ಹೈದ್ರಾಬಾದ್​ ಅವಳಿ ಸ್ಪೋಟ: ಇಬ್ಬರಿಗೆ ಗಲ್ಲು; ಮತ್ತೊಬ್ಬನಿಗೆ ಜೀವವಾಧಿ

news18
Updated:September 10, 2018, 7:35 PM IST
ಹೈದ್ರಾಬಾದ್​ ಅವಳಿ ಸ್ಪೋಟ: ಇಬ್ಬರಿಗೆ ಗಲ್ಲು; ಮತ್ತೊಬ್ಬನಿಗೆ ಜೀವವಾಧಿ
news18
Updated: September 10, 2018, 7:35 PM IST
ನ್ಯೂಸ್​ 18 ಕನ್ನಡ

ಹೈದ್ರಾಬಾದ್​ನಲ್ಲಿ ನಡೆದ​ ಅವಳಿ ಸ್ಪೋಟಕ್ಕೆ ಕಾರಣವಾಗಿದ್ದ ಇಬ್ಬರು ಅಪರಾಧಿಗಳಿಗೆ ಅಲ್ಲಿನ ​ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2007ರಲ್ಲಿ ಹೈದ್ರಾಬಾದ್​ನ ಲುಂಬಿನಿ ಪಾರ್ಕ್​ ಹಾಗೂ ಗೋಕುಲ್​ ಚಾಟ್​ನಲ್ಲಿ ಇವರು ಬಾಂಬ್​ ಸ್ಪೋಟಿಸಿ 44 ಜನರ ಸಾವಿಗೆ ಕಾರಣವಾಗಿದ್ದರು. ಅಲ್ಲದೇ ಈ ಘಟನೆಯಲ್ಲಿ 68 ಜನ ಗಂಭೀರವಾಗಿ ಗಾಯಗೊಂಡಿದ್ದರು.

ಈ ಕುರಿತು ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್​ ನ್ಯಾಯಾಲಯ ಅನೀಖ್​ ಶಫೀಖ್ ಸಯ್ಯದ್​​, ಅಕ್ಬರ್​ ಇಸ್ಮಾಯಿಲ್ ಚೌಧರಿ​ಗೆ ಗಲ್ಲು ಶಿಕ್ಷೆ ವಿಧಿಸಿದೆ, ಇವರಿಗೆ ಸಹಾಯ ಮಾಡಿದ್ದ ಪ್ರಕರಣದ ಮೂರನೇ ಆರೋಪಿಯಾಗಿದ್ದ ತಾರೀಖ್​ ಅಜುಮಾಮ್​  ಜೀವವಾಧಿ ಶಿಕ್ಷೆಯನ್ನು ನೀಡಿದೆ,

11 ವರ್ಷಗಳ ಪ್ರಕರಣವನ್ನು  ಸೆ.4ರಂದು ವಿಚಾರಣೆ ನಡೆಸಿದ ಎರಡನೇ ಹೆಚ್ಚು ವರಿ ಮೆಟ್ರೋಪಾಲಿಟನ್​ ಸೆಷನ್​ ನ್ಯಾಯಾಧೀಶರಾದ ಟಿ ಶ್ರೀನಿವಾಸ್​ ರಾವ್​ ಅನೀಖ್​ ಹಾಗೂ ಮೊಹಮ್ಮದ್ ದೋಷಿ ಎಂದು ತಿಳಿಸಿತ್ತು.  ಆದರೆ ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಫಾರುಕ್​ ಶ್ರಾಫುದ್ಧೀನ್​ ತಾರಕ್ಷ ಮತ್ತು ಮೊಹಮ್ಮದ್​ ಸಾದೀಕ್​ ಇಸ್ರಾರ್​ ಅಹ್ಮದ್​ ಶೇರ್ಖ್ ವಿರುದ್ಧ ಸಾಕಷ್ಟು ಪುರಾವೆಗಳಿಲ್ಲ ಎಂದು ತಿಳಿಸಿತ್ತು .

2007ರಲ್ಲಿ ಗೋಕುಲ್​ ಚಾಟ್ಸ್​ ನಲ್ಲಿ ನಡೆದ ಬಾಂಬ್​ ಸ್ಪೋಟದಲ್ಲಿ 32 ಜನ ಸಾವನ್ನಪ್ಪಿ, 47 ಜನ ಗಾಯಗೊಂಡಿದ್ದರು. ಲುಂಬಿನಿ ಪಾರ್ಕ್​ ನಡೆದ ಸ್ಪೋಟದಲ್ಲಿ 12 ಜನ ಸಾವನ್ನಪ್ಪಿ, 21ಜನ ಗಾಯಗೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್​ ಮುಜಾಹಿದ್ದೀನ್​ ಸಂಸ್ಥಾಪಕರಾದ ರಿಯಾಜ್​ ಭಟ್ಕಳ್​ ಮತ್ತು ಆತನ ಸಹೋಧರ ಇಕ್ಬಾಲ್​ ಮತ್ತು ಅಮೀರ್​ ರೆಜಾ ಖಾನ್​ ಮೇಲೆಯೂ ಚಾರ್ಜ್​ ಶೀಟ್​ ವಿಧಿಸಲಾಗಿತ್ತು. ಆದರೆ ಇವರುಗಳು ತಲೆ ಮರೆಸಿಕೊಂಡಿದ್ದರು.
Loading...

ಈ ಐವರ ಮೇಲಿನ ಪ್ರಕರಣದ ವಿಚಾರಣೆ ಮೊದಲು ಚೆರ್ಲಪಲ್ಲಿ ಕೇಂದ್ರ ಕಾರಗೃಹದಲ್ಲಿಂ ನಾಪಲ್ಲಿ ನ್ಯಾಯಾಲಯದ ಸಂಕೀರ್ಣಕ್ಕೆ ಕಳೆದ ಜೂನ್​ನಲ್ಲಿ ವರ್ಗಗೊಂಡಿತ್ತು.

 
First published:September 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ