71 ವರ್ಷಗಳ ಬಳಿಕ ಪಾಕಿಸ್ತಾನದ ಸಹೋದರಿಯ ಮಡಿಲು ಸೇರಿದ ಭಾರತದ ಸಹೋದರ

ಈ ಹಿಂದೆ ಕೂಡ ಇಂತಹದೊಂದು ಘಟನೆ ನಡೆದಿತ್ತು. ಭಜರಂಗಿ ಭಾಯಿಜಾನ್ ಚಿತ್ರದ ಕಥೆಯನ್ನೇ ಹೋಲುವ ಕಥೆಗೆ ಪಾಕಿಸ್ತಾನ ಸಾಕ್ಷಿಯಾಗಿತ್ತು

zahir | news18
Updated:November 27, 2018, 9:19 PM IST
71 ವರ್ಷಗಳ ಬಳಿಕ ಪಾಕಿಸ್ತಾನದ ಸಹೋದರಿಯ ಮಡಿಲು ಸೇರಿದ ಭಾರತದ ಸಹೋದರ
ಸಾಂದರ್ಭಿಕ ಚಿತ್ರ
  • News18
  • Last Updated: November 27, 2018, 9:19 PM IST
  • Share this:
ಆಗಸ್ಟ್​ 14, 1947 ರಂದು ಒಂದೆಡೆ ಭಾರತಕ್ಕೆ ಸ್ವಾತಂತ್ರ್ಯ ಸಿಗಲಿದೆ ಎಂಬ ಖುಷಿ, ಮತ್ತೊಂದೆಡೆ  ದೇಶ ವಿಭಜನೆ ದುಃಖ.  ಇಭ್ಭಾಗದ ನಂತರ, ಭಾರತದಿಂದ ಅನೇಕ ಮುಸ್ಲಿಂ ಕುಟುಂಬಗಳು ಪಾಕಿಸ್ತಾನಕ್ಕೆ ಹೋದರೆ, ವಿಭಾಗವಾಗಿ ಹೋದ ಪಂಜಾಬ್‌ ಪ್ರಾಂತ್ಯದಿಂದ ಹಿಂದೂ ಹಾಗೂ ಸಿಖ್ಖರು ಭಾರತಕ್ಕೆ ಬಂದಿದ್ದರು. ಇದರ ನಡುವೆ ಹುಟ್ಟಿಕೊಂಡಿದ್ದ ಮತೀಯ ಗಲಭೆ ಎರಡು ದೇಶಗಳಲ್ಲಿ ರಕ್ತಪಾತವನ್ನೇ ಹರಿಸಿತ್ತು. ಅಂದು ಹಲವರು ತಮ್ಮ ಒಡಹುಟ್ಟಿದವರನ್ನು ಬಿಟ್ಟು ಜೀವ ಉಳಿಸಿಕೊಳ್ಳಲು ದೇಶಕ್ಕೆ ಓಡಿ ಬಂದಿದ್ದರು. ಇನ್ನೂ ಕೆಲವರು ಪಾಕ್​ನಲ್ಲೇ ಉಳಿಯುವಂತಾಗಿತ್ತು.

ಹೀಗೆ ಬೇರ್ಪಟ್ಟ ಒಂದು ಕುಟುಂಬವು 71 ವರ್ಷಗಳ ಬಳಿಕ ಮತ್ತೆ ಒಂದಾಗಿದೆ. ಅದು ಕೂಡ ಗುರುನಾನಕ್ ಅವರ 550ನೇ ಜನ್ಮ ವಾರ್ಷಿಕೋತ್ಸವ ದಿನದಂದು. ಪ್ರಪಂಚದೆಲ್ಲೆಡೆ ಸಿಖ್ಖರು ಧರ್ಮಗುರುವಿನ ಜನ್ಮಚಾರಣೆಯಲ್ಲಿ ನಿರತರಾಗಿದ್ದರೆ ಪಂಜಾಬಿನ ಸಿಖ್ ವ್ಯಕ್ತಿಯೊಬ್ಬರು ಎಪ್ಪತ್ತು ವರ್ಷಗಳ ಬಳಿಕ ತನ್ನ ಸಹೋದರಿಯರರನ್ನು ಭೇಟಿಯಾದರು.

ಸಿಖ್ಖರ ಧರ್ಮಗುರು ನಾನಕ್ ಸಾಹೇಬ್​ ಅವರ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದಲ್ಲಿ ಭಾನುವಾರ ಗುರುದ್ವಾರ ಜನಮ್ ಆಸ್ಥಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಆ ಇಬ್ಬರು ಸಹೋದರಿಯರು ಮಾತ್ರ ತಮ್ಮ ಪ್ರೀತಿಯ ಸಹೋದರನಿಗಾಗಿ ಕಾದು ಕುಳಿತಿದ್ದರು.  71 ವರ್ಷಗಳ ಹಿಂದೆ ಬೇರ್ಪಟ್ಟಿದ್ದ ಸರ್ದಾರ್ ಬಯಾಂತ್ ಸಿಂಗ್ ಮತ್ತೆ ತನ್ನ ಸಹೋದರಿಯರಾದ ಉಲ್ಫಾತ್ ಮತ್ತು ಮಿರಾಜ್ ಬೀಬಿ ಅವರ ಮಡಿಲು ಸೇರಿದರು. ಇಂತಹದೊಂದು  ಭಾವನಾತ್ಮಕ ಪುರ್ನಮಿಲನಕ್ಕೆ ಅನೇಕರು ಸಾಕ್ಷಿಯಾದರು. ಸಹೋದರ-ಸಹೋದರಿಯರರ ಈ ಪುನರ್ ಭೇಟಿ ಅಲ್ಲಿದ್ದವರ ಕಣ್ಣನ್ನು ಅಕ್ಷರಶಃ ಒದ್ದೆಯಾಗಿಸಿತ್ತು.

ವಿಭಜನೆಯ ವೇಳೆ ಉಂಟಾದ ಗಲಭೆ ಮತ್ತು ಗಡಿರೇಖೆಯ ನಿರ್ಬಂಧದಿಂದ ಉಲ್ಫಾತ್ ಮತ್ತು ಮಿರಾಜ್ ಬೀಬಿ ಪಾಕಿಸ್ತಾನದಲ್ಲಿ ಉಳಿದರೆ, ಬಯಾಂತ್ ಸಿಂಗ್ ಭಾರತದಲ್ಲಿ ಬಾಕಿಯಾಗಿ ಬಿಟ್ಟಿದ್ದರು. ಅಲ್ಲದೆ ಈ ಈ ಸಂದರ್ಭದಲ್ಲಿ ಮತ್ತೊಂದು ಸಹೋದರಿ ಕೂಡ ಕಾಣೆಯಾಗಿದ್ದರು. ಆದರೆ ಬಯಾಂತ್ ಸಿಂಗ್ ಭಾರತದೆಲ್ಲೋ ಬದುಕಿದ್ದಾರೆ ಎಂಬುದು ತಾಯಿಯ ವಿಶ್ವಾಸವಾಗಿತ್ತು.

ಹೀಗಾಗಿ ಬಯಾಂತ್ ಅವರ ತಾಯಿ ತಮ್ಮ ಮಗನಿಗಾಗಿ ಹುಡುಕಾಟ ನಡೆಸಿದ್ದರು. ಅವಿಭಜಿತ ಭಾರತದ ಪರಾಚಾ ಗ್ರಾಮದಲ್ಲಿ ವಾಸವಾಗಿದ್ದ ಈ ಕುಟುಂಬ ನೆರೆಹೊರೆಯವರ ಸಹಾಯ ಪಡೆದು ಮತ್ತೆ ಸಂಪರ್ಕ ಸಾಧಿಸಲು ಪ್ರಯತ್ನ ನಡೆಸಿದರು. ಈ ಪ್ರಯತ್ನವು ಅಂತಿಮವಾಗಿ 71 ವರ್ಷಗಳ ಬಳಿಕ ಫಲ ನೀಡಿತು. ಅದರಂತೆ ಗುರುನಾನಕ್ ಜನ್ಮದಿನಾಚರಣೆ ಪ್ರಯುಕ್ತ ಪಾಕ್ ವೀಸಾ ಪಡೆದು ಸಹೋದರಿಯರನ್ನು ಭೇಟಿಯಾಗಲು ಬಯಾಂತ್ ತೆರಳಿದ್ದರು.

ನನಕನಾ ಸಾಹೀಬ್ ಪ್ರದೇಶದಲ್ಲಿರುವ ಕುಟುಂಬ ವರ್ಗವನ್ನು ಭೇಟಿಯಾಗಿರುವ ಬಯಾಂತ್ ವೀಸಾ ಅವಧಿ ಮುಗಿಯುತ್ತಿದ್ದಂತೆ ಮತ್ತೆ ಭಾರತಕ್ಕೆ ಹಿಂತಿರುಗಬೇಕಿದೆ. ಅದಾಗ್ಯೂ ಬಯಾಂತ್​ಗೆ ಪಾಕಿಸ್ತಾನದಲ್ಲಿ ರಾಷ್ಟ್ರೀಯತೆ ನೀಡುವಂತೆ ಸರ್ಕಾರದ ಮನವೊಲಿಸಲು ಕುಟುಂಬದವರು ಪ್ರಯತ್ನಿಸುತ್ತಿದ್ದಾರೆ. ಇದು ಸಾಧ್ಯವಾಗದಿದ್ದರೆ ವೀಸಾ ಅವಧಿ ವಿಸ್ತರಿಸುವಂತೆ ಸರ್ಕಾರವನ್ನು ಕೋರಲಾಗಿದೆ.

ಸಿಖ್‌ ಧರ್ಮ ಸಂಸ್ಥಾಪಕ ಗುರು ನಾನಕ್‌ ದೇವ್‌ ಅವರ 550ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡಂತೆ ತನ್ನ ನೆಲದಲ್ಲಿರುವ ಗುರುನಾನಕ್‌ ಅವರ ದೇರಾ ಬಾಬಾ ನಾನಕ್ ಸಾಹೀಬ್ ಗುರುದ್ವಾರವಿದೆ. ಈ ಪುಣ್ಯ ಸ್ಥಳಕ್ಕೆ ತೆರಳುವ ಹಾದಿಯನ್ನು ಭಾರತೀಯ ಸಿಖ್ಖರಿಗೆ ಪಾಕಿಸ್ತಾನ ಮುಕ್ತಗೊಳಿಸಿದೆ.ಇದನ್ನೂ ಓದಿ: 25 ಕೋಟಿ ಸಿಮ್ ಕಾರ್ಡ್​ ಬ್ಲಾಕ್?: ಇದರಲ್ಲಿ ನಿಮ್ಮ ನಂಬರ್​ ಇದೆಯೇ ಪರೀಕ್ಷಿಸಿಕೊಳ್ಳಿ

ಈ ಹಿಂದೆ ಕೂಡ ಇಂತಹದೊಂದು ಘಟನೆ ನಡೆದಿತ್ತು. ಭಜರಂಗಿ ಭಾಯಿಜಾನ್ ಚಿತ್ರದ ಕಥೆಯನ್ನೇ ಹೋಲುವ ಕಥೆಗೆ ಪಾಕಿಸ್ತಾನ ಸಾಕ್ಷಿಯಾಗಿತ್ತು. 13 ವರ್ಷಗಳ ಹಿಂದೆ ಗೀತಾ ಆಕಸ್ಮಿಕವಾಗಿ ಪಾಕ್​ಗೆ ತೆರಳಿದ್ದಳು. ಅಂದಿನಿಂದ ತನ್ನ ಹೆತ್ತವರಿಗಾಗಿ ಹಂಬಲಿಸುತ್ತಿದ್ದಳು. ಭಜರಂಗಿ ಭಾಯಿಜಾನ್ ಸಿನಿಮಾ ತೆರೆಕಂಡಿದ್ದರಿಂದ ಗೀತಾ ಪ್ರಕರಣ ಬೆಳಕಿಗೆ ಬಂದಿದೆ. ಅದರಂತೆ ಭಾರತದಲ್ಲಿರುವ ಗೀತಾಳ ಪೋಷಕರನ್ನು ಗುರುತಿಸಿ 14 ವರ್ಷಗಳ ಬಳಿಕ ಮಗಳನ್ನು ಹೆತ್ತವರ ಮಡಿಲು ಸೇರಿಸುವಲ್ಲಿ ಭಾರತ ಸರ್ಕಾರ ಪ್ರಮುಖ ಪಾತ್ರವಹಿಸಿತ್ತು.

ಇದನ್ನೂ ಓದಿ: ಅಂದು ಸೀರೆ ಮಾರುತ್ತಿದ್ದ ವ್ಯಾಪಾರಿ ಇಂದು 17 ಸಾವಿರ ಕೋಟಿ ಒಡೆಯ..!
First published: November 27, 2018, 9:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading