Shocking Video: ಬೀಚ್ ಎಂಜಾಯ್ ಮಾಡ್ತಿದ್ದವರನ್ನು ಎಳೆದೊಯ್ದ ತೆರೆ! ಶಾಕಿಂಗ್ ವಿಡಿಯೋ

ಸಮುದ್ರ ತೀರ, ಜಲಪಾತ, ಕೆರೆಗಳ ಸಮೀಪದಲ್ಲಿ ನೀವಿದ್ದಾಗ ಎಷ್ಟೇ ಜಾಗೃತರಾಗಿದ್ದರೂ ಸಾಲದು. ಹೆತ್ತವರ ಎಚ್ಚರಿಕೆ ಮಾತುಗಳನ್ನು ನಿರ್ಲಕ್ಷ್ಯ ಮಾಡಿ ಮೋಜು, ಮಸ್ತಿಯಲ್ಲಿ ಮೈಮರೆಯುವ ಮೊದಲು ಈ ವಿಡಿಯೋ ನೋಡಿ, ಕಣ್ಮುಂದೆಯೇ ಕೊಚ್ಚಿಹೋದ ಜನ! ನೋಡುತ್ತಾ ನಿಂತರೂ ರಕ್ಷಿಸಲಾಗಲಿಲ್ಲ

ಒಮನ್ ಬೀಚ್ ಅವಘಡ

ಒಮನ್ ಬೀಚ್ ಅವಘಡ

  • Share this:
ಒಮನ್(ಜು.14): ನದಿ, ಸಮುದ್ರ, ಕೆರೆಯ (Lake) ಸಮೀಪ ಬಹಳಷ್ಟು ಎಚ್ಚರಿಕೆಯಿಂದ (Careful) ಇರಬೇಕಾದ ಅಗತ್ಯವಿರುತ್ತದೆ. ಬಹಳಷ್ಟು ಎಚ್ಚರಿಕೆ ಫಲಕಗಳೂ, ಗಾರ್ಡ್ ಗಳ (Guard) ಎಚ್ಚರಿಕೆಯ ನಂತರೂ ಜನರು ಮೋಜಿನಲ್ಲಿ ಮೈಮರೆಯುತ್ತಾರೆ. ಮಳೆಗಾಲ (Monsoon) ಬಂತೆಂದರೆ ಇದು ದಿನನಿತ್ಯ ನಾವು ಕೇಳುವ ಸುದ್ದಿ. ಅಲ್ಲದೆಯೂ ಜನರು ಎಂಜಾಯ್ ಮಾಡುವ ಭರದಲ್ಲಿ ಅಪಾಯವನ್ನು ಗಮನಿಸುವುದೇ ಇಲ್ಲ. ಕೆಲವೊಮ್ಮೆ ಗಮನಿಸಿದರೂ ನಿರ್ಲಕ್ಷ್ಯ ಮಾಡುತ್ತಾರೆ. ಸಣ್ಣ ಪುಟ್ಟ ನಿರ್ಲಕ್ಷ್ಯಗಳಿಂದ (Negligence) ಜೀವ ಕಳೆದುಕೊಂಡ ಬಹಳಷ್ಟುಉದಾಹರಣೆಗಳನ್ನು (Example) ನಾವು ಕಾಣಬಹುದು.

ತೆರೆಗೆ ಕೊಚ್ಚಿ ಹೋದ ಮೂವರಲ್ಲಿ ಇಬ್ಬರ ಮೃತದೇಹ ಪತ್ತೆ

ಒಮನ್​ಗೆ (Oman) ತೆರಳಿದ್ದ ಭಾರತದ ಮಹಾರಾಷ್ಟ್ರ ಮೂಲದ ಮೂವರು ಬೀಚ್​ನಲ್ಲಿ  (Beach) ಎಂಜಾಯ್ ಮಾಡುತ್ತಿರುವಾಗಲೇ ಮೂವರು ತೆರೆಗೆ ಕೊಚ್ಚಿಹೋಗಿರುವ ವಿಡಿಯೋ ವೈರಲ್ ಆಗಿದೆ. ಸಲಾಲದ (Salala) ಅಲ್-ಮುಗ್‌ಸೈಲ್ ಬೀಚ್‌ನಲ್ಲಿ ನಾಪತ್ತೆಯಾಗಿದ್ದ ಮಹಾರಾಷ್ಟ್ರದ ಕುಟುಂಬದ ಮೂವರ ಪೈಕಿ ಇಬ್ಬರ ಮೃತದೇಹಗಳನ್ನು ರಕ್ಷಕರು ಪತ್ತೆ ಹಚ್ಚಿದ್ದಾರೆ.

ಈದ್ ಆಚರಣೆಗೆ ಒಮನ್​ಗೆ ತೆರಳಿದ್ದ ಫ್ಯಾಮಿಲಿ

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಾಟ್ ಗ್ರಾಮದ ಕುಟುಂಬ ದುಬೈನಲ್ಲಿ ವಾಸವಾಗಿದ್ದು, ಈದ್ ಆಚರಿಸಲು ಓಮನ್‌ಗೆ ತೆರಳಿದ್ದರು. 42 ವರ್ಷದ ಶಶಿಕಾಂತ್ ಮಹಾಮನೆ, ಅವರ ಒಂಬತ್ತು ವರ್ಷದ ಮಗಳು ಶ್ರುತಿ ಮತ್ತು ಆರು ವರ್ಷದ ಮಗ ಶ್ರೇಯಸ್ ಅರೇಬಿಯನ್ ಸಮುದ್ರದ ವಾಯುವ್ಯ ಭಾಗವಾದ ಓಮನ್ ಕೊಲ್ಲಿಯಲ್ಲಿ ನಾಪತ್ತೆಯಾದ ನಂತರ ವೆಕೇಷನ್ ದುರಂತವಾಯಿತು.

ಮಗಳ ಮೃತದೇಹವೂ ಸಿಗಲಿಲ್ಲ

ಶಶಿಕಾಂತ್ ಮತ್ತು ಅವರ ಪುತ್ರ ಶ್ರೇಯಸ್ ಮೃತದೇಹಗಳು ಪತ್ತೆಯಾಗಿವೆ. ಆದರೂ ಅವರ ಮಗಳು ಶ್ರುತಿ ಇನ್ನೂ ನಾಪತ್ತೆಯಾಗಿದ್ದು, ರಕ್ಷಕರು ಇನ್ನೂ ಅವಳನ್ನು ಹುಡುಕುತ್ತಿದ್ದಾರೆ.





ಇಬ್ಬರ ಮೃತದೇಹ ಮಾತ್ರ ಪತ್ತೆ

ಓಮನ್ ವರದಿಯ ಪ್ರಕಾರ, ಓಮನ್‌ನ ಸಿವಿಲ್ ಡಿಫೆನ್ಸ್ ಮತ್ತು ಆಂಬ್ಯುಲೆನ್ಸ್ ಅಥಾರಿಟಿ, "ಕಾಣೆಯಾದ ಇಬ್ಬರನ್ನು ಅಲ್-ಮುಗ್ಸೈಲ್ ಬೀಚ್‌ನಲ್ಲಿ ದೋಫರ್ ಗವರ್ನರೇಟ್‌ನಲ್ಲಿರುವ ಸಿವಿಲ್ ಡಿಫೆನ್ಸ್ ಮತ್ತು ಆಂಬ್ಯುಲೆನ್ಸ್ ಡಿಪಾರ್ಟ್‌ಮೆಂಟ್‌ನಲ್ಲಿ ಜಲ ರಕ್ಷಣಾ ತಂಡವು ಪತ್ತೆ ಮಾಡಿದೆ" ಎಂದು ಹೇಳಿದೆ.

ಇದನ್ನೂ ಒದಿ: Video Call: ಲವರ್​ಗೆ ವಿಡಿಯೋ ಕಾಲ್ ಮಾಡಿದ ಹೆಂಡತಿ! ಗಂಡ ಮಾಡಿದ್ದೇನು?

ಘಟನೆಯ ನಂತರ ರಾಯಲ್ ಓಮನ್ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಘಟನೆಯ ಅಪ್ಡೇಟ್​ಗಳನ್ನು ಹಂಚಿಕೊಂಡಿದ್ದಾರೆ.






ಎತ್ತರದ ಅಲೆಗಳನ್ನು ಎಂಜಾಯ್ ಮಾಡುತ್ತಿದ್ದ ಜನ

ಶಶಿಕಾಂತ್ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಎತ್ತರದ ಅಲೆಗಳನ್ನು ಆನಂದಿಸುತ್ತಿದ್ದರು. ದೊಡ್ಡ ಅಲೆ ಅವರ ಮಕ್ಕಳನ್ನು ಮತ್ತು ಇನ್ನೂ ಅನೇಕರನ್ನು ಕೊಚ್ಚಿಕೊಂಡು ಹೋಗಿದೆ.

ಬೆಚ್ಚಿ ಬೀಳಿಸುವ ವಿಡಿಯೋಗಳು ವೈರಲ್

ಇದಾದ ಮೇಲೆ ಶಶಿಕಾಂತ್ ಅವರನ್ನು ರಕ್ಷಿಸಲು ಸಮುದ್ರಕ್ಕೆ ಹಾರಿ ಸ್ವಲ್ಪ ಹೊತ್ತಿನ ನಂತರ ಅವರೂ ಕಣ್ಮರೆಯಾಗಿದ್ದರು. ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಶಿಕಾಂತ್ ಅವರು ಒಮಾನ್‌ಗೆ ಪ್ರಯಾಣಿಸುವಾಗ ಮತ್ತೊಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದರು, ಅದು ಕೂಡ ವೈರಲ್ ಆಗಿದೆ.

ಇದನ್ನೂ ಓದಿ: Photos: ನೈನಿ ಸೇತುವೆ ಈಗ ಹೊಸ ಸೆಲ್ಫೀ ಸ್ಪಾಟ್! ಚಂದದ ಸೇತುವೆ ಮೇಲೆ ಫೋಟೋ ಗಮ್ಮತ್ತು

ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಶಶಿಕಾಂತ್ ದುಬೈನ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಸಾರಿಕಾ, ಪುತ್ರಿ ಶ್ರುತಿ ಹಾಗೂ ಪುತ್ರ ಶ್ರೇಯಸ್ ಜತೆ ವಾಸವಾಗಿದ್ದರು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಶಶಿಕಾಂತ್ ಸಹೋದರ ರಾಜಕುಮಾರ್ ಮಹಾನೆ ದುಬೈಗೆ ತೆರಳಿದ್ದಾರೆ.
Published by:Divya D
First published: