ರಾಜ್ಯಸಭೆ ಉಪಸಭಾಪತಿ ಚುನಾವಣೆ: ಎನ್​ಡಿಎಗೆ ಕೈ ಕೊಡಲಿವೆಯಾ ಮಿತ್ರಪಕ್ಷಗಳು?

news18
Updated:August 7, 2018, 12:53 PM IST
ರಾಜ್ಯಸಭೆ ಉಪಸಭಾಪತಿ ಚುನಾವಣೆ: ಎನ್​ಡಿಎಗೆ ಕೈ ಕೊಡಲಿವೆಯಾ ಮಿತ್ರಪಕ್ಷಗಳು?
news18
Updated: August 7, 2018, 12:53 PM IST
ನ್ಯೂಸ್​18 ಕನ್ನಡ

ನವದೆಹಲಿ (ಆ. 7): ರಾಜ್ಯಸಭಾ ಉಪಸಭಾಪತಿ ಚುನಾವಣೆಗೆ ಎನ್​ಡಿಎ ಕಡೆಯಿಂದ ಜೆಡಿಯು ಸಂಸದ ಹರಿವಂಶ ನಾರಾಯಣ ಸಿಂಗ್​ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ.

ಈ ಸಂಬಂಧ ಗುರುವಾರ ನಡೆಯಲಿರುವ ಚುನಾವಣೆಯಲ್ಲಿ ಎನ್​ಡಿಎ ಮಿತ್ರಪಕ್ಷಗಳಲ್ಲಿ ಎರಡು ಪಕ್ಷಗಳು ಮತ ಚಲಾಯಿಸುವ ದಿನ ದೂರ ಉಳಿಯಲು ಯೋಚಿಸಿವೆ. ಶಿರೋಮಣಿ ಅಕಾಲಿದಳ ಮತ್ತು ಶಿವಸೇನೆ ಎನ್​ಡಿಎಯ ಈ ಆಯ್ಕೆಯಿಂದ ಅಸಮಾಧಾನಗೊಂಡಿವೆ. ಹಾಗಾಗಿ, ಆ ದಿನ ಗೈರು ಹಾಜರಾಗಲು ನಿರ್ಧರಿಸಿವೆ ಎನ್ನಲಾಗುತ್ತಿದೆ. ಬಿಜೆಪಿಗೆ ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಕಾರಣ ಗೆಲ್ಲಲು ಪ್ರಾದೇಶಿಕ ಪಕ್ಷಗಳ ಸಹಕಾರ ಬೇಕು.

ಹರಿವಂಶ ನಾರಾಯಣ್​ ಅವರು ಆ. 8ರಂದು ನಾಮಪತ್ರ ಸಲ್ಲಿಸಲಿದ್ದಾರೆ. 2014ರಿಂದ ಜೆಡಿಯು ರಾಜ್ಯಸಭಾ ಸದಸ್ಯರಾಗಿರುವ ಇವರು ವೃತ್ತಿಯಲ್ಲಿ ಪತ್ರಕರ್ತರಾಗಿದ್ದು, ಪ್ರಭಾತ್​ ಸಭಾ ಪತ್ರಿಕೆಯ ಸಂಪಾದಕರಾಗಿದ್ದಾರೆ. ಎನ್​ಡಿಎಯಿಂದ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಯಾಗಿರುವ ಹರಿವಂಶ ನಾರಾಯಣ ಸಿಂಗ್​ ಅವರಿಗೆ ಬೆಂಬಲ ನೀಡುವಂತೆ ಜೆಡಿಯು ಸಂಸದ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಈಗಾಗಲೇ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಅವರಿಗೆ ಫೋನ್​ ಕರೆ ಮಾಡಿ ತಮ್ಮ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

245 ಸೀಟುಗಳಲ್ಲಿ ಎನ್​ಡಿಎ 115, ಯುಪಿಎ 113, ಇತರೆ ಪಕ್ಷಗಳು 16 ಸೀಟುಗಳನ್ನು ಹೊಂದಿವೆ. ಉಳಿದ ಒಂದು ಸ್ಥಾನ ಖಾಲಿ ಇದೆ. ಯಾವುದೇ ಪಕ್ಷ ಮೆಜಾರಿಟಿ ಪಡೆಯಲು ಒಟ್ಟು 125 ಸೀಟುಗಳು ಇರಬೇಕು.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...