Parag Agrawal​ ಸಿಇಒ ಆಗುತ್ತಿದ್ದಂತೆ ಟ್ವಿಟರ್​ ತೊರೆದ ಹಿರಿಯ ಅಧಿಕಾರಿಗಳು; ಕಾರಣ ಇದು!

ಪರಾಗ್ (Parag Agarwal) ನಮ್ಮ (Twitter) ಕೆಲಸವನ್ನು ಸುಧಾರಿಸಲು ಮತ್ತು ನಮ್ಮ ಗುರಿಗಳನ್ನು ಸಾಧಿಸಲು ಗಮನಹರಿಸಿದ್ದಾರೆ

ಪರಾಗ್​ ಅಗರ್ವಾಲ್

ಪರಾಗ್​ ಅಗರ್ವಾಲ್

  • Share this:
    ಜಾಕ್​ ಡೋರ್ಸೆ (Jack Dorsey) ಟ್ವಿಟರ್​ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಕಂಪನಿ ಭಾರತೀಯ ಮೂಲದ ಬಾಂಬೆ ಐಐಟಿ ಪದವೀಧರ ಪರಾಗ್​ ಅಗರ್ವಾಲ್ (Parag Agrawal)​ ಅವರನ್ನು ಕಂಪನಿ ಸಿಇಒ ಆಗಿ ನೇಮಿಸಿತು. ಭಾರತೀಯ ಪರಾಗ್​ ಅಗರ್ವಾಲ್​ ಟ್ವಿಟರ್​ ಸಿಇಒ ಆಗುತ್ತಿದ್ದಂತೆ ಅನೇಕ ಭಾರತೀಯರು ಹರ್ಷ ವ್ಯಕ್ತಪಡಿಸಿದ್ದರು. 2017 ರಿಂದ ಟ್ವಿಟರ್​ನಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿ ಸ್ಥಾನವನ್ನು ಹೊಂದಿದ್ದ ಪರಾಗ್​ ಅಗರ್ವಾಲ್​ ಅನೇಕ ಅಚ್ಚರಿಯನ್ನು ಮೂಡಿಸಿತು. ಈ ನಡುವೆ ಕಂಪನಿಯ ಇಬ್ಬರು ಹಿರಿಯ ಅಧಿಕಾರಿಗಳು ಕಂಪನಿ ತೊರೆದಿರುವುದು ಸದ್ಯ ದೊಡ್ಡ ಸುದ್ದಿಯಾಗಿದೆ.

    ಈ ಸಂಬಂಧ ವರದಿ ಮಾಡಿರುವ ವಾಷಿಂಗ್ಟನ್​ ಪೋಸ್ಟ್​, 2019 ರಲ್ಲಿ ಟ್ವಿಟರ್ ಕಂಪನಿಗೆ ಸೇರಿದ ಮುಖ್ಯ ವಿನ್ಯಾಸ ಅಧಿಕಾರಿ ಡಾಂಟ್ಲಿ ಡೇವಿಸ್ ಮತ್ತು 2011 ರಿಂದ ಟ್ವಿಟರ್‌ನಲ್ಲಿ ಕೆಲಸ ಮಾಡುತ್ತಿರುವ ಇಂಜಿನಿಯರಿಂಗ್ ಮುಖ್ಯಸ್ಥ ಮೈಕೆಲ್ ಮೊಂಟಾನೊ ಅವರು ತಮ್ಮ ಸ್ಥಾನದಿಂದ ಕೆಳಗೆ ಇಳಿದಿದ್ದಾರೆ.

    ಕಂಪನಿಯ ಹಿರಿಯ ಅಧಿಕಾರಿಗಳ ನಿರ್ಗಮನ ಕುರಿತು ತಿಳಿಸಿರುವ ಕಂಪನಿ, ಹಿರಿಯ ಅಧಿಕಾರಿಗಳು ಹುದ್ದೆ ತೊರೆದ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಅಲ್ಲದೇ ಪರಾಗ್ ನಮ್ಮ ಕೆಲಸವನ್ನು ಸುಧಾರಿಸಲು ಮತ್ತು ನಮ್ಮ ಗುರಿಗಳನ್ನು ಸಾಧಿಸಲು ಟ್ವಿಟರ್ ಅನ್ನು ಸಿದ್ಧಪಡಿಸುವಲ್ಲಿ ಗಮನಹರಿಸಿದ್ದಾರೆ. ಈ ಉದ್ದೇಶವನ್ನು ಗಮನದಲ್ಲಿರಿಸಿಕೊಂಡು ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

    ಮರು ಸಂಘಟನೆಗೆ ಮುಂದಾದ ಅಗರ್ವಾಲ್​

    ಪರಾಗ್ ಅಗರವಾಲ್ ಅವರು ಅಮೆರಿಕದ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್‌ಗೆ ಸಲ್ಲಿಸಿದ ಪ್ರಕಾರ, ಕಂಪನಿಯಲ್ಲಿನ ಉನ್ನತ ಕಾರ್ಯನಿರ್ವಾಹಕರ ಬದಲಾವಣೆಗೆ ಮುಂದಾಗಿದ್ದು, ಈ ಮೂಲಕ ಮರು ಸಂಘಟನೆಗೆ ಒತ್ತು ನೀಡಿದ್ದಾರೆ.

    ಇದನ್ನು ಓದಿ: Twitter​ ನೂತನ ಸಿಇಒ ಪರಾಗ್​ ಅಗ್ರವಾಲ್ ಅವರ ವಾರ್ಷಿಕ​ ಸಂಬಳ ಎಷ್ಟು? ಇಲ್ಲಿದೆ ಮಾಹಿತಿ

    ಟ್ವಿಟರ್‌ನ ಸಾಂಸ್ಥಿಕ ಮಾದರಿಯಲ್ಲಿ ಬದಲಾವಣೆಗಳು ಬ ಇರುತ್ತವೆ. ಅಗರ್ವಾಲ್​​ ನಾಯಕತ್ವ ತಂಡವನ್ನು ಗ್ರಾಹಕ, ಆದಾಯ ಮತ್ತು ಕೋರ್ ಟೆಕ್‌ಗಾಗಿ ಜನರಲ್ ಮ್ಯಾನೇಜರ್ ಮಾದರಿಗೆ ಬದಲಾಯಿಸುತ್ತಿದ್ದಾರೆ ಎಂದು ಟ್ವಿಟರ್ ಸಾರ್ವಜನಿಕ ಫೈಲಿಂಗ್‌ನಲ್ಲಿ ತಿಳಿಸಿದೆ. ಇವುಗಳನ್ನು ಕೇವೊನ್ ಬೇಕ್‌ಪೌರ್, ಬ್ರೂಸ್ ಫಾಲ್ಕ್ ಮತ್ತು ನಿಕ್ ಕಾಲ್ಡ್‌ವೆಲ್ ಮುನ್ನಡೆಸಲಿದ್ದಾರೆ.

    ಇದನ್ನು ಓದಿ: IIT Bombayಯಿಂದ Twitter CEOವರೆಗೆ ಪರಾಗ್​ ಅಗರ್ವಾಲ್​ ಕುರಿತ ಕೆಲವು ಮಾಹಿತಿ!

    ಟ್ವಿಟರ್​ ತೊರೆದ ಡೋರ್ಸೆ

    ಜಾಕ್​ ಡೋರ್ಸೆ ಸ್ಕ್ವೇರ್ ಐಎನ್​ಸಿ ಕಡೆಗೆ ಅಧಿಕ ಗಮನ ನೀಡುತ್ತಿದ್ದಾರೆ, ಟ್ವಿಟರ್ ಕಡೆಗೆ ಗಮನಹರಿಸುತ್ತಿಲ್ಲ ಎಂದು ಟ್ವಿಟರ್​ನ ಪಾಲುದಾರ ಸಂಸ್ಥೆ ಎಲಿಯಟ್ ಮ್ಯಾನೇಜ್​ಮೆಂಟ್ ಕಾರ್ಪ್ ಈ ಮೊದಲು ಆರೋಪ ಮಾಡಿತ್ತು. ಅಷ್ಟೇ ಅಲ್ಲದೆ, ಡೋರ್ಸೆ ಟ್ವಿಟರ್ ಸಿಇಒ ಸ್ಥಾನದಿಂದ ಕೆಳಗೆ ಇಳಿಯಬೇಕು ಎಂದು 2020ರ ಆರಂಭದಲ್ಲಿ ಒತ್ತಾಯಿಸಿತ್ತು. ಟ್ವಿಟರ್ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ರಾಜೀನಾಮೆ ನೀಡಿರುವ ಬಗ್ಗೆ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಟ್ವೀಟ್​ನಲ್ಲಿ ಲಗತ್ತಿಸಿದ್ದಾರೆ. ಇದನ್ನು ಯಾರಾದರೂ ಕೇಳಿಸಿಕೊಂಡಿರಾ ಎಂದು ಖಚಿತವಿಲ್ಲ. ಆದರೆ, ನಾನು ಟ್ವಿಟರ್​ಗೆ ರಾಜೀನಾಮೆ ನೀಡಿದ್ದೇನೆ ಎಂದು ಬರೆದುಕೊಂಡಿದ್ದರು

    $1.52 ಮಿಲಿಯನ್ ಸಂಪತ್ತು ಒಡೆಯ ಪರಾಗ್​ ಅಗರ್ವಾಲ್​​

    ಭಾರತೀಯ ಮೂಲದ ಪರಾಗ್‌ ಅಗರ್ವಾಲ್‌ ಅವರು 2017ರಿಂದ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಅವರಿಗೆ ಸಿಇಒ ಸ್ಥಾನ ನೀಡಲಾಗಿದ್ದು, ನಿರ್ದೇಶಕರ ಮಂಡಳಿಯ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ. ಪರಾಗ್ ಅಗರವಾಲ್ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಬಿ ಟೆಕ್ ಅಧ್ಯಯನ ಮಾಡಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ತಮ್ಮ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ.  ಪರಾಗ್‌ ಅಗರ್ವಾಲ್‌ ಅವರು ಟ್ವಿಟ್ಟರ್‌ಗೆ ಸೇರುವ ಮೊದಲು ಮೈಕ್ರೋಸಾಫ್ಟ್, ಯಾಹೂ ಮತ್ತು AT&T ಲ್ಯಾಬ್ಸ್‌ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವವಿದೆ.  ವರದಿಗಳ ಪ್ರಕಾರ ಪರಾಗ್ $1.52 ಮಿಲಿಯನ್ ಸಂಪತ್ತು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
    Published by:Seema R
    First published: