ ಹತ್ಯೆಕೋರರ ಪ್ರಾಣ ಹೋಗಿದೆ.

ಮುಂದೆ ಓದಿ ...
  • Share this:

ಅಮೃತ​ಸರ: 28 ವರ್ಷದ ಗಾಯಕ, ಕಾಂಗ್ರೆಸ್ ನಾಯಕ (Congress Leader) ಸಿಧು ಮೂಸೆ ವಾಲಾ (Sidhu Moose Wala) ಅವರನ್ನು ಮೇ 29ರಂದು ಪಂಜಾಬ್‍ನ ಮನ್ಸಾ ಜಿಲ್ಲೆಯ ಮೂಸಾ ಸಮೀಪ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಮನ್ನು ಖುಸ್ಸಾ ಎಕೆ 47 ರೈಫಲ್‍ನಿಂದ ಸಿಧು ಅವರ ಮೇಲೆ ಮೊದಲು ಗುಂಡುಗಳನ್ನು ಹಾರಿಸಿದ್ದ ಎನ್ನಲಾಗಿತ್ತು. ಪ್ರಕರಣ ಸಂಬಂಧ ಇಂದು (ಜುಲೈ 20) ಸಿಧು ಮೂಸೆ ವಾಲಾ ಅವರ ಹತ್ಯೆ ಮಾಡಿದ್ದರು ಎನ್ನಲಾದ ಶಂಕಿತ ಆರೋಪಿಗಳನ್ನು ಪಂಜಾಬ್ ಪೊಲೀಸರು ಎನ್‍ಕೌಂಟರ್ (Encounter) ಮಾಡಿದ್ದಾರೆ. ಇಂದು ಬೆಳಗ್ಗೆ ಕ್ರಿಮಿನಲ್‍ಗಳು ಮತ್ತು ಪಂಜಾಬ್ (Punjab) ಪೊಲೀಸ್ (Police) ನಡುವೆ ಗುಂಡಿನ ಕಾಳಗ ನಡೆದಿದೆ. ಆಗ ಪೊಲೀಸರು ಆರೋಪಿಗಳಿಗೆ ಗುಂಡು ಹಾರಿಸಿದ್ದಾರೆ. ಪೊಲೀಸರ ಗುಂಡಿಗೆ ಹತ್ಯೆಕೋರರ ಪ್ರಾಣ ಹೋಗಿದೆ. ಅಟ್ಟಾರಿ ಗಡಿ ಸಮೀಪದ ಹೋಶಿಯಾರ್ ನಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ.


ಗಾಯಕನನ್ನು ಕೊಂದವರಿಗೆ ಗುಂಡೇಟು
ಅಮೃತಸರದಲ್ಲಿ ಇಂದು ಬೆಳಗ್ಗೆ ಪಂಜಾಬ್ ಪೊಲೀಸರು ಮತ್ತು ಗಾಯಕ ಸಿಧು ಮೂಸ್ ವಾಲಾ ಹತ್ಯೆಯಲ್ಲಿ ಭಾಗಿಯಾದ ಆರೋಪಿಗಳ ನಡುವೆ ಎನ್‍ಕೌಂಟರ್ ನಡೆಯಿತು. ಅಟ್ಟಾರಿ ಗಡಿ ಸಮೀಪದ ಹೋಶಿಯಾರ್ ನಗರ ಗ್ರಾಮದಲ್ಲಿ ನಡೆದ ಗುಂಡಿನ ಚಕಮಕಿ ನಡೆಯಿತು. ಗುಂಡಿನ ಚಕಮಕಿಯಲ್ಲಿ ಸಿಧು ಮೂಸೆವಾಲಾನನ್ನು ಕೊಂದ ಗ್ಯಾಂಗ್‍ನ ಇಬ್ಬರ ಮೇಲೆ ಶೂಟೌಟ್ ಮಾಡಿ ಕೊಲ್ಲಲಾಗಿದೆ. ಇಬ್ಬರನ್ನು ಮನ್‍ಪ್ರೀತ್ ಸಿಂಗ್ ಅಲಿಯಾಸ್ ಮನ್ನು ಕುಸಾ ಮತ್ತು ಜಗ್ರೂಪ್ ಸಿಂಗ್ ರೂಪ ಎಂದು ಗುರುತಿಸಲಾಗಿದೆ. ಮೂಸ್ ವಾಲಾನನ್ನು ಕೊಂದ ಶೂಟರ್‍ಗಳು ಅಂದಿನಿಂದ ತಲೆಮರೆಸಿಕೊಂಡಿದ್ದರು ಎಂದು ಪೆÇಲೀಸರು ತಿಳಿಸಿದ್ದಾರೆ.


ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಹತ್ಯೆ
ಸಿಧು ಮೂಸೆವಾಲಾನನ್ನು ಕೊಂದ ಆರೋಪಿಗಳು ಜೂನ್ 21 ರಂದು ಮೊಗಾ ಜಿಲ್ಲೆಯ ಸಮಲ್ಸರ್‍ನಲ್ಲಿ ಬೈಕ್‍ನಲ್ಲಿ ಹೋಗುತ್ತಿರುವುದು ಸಿಸಿಟಿಯ ದೃಶ್ಯಗಳಿಂದ ದೃಢಪಟ್ಟಿತ್ತು. ಅದರ ಆಧಾರದ ಮೇಲೆ ಇಂದು ಕಾರ್ಯಾಚರಣೆ ನಡೆದಿದೆ. ಆರೋಪಿಗಳು ಭಾರತ- ಪಾಕಿಸ್ತಾನ ಗಡಿಯಿಂದ ಸುಮಾರು 10 ಕಿಮೀ ದೂರದಲ್ಲಿರುವುದ ಖಚಿತವಾಗಿತ್ತು. ಆದ್ದರಿಂದ ಆ ಪ್ರದೇಶವನ್ನು ಆಂಟಿ ಗ್ಯಾಂಗ್‍ಸ್ಟರ್ ಪಡೆಯ ಪೊಲೀಸ್ ತಂಡಗಳು, ರಾಜ್ಯ ವಿಶೇಷ ಕಾರ್ಯಾಚರಣೆ ಘಟಕ ಮತ್ತು ಸಂಘಟಿತ ಅಪರಾಧ ನಿಯಂತ್ರಣ ಘಟಕಗಳು ಸುತ್ತುವರೆದಿದ್ದವು.


ಶರಣಾಗದಿದ್ದಕ್ಕೆ ಸಾವಿನ ಶಿಕ್ಷೆ
ಹೋಶಿಯಾರ್ ನಗರ ಗ್ರಾಮದಲ್ಲಿ ಸ್ಥಳೀಯರು ಹೊರಬರದಂತೆ ಪೊಲೀಸರು ಸೂಚಿಸಿ, ಆರೋಪಿಗಳು ಶರಣಾಗುವಂತೆ ಹೇಳಿದ್ರು. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಆದರೂ ಆರೋಪಿಗಳು ಪೊಲೀಸರ ಮಾತು ಕೇಳದೇ ಗುಂಡು ಹಾರಿಸದ್ದಾರೆ ಆಗ ಪೊಲೀಸರು ಶೂಟೌಟ್ ಮಾಡಿ ಆರೋಪಿಗಳನ್ನು ಕೊಂದಿದ್ದಾರೆ. ಘಟೆಯಲ್ಲಿ ಮೂವರು ಪೊಲೀಸರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.


ಕಾರ್ಯಾಚರಣೆ ಯಶಸ್ವಿಯಾಯ್ತು
ಗುಂಡಿನ ಚಕಮಕಿಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಎಡಿಜಿಪಿ ದರೋಡೆಕೋರರ ನಿಗ್ರಹ ಕಾರ್ಯಪಡೆ ಪ್ರಮೋದ್ ಬಾನ್, ಮೂಸೆ ವಾಲಾನನ್ನು ಕೊಂದ ಇಬ್ಬರನ್ನು ಎನ್‍ಕೌಂಟರ್​ನಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟಿದ್ದರಿಂದ ಕಾರ್ಯಾಚರಣೆ ಯಶಸ್ವಿಯಾಗಿದೆ. ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಶಾರ್ಪ್ ಶೂಟರ್​ಗಳು ಎನ್‍ಕೌಂಟರ್​ನಲ್ಲಿ ಕೊಲ್ಲಲ್ಪಟ್ಟರು. ಸ್ಥಳದಿಂದ ಪೊಲೀಸರು ಎಕೆ-47 ಮತ್ತು ಪಿಸ್ತೂಲ್ ಜೊತೆಗೆ ಭಾರೀ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಮೂವರು ಪೊಲೀಸರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಿದರು.


ಸಿಧು ಮೂಸೆ ವಾಲಾ ಹತ್ಯೆ ದಿನ ಆಗಿದ್ದೇನು?
ಕಾಂಗ್ರೆಸ್ ನಾಯಕ ಮತ್ತು ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರನ್ನು ಮೇ 29 ಮಾನ್ಸಾ ಜಿಲ್ಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮೂಸೆವಾಲಾ ಸೇರಿದಂತೆ 424 ಜನರ ಭದ್ರತೆಯನ್ನು ಹಿಂತೆಗೆದುಕೊಂಡ ಕೇವಲ ಒಂದು ದಿನದ ನಂತರ ಈ ಭೀಕರ ಘಟನೆ ನಡೆದಿತ್ತು. ಪಂಜಾಬ್ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರಿದ್ದ ಜನಪ್ರಿಯ ಪಂಜಾಬಿ ಗಾಯಕ ಮತ್ತು ರಾಪರ್ ಸಿಧು ಮೂಸೆ ವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.


ಇದನ್ನೂ ಓದಿ: Air Ambulance: ₹ 1 ಕೋಟಿಗಿಂತ ಹೆಚ್ಚು ಖರ್ಚು ಮಾಡಿ ಅಮೆರಿಕಾದಿಂದ ಭಾರತಕ್ಕೆ ಹೃದಯ ಚಿಕಿತ್ಸೆಗೆ ಬಂದ ಮಹಿಳೆ!


ಮೂಸ್ ವಾಲಾ ಅವರು ಮಾನ್ಸಾದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್‍ನಡಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ಎಎಪಿಯ ಡಾ ವಿಜಯ್ ಸಿಂಗ್ಲಾ ವಿರುದ್ಧ 63,323 ಮತಗಳ ಅಂತರದಿಂದ ಪರಾಭವಗೊಂಡಿದ್ದರು.


ವಿವಾದಾತ್ಮಕ ಗಾಯಕ
ಮಾನ್ಸಾ ಜಿಲ್ಲೆಯ ಮೂಸಾ ಎಂಬ ಹಳ್ಳಿಯಿಂದ ಬಂದ ಮೂಸ್ ವಾಲಾ ಅವರು ಕಳೆದ ವರ್ಷ ನವೆಂಬರ್​ನಲ್ಲಿ ಹೆಚ್ಚಿನ ಅಭಿಮಾನಿಗಳ ನಡುವೆ ಕಾಂಗ್ರೆಸ್‍ಗೆ ಸೇರಿದ್ದರು. ಮಾನಸಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡುವುದರೊಂದಿಗೆ, ಮಾನಸ ಹಾಲಿ ಶಾಸಕ ನಜರ್ ಸಿಂಗ್ ಮನ್ಶಾಹಿಯಾ ಅವರು ವಿವಾದಾತ್ಮಕ ಗಾಯಕನ ಉಮೇದುವಾರಿಕೆಯನ್ನು ವಿರೋಧಿಸುವುದಾಗಿ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದರು.


ಇದನ್ನೂ ಓದಿ: GST Hike: ಸಣ್ಣಪುಟ್ಟ ಅಂಗಡಿಗಳ ಸರಕು ಸಾಮಾಗ್ರಿ ಮೇಲೆ ಜಿಎಸ್‍ಟಿ ಹೇರಲ್ಲ, ಕೇರಳ ಸರ್ಕಾರ ಘೋಷಣೆ


ಭದ್ರತೆ ಹಿಂತೆಗೆತದ ಮರುದಿನವೇ ದುರ್ಘಟನೆ
ಭಗವಂತ್ ಮಾನ್ ಸರ್ಕಾರ ಮೂಸೆ ವಾಲಾ ಅವರ ಭದ್ರತೆಯನ್ನು ಹಿಂತೆಗೆದುಕೊಂಡ ಒಂದು ದಿನದ ನಂತರ ಪಂಜಾಬಿ ಗಾಯಕ-ರಾಜಕಾರಣಿ ಸಿಧು ಮೂಸೆವಾಲಾ ಅವರನ್ನು ಮಾನ್ಸಾದ ಹಳ್ಳಿಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.

Published by:Savitha Savitha
First published: