• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Supriya Sule: ಇನ್ನು ಹದಿನೈದೇ ದಿನದಲ್ಲಿ ಒಂದಲ್ಲಾ ಎರಡು ರಾಜಕೀಯ ಭೂಕಂಪನ! ಶರದ್ ಪವಾರ್ ಪುತ್ರಿ ಭವಿಷ್ಯ

Supriya Sule: ಇನ್ನು ಹದಿನೈದೇ ದಿನದಲ್ಲಿ ಒಂದಲ್ಲಾ ಎರಡು ರಾಜಕೀಯ ಭೂಕಂಪನ! ಶರದ್ ಪವಾರ್ ಪುತ್ರಿ ಭವಿಷ್ಯ

ಸುಪ್ರಿಯಾ ಸುಳೆ

ಸುಪ್ರಿಯಾ ಸುಳೆ

15 ದಿನಗಳಲ್ಲಿ ಎರಡು ರಾಜಕೀಯ ಭೂಕಂಪನ ಆಗಲಿದೆ ಎಂದು ಸುಪ್ರಿಯಾ ಸುಳೆ ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಅವರು ಹೇಳಿದಂತೆ ಶರದ್ ಪವಾರ್ ರಾಜೀನಾಮೆ ನೀಡಿದ್ದಾರೆ. ಇದೊಂದು ಭೂಕಂಪನ ಅನುಭವವೇ ಸರಿ. ಹಾಗಾದರೆ ಎರಡನೆಯದು ಯಾವುದು? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

  • Share this:

ರಾಜಕೀಯ (Politics) ಎಂದರೆ ಸಾಮಾನ್ಯವಲ್ಲ. ಇಲ್ಲಿ ಯಾರು, ಯಾವಾಗ ಮತ್ತು ಹೇಗೆ ತಮ್ಮ ವರಸೆ ಬದಲಾಯಿಸುತ್ತಾರೋ ಅಥವಾ ತಕ್ಷಣ ಏನಾದರೊಂದು ದೊಡ್ಡ ಬಾಂಬ್ ಸಿಡಿಸುವಂತಹ ಕಾರ್ಯ ಮಾಡುತ್ತಾರೋ ಹೇಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ರಾಜಕೀಯದಾಟಗಳು ಒಂದು ರೀತಿಯ ಕುತೂಹಲ ಹಾಗೂ ಉತ್ಸುಕತೆಯನ್ನು ಸದಾ ಹುಟ್ಟು ಹಾಕುತ್ತಿರುತ್ತವೆ. ಇದೀಗ ಎನ್.ಸಿ.ಪಿ (Nationalist Congress Party) ಮುಖ್ಯಸ್ಥ ಶರದ್ ಪವಾರ್​ (Sharad Pawar) ಅವರ ಪುತ್ರಿ ಸುಪ್ರಿಯಾ ಸುಳೆ (Supriya Sule) ಅವರು ಈ ಕೆಲ ದಿನಗಳ ಹಿಂದೆ ಎರಡು ಮಹತ್ತರ ರಾಜಕೀಯ ಸನ್ನಿವೇಶಗಳು ಸಂಭವಿಸಲಿವೆ ಎಂದು ಭವಿಷ್ಯ ನುಡಿದಿದ್ದರು. ಅದರಲ್ಲಿ ಒಂದು ಈಗ ಸಂಭವಿಸಿದಂತಾಗಿದೆ.


15 ದಿನಗಳಲ್ಲಿ ಎರಡು ರಾಜಕೀಯ ಭೂಕಂಪನ ಆಗಲಿದೆ ಎಂದು ಸುಪ್ರಿಯಾ ಸುಳೆ ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಅವರು ಹೇಳಿದಂತೆ ಶರದ್ ಪವಾರ್ ರಾಜೀನಾಮೆ ನೀಡಿದ್ದಾರೆ, ಇದೊಂದು ಭೂಕಂಪನ ಅನುಭವವೇ ಸರಿ. ಹಾಗಾದರೆ ಎರಡನೆಯದು ಯಾವುದು?


ಎನ್‌ಸಿಪಿ ನಾಯಕ ಶರದ್ ಪವಾರ್ ರಾಜೀನಾಮೆ


ಎನ್‌ಸಿಪಿ ನಾಯಕ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಏಪ್ರಿಲ್ 19 ರಂದು 15 ದಿನಗಳಲ್ಲಿ ಎರಡು ರಾಜಕೀಯ ಭೂಕಂಪಗಳು ಸಂಭವಿಸಲಿವೆ ಎಂದು ಹೇಳಿದ್ದರು. ಅಂತೇಯೇ ಶರದ್ ಪವಾರ್ ಅವರು ಎರಡು ದಶಕಗಳ ಹಿಂದೆ ಸ್ಥಾಪಿಸಿದ ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ 13 ನೇ ದಿನದಂದು ರಾಜೀನಾಮೆ ನೀಡಿದರು. ಇದು ಮೊದಲ ಭೂಕಂಪದ ಅನುಭವ ಅಂತ ಭಾವಿಸಬಹುದು. ಹಾಗಾದರೆ ಸುಪ್ರಿಯಾ ಉಲ್ಲೇಖಿಸಿದ ಎರಡನೇ ಭೂಕಂಪ ಯಾವುದು?


ಇದನ್ನೂ ಓದಿ: ಈ ಮೂವರು ಇನ್ನು 1 ವರ್ಷ ಡ್ರಿಂಕ್ಸ್ ಮಾಡೋ ಹಾಗೇ ಇಲ್ವಂತೆ! ಖಡಕ್ ಸೂಚನೆ ಕೊಟ್ಟ ಕೋರ್ಟ್


ಹಿರಿಯ ರಾಜಕಾರಣಿ ಶರದ್ ಪವಾರ್ ಅವರು ಮಂಗಳವಾರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷದ ಮೇಲಿನ ತಮ್ಮ 24 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿದ್ದಾರೆ.


ನವದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ರಾಜಕೀಯ ಭೂಕಂಪ


ಸುಪ್ರಿಯಾ ಸುಳೆ ಶರದ್ ಪವಾರ್ ಅವರ ಪುತ್ರಿಯಾಗಿದ್ದು ಅವರು ಶರದ್ ಪವಾರ್ ಅವರ ಹಿಂದಿನ ಕ್ಷೇತ್ರವಾದ ಬಾರಾಮತಿಯ ಲೋಕಸಭಾ ಸಂಸದರೂ ಆಗಿದ್ದಾರೆ. ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಏಪ್ರಿಲ್ 19 ರಂದು "ಎರಡು ರಾಜಕೀಯ ಭೂಕಂಪಗಳು ಸಂಭವಿಸಲಿವೆ, ಒಂದು ನವದೆಹಲಿ ಮತ್ತು ಇನ್ನೊಂದು ಮಹಾರಾಷ್ಟ್ರದಲ್ಲಿ ಮುಂದಿನ 15 ದಿನಗಳಲ್ಲಿ" ಎಂದು ಹೇಳಿದ್ದರು.


ಸುಪ್ರಿಯಾ ಸುಳೆ


ಸುಳೆಯವರ ಹೇಳಿಕೆಗಳ ಸಮಯವು ಮಹತ್ವದ್ದಾಗಿತ್ತು. ಮಹಾರಾಷ್ಟ್ರದಲ್ಲಿ ರಾಜಕೀಯ ಚದುರಂಗ ನಡೆಯುತ್ತಿದೆ ಮತ್ತು ಎಲ್ಲರ ಕಣ್ಣುಗಳು ಎನ್‌ಸಿಪಿ ನಾಯಕ ಅಜಿತ್ ಪವಾರ್ ಮೇಲೆ ನೆಟ್ಟಿದೆ. ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ಸೋದರಳಿಯ.


ಮಹಾರಾಷ್ಟ್ರದಲ್ಲಿ ಅಜಿತ್​  ಪವಾರ್ ಬಿಜೆಪಿ ಜತೆ ಕೈಜೋಡಿಸುತ್ತಾರಾ?


ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಬಿಜೆಪಿ ಜತೆ ಕೈಜೋಡಿಸಲಿದ್ದಾರೆ ಎಂಬ ಊಹಾಪೋಹಗಳು ಹೆಚ್ಚುತ್ತಿವೆ. ಮತ್ತು ಇದು ಭಾರತೀಯ ಜನತಾ ಪಕ್ಷ (ಬಿಜೆಪಿ) ಬೆಂಬಲದೊಂದಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಅಧಿಕಾರ ವಹಿಸಿಕೊಂಡ ಒಂದು ವರ್ಷದೊಳಗೆ ಆಗಲಿದೆ.


53 ಶಾಸಕರ ಪೈಕಿ 34 ಶಾಸಕರು ಅಜಿತ್ ಪವಾರ್ ಅವರು ಬಿಜೆಪಿಯೊಂದಿಗೆ ಕೈಜೋಡಿಸಲು ಮತ್ತು ಬಿಜೆಪಿ-ಸೇನಾ ಸರ್ಕಾರದ ಭಾಗವಾಗಲು ಆಂತರಿಕವಾಗಿ ಬೆಂಬಲಿಸಿದ್ದಾರೆ ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.


ಪ್ರಫುಲ್ ಪಟೇಲ್, ಸುನಿಲ್ ತಟ್ಕರೆ, ಚಗನ್ ಭುಜಬಲ್ ಮತ್ತು ಧನಂಜಯ್ ಮುಂಡೆ ಸೇರಿದಂತೆ ಪ್ರಮುಖ ನಾಯಕರು ಅಜಿತ್ ಪವಾರ್ ಅವರ ಉದ್ದೇಶಗಳನ್ನು ಬೆಂಬಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರವನ್ನು ಉರುಳಿಸಲು ಬಂಡಾಯದ ಬಾವುಟ ಹಾರಿಸಿದ 16 ಶಾಸಕರ ಅನರ್ಹತೆಗೆ ಸಂಬಂಧಿಸಿದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ತನ್ನ ತೀರ್ಪು ಪ್ರಕಟಿಸುವ ಮುನ್ನವೇ ವದಂತಿಗಳು ಹೆಚ್ಚುತ್ತಿವೆ. ಬಂಡಾಯದ ನೇತೃತ್ವವನ್ನು ಏಕನಾಥ್ ಶಿಂಧೆ ವಹಿಸಿದ್ದರು, ನಂತರ ಅವರು ಬಿಜೆಪಿಯೊಂದಿಗೆ ಕೈಜೋಡಿಸಿ ಸರ್ಕಾರ ರಚಿಸಿದರು.


ಶಿಂಧೆ ಅವರ ಸೇನೆಯ ವಿರುದ್ಧ ಪ್ರತಿಕೂಲ ತೀರ್ಪಿನ ಸಂದರ್ಭದಲ್ಲಿ, ಬಿಜೆಪಿ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಅಜಿತ್ ಪವಾರ್ ಮತ್ತು ಅವರ ಶಾಸಕರ ಸಹಾಯದ ಅಗತ್ಯವಿದೆ ಎಂದು ರಾಜಕೀಯ ವಿಮರ್ಶಕರು ನಂಬಿದ್ದಾರೆ. ಈಗ ಎರಡನೇಯ

First published: