Congress Election: ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆಯಲ್ಲಿ ವಿಳಂಬ ಏಕೆ? ಬಯಲಾಯ್ತು ಮಹತ್ವದ ಕಾರಣ!

ಗಾಂಧಿ ಕುಟುಂಬದ ಹೊರಗಿನವರು ಅಧ್ಯಕ್ಷರಾದರೆ ಪಕ್ಷ ಛಿದ್ರವಾಗುತ್ತದೆ ಎಂದು ಕಾಂಗ್ರೆಸ್‌ನ ಒಂದು ವರ್ಗದ ವಾದವಾಗಿದ್ದರೆ, ಇನ್ನೂ ಹಲವು ನಾಯಕರು ರಾಹುಲ್ ಗಾಂಧಿ ಅಧ್ಯಕ್ಷರಾಗಲು ಸಿದ್ಧರಿಲ್ಲದಿದ್ದರೆ ಲೋಕಸಭೆ ಚುನಾವಣೆಯವರೆಗೆ ಸೋನಿಯಾ ಗಾಂಧಿಯೇ ಮತ್ತೆ ಕಾಂಗ್ರೆಸ್​ ಅಧ್ಯಕ್ಷೆಯಾಗಿ ಮುಂದುವರೆಯುತ್ತಾರೆ ಎಂದು ಹೇಳುತ್ತಿದ್ದಾರೆ. ಹಾಗಾದ್ರೆ ಅಧ್ಯಕ್ಷರ ಆಯ್ಕೆಗೆ ಇಷ್ಟು ವಿಳಂಬ ಯಾಕಾಗುತ್ತಿದೆ?

ಸೋನಿಯಾ ಗಾಂಧಿ ಸಂಗ್ರಹ ಚಿತ್ರ

ಸೋನಿಯಾ ಗಾಂಧಿ ಸಂಗ್ರಹ ಚಿತ್ರ

  • Share this:
ನವದೆಹಲಿ(ಆ.23): ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ (Congress President Election) ಆಗಸ್ಟ್ 21 ರಿಂದ ಸೆಪ್ಟೆಂಬರ್ 20ರೊಳಗೆ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕಾಂಗ್ರೆಸ್ ಚುನಾವಣಾ ಸಮಿತಿಯು (Congress Election Committee) ಪ್ರಸ್ತಾಪಿಸಿತ್ತು. ಆದರೀಗ ಆಗಸ್ಟ್ 21 ಕಳೆದರೂ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಲಕ್ಷಣ ಕಾಣುತ್ತಿಲ್ಲ. ಮೂಲಗಳ ಪ್ರಕಾರ, ಕೆಲವು ದಿನಗಳ ಹಿಂದೆ, ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷದ ಹಿರಿಯ ನಾಯಕರೊಂದಿಗಿನ ಮಾತುಕತೆಯ ಸಂದರ್ಭದಲ್ಲಿ ಅಧ್ಯಕ್ಷರ ಸ್ಥಾನಕ್ಕೇರಲು ನಿರಾಕರಿಸಿದ್ದಾರೆನ್ನಲಾಗಿದೆ. ರಾಹುಲ್ ಗಾಂಧಿಯವರ ಈ ಹೆಜ್ಜೆಯ ನಂತರ ಪಕ್ಷದ ಹಿರಿಯ ನಾಯಕರು ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

2019ರಲ್ಲಿ ರಾಹುಲ್ ರಾಜೀನಾಮೆ ನೀಡಿದ್ದರು

2017 ರಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾದರು ಆದರೆ 2019 ರ ಲೋಕಸಭಾ ಚುನಾವಣೆಯ ನಂತರ ಸೋಲಿನ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದಾದ ಬಳಿಕ ಸೋನಿಯಾ ಗಾಂಧಿ ಅವರು ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷರಾದರು ಎಂಬುದು ಗಮನಾರ್ಹ. ಕಾಂಗ್ರೆಸ್‌ ರಚಿಸಿರುವ ಚುನಾವಣಾ ಸಮಿತಿ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರ ಪ್ರಕಾರ, ಆಗಸ್ಟ್ 21 ರಿಂದ ಸೆಪ್ಟೆಂಬರ್ 20 ರೊಳಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ದಿನಾಂಕವನ್ನು ಪ್ರಸ್ತಾಪಿಸಲಾಗಿದ್ದು, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ನಿರ್ಧಾರ ತೆಗೆದುಕೊಳ್ಳಬೇಕಿದೆ.

ಇದನ್ನೂ ಓದಿ: AICC: ರಾಹುಲ್ ಒಪ್ಪದಿದ್ದರೆ ಮುಂದಿನ ಕಾಂಗ್ರೆಸ್​ ಅಧ್ಯಕ್ಷ ಯಾರು? ಕೈ ಸಾರಥಿಯಾಗುವ ರೇಸ್​ನಲ್ಲಿ ದಿಗ್ಗಜ ನಾಯಕರು!

ಇದು ಚುನಾವಣೆ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ

ಮೂಲಗಳ ಪ್ರಕಾರ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೇರಲು ಆಸಕ್ತಿ ತೋರದಿರುವುದು ಚುನಾವಣೆ ವಿಳಂಬಕ್ಕೆ ಮೊದಲ ಕಾರಣವಾಗಿದ್ದರೆ, ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷರಾಗದಿದ್ದರೆ ಮುಂದಿನ ಅಧ್ಯಕ್ಷ ಯಾರು ಎಂಬ ವಿಚಾರ ಎರಡನೇ ಕಾರಣವಾಗಿದೆ. ಯಾಕೆಂದರೆ ಈ ರೇಸ್​​ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಅಶೋಕ್ ಗೆಹ್ಲೋಟ್, ಕೆ.ಸಿ.ವೇಣುಗೋಪಾಲ್, ಅಂಬಿಕಾ ಸೋನಿ ಮತ್ತು ಮುಕುಲ್ ವಾಸ್ನಿಕ್ ಸೇರಿ ಕಾಂಗ್ರೆಸ್​ನ ಹಲವು ಘಟಾನುಘಟಿ ನಾಯಕರ ಹೆಸರು ಚರ್ಚೆಯಾಗುತ್ತಿದೆ.

National Herald case Sonia Gandhi Rahul Gandhi same answer in front of ED officers
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ


ಆದರೆ, ಕಾಂಗ್ರೆಸ್‌ನ ಒಂದು ವರ್ಗವು ಗಾಂಧಿ ಕುಟುಂಬದ ಹೊರಗಿನವರು ಅಧ್ಯಕ್ಷರಾದರೆ, ಪಕ್ಷವು ವಿಭಜನೆಯಾಗುತ್ತದೆ ಎಂದು ಹೇಳುತ್ತಿದೆ. ಅಲ್ಲದೇ ರಾಹುಲ್ ಗಾಂಧಿ ಅಧ್ಯಕ್ಷರಾಗಲು ಸಿದ್ಧರಿಲ್ಲದಿದ್ದರೆ, ಲೋಕಸಭೆ ಚುನಾವಣೆಗೂ ಮುನ್ನ ಸೋನಿಯಾ ಗಾಂಧಿ ಅವರು ಮತ್ತೆ ಆಯ್ಕೆಯಾಗಬೇಕು ಎಂದು ಅನೇಕ ಹಿರಿಯ ನಾಯಕರ ಅಭಿಪ್ರಾಯವಾಗಿದೆ.

ಗಾಂಧಿ ಕುಟುಂಬದ ಹೊರಗಿನವರು ಅಧ್ಯಕ್ಷರಾದರೆ ದಲಿತ ನಾಯಕರೇ ಆಯ್ಕೆಯಾಗುತ್ತಾರೆ.

ಗಾಂಧಿ ಕುಟುಂಬದ ಹೊರಗಿನವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಬೇಕಾದರೆ ಹಿರಿಯ ದಲಿತ ನಾಯಕರೊಬ್ಬರು ಆಯ್ಕೆಯಾಗಬಹುದು ಎಂದು ಕೆಲವರು ಹೇಳುತ್ತಾರೆ. ಇದರಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸ್ಪರ್ಧೆಗೂ ತೆರೆ ಬೀಳುತ್ತದೆ. ಇನ್ನು ಈ ರೇಸ್​​ನಲ್ಲಿ ಕೇಂದ್ರದ ಮಾಜಿ ಸಚಿವ ಸುಶೀಲ್‌ಕುಮಾರ್ ಶಿಂಧೆ ಅವರ ಹೆಸರು ಚರ್ಚೆಗೆ ಬಂದಿದೆ ಎಂದು ಪಕ್ಷದ ಒಳಗಿನವರು ಹೇಳುತ್ತಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ, ಮುಕುಲ್ ವಾಸ್ನಿಕ್ ಹೆಸರುಗಳ ಬಗ್ಗೆಯೂ ಊಹಾಪೋಹಗಳಿವೆ. ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: India's Rising Talent: ಪ್ರತಿಭಾವಂತ ಯುವಕರಿಗೆ ಯುವ ಕಾಂಗ್ರೆಸ್‌ನಿಂದ ವಿಶಿಷ್ಟ ವೇದಿಕೆ, 'ಇಂಡಿಯಾಸ್ ರೈಸಿಂಗ್ ಟ್ಯಾಲೆಂಟ್'ಗೆ ಚಾಲನೆ

ಅಶೋಕ್ ಗೆಹ್ಲೋಟ್ ಹೊರತಾಗಿ ಈ ಕಾಂಗ್ರೆಸ್ ನಾಯಕರ ಹೆಸರುಗಳೂ ಚರ್ಚೆ

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತೊಮ್ಮೆ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದ್ದು, ಕೆಲವರು ಕಾಂಗ್ರೆಸ್‌ನ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರತ್ತ ಬೊಟ್ಟು ಮಾಡುತ್ತಿದ್ದಾರೆ. ಸ್ವಾತಂತ್ರ ದಿನದಂದು ಪಕ್ಷದ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ಮಾಡಲು ಬಂದ ಹಿರಿಯ ನಾಯಕಿ ಅಂಬಿಕಾ ಸೋನಿ ಅವರ ಆಯ್ಕೆಯ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ. ಅದರಲ್ಲಿ ಭವಿಷ್ಯದ ಬಗ್ಗೆ ಏನಾದರೂ ಸಂದೇಶ ಅಡಗಿದೆಯೇ ಎಂಬ ಕುತೂಹಲ ಜನರಲ್ಲಿದೆ. ಆದರೆ, ಕಾಂಗ್ರೆಸ್ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಹಿರಿಯ ನಾಯಕರೊಬ್ಬರು ಈ ಕೆಲಸವನ್ನು ನಿಯಮಿತವಾಗಿ ಮಾಡುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಕೊರೋನಾ ಪಾಸಿಟಿವ್ ಎಂಬ ಕಾರಣಕ್ಕೆ ಸಮಾರಂಭದಲ್ಲಿ ಸೋನಿಯಾ ಗಾಂಧಿ ಗೈರಾಗಿದ್ದರಿಂದ ಅಂಬಿಕಾ ಸೋನಿ ಧ್ವಜಾರೋಹಣ ನೆರವೇರಿಸಿದರು ಎನ್ನಲಾಗಿದೆ.
Published by:Precilla Olivia Dias
First published: