ಕೊಚ್ಚಿ (ಅ. 5): ನೌಕಾಪಡೆಗೆ ಸೇರಿದ ಗ್ಲೈಡರ್ ವಿಮಾನ ಭಾನುವಾರ ಕೇರಳದ ಕೊಚ್ಚಿ ಬಳಿ ಇರುವ ತೊಪ್ಪುಂಪಾಡಿಯಲ್ಲಿ ಪತನವಾದ ಪರಿಣಾಮ ನೌಕಾಪಡೆಯ ಇಬ್ಬರು ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ವಾಯುನೆಲೆಯಲ್ಲಿ ಪ್ರತಿನಿತ್ಯದಂತೆ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಐಎನ್ಎಸ್ ಗರುಡ ವಿಮಾನದ ತರಬೇತಿ ನೀಡುತ್ತಿದ್ದಾಗ ಭಾನುವಾರ ಬೆಳಗ್ಗೆ 7 ಗಂಟೆಗೆ ಗ್ಲೈಡರ್ ಪತನಗೊಂಡಿದೆ. ಈ ದುರಂತದಲ್ಲಿ ನೌಕಾಪಡೆಯ ಅಧಿಕಾರಿಗಳಾದ 39 ವರ್ಷದ ಲೆಫ್ಟಿನೆಂಟ್ ರಾಜೀವ್ ಝಾ ಮತ್ತು 29 ವರ್ಷದ ಸುನೀಲ್ ಕುಮಾರ್ ಸಾವನ್ನಪ್ಪಿದ್ದಾರೆ.
ಕೊಚ್ಚಿಯ ತೊಪ್ಪುಂಪಾಡಿ ಸೇತುವೆ ಬಳಿ ಈ ಗ್ಲೈಡರ್ ವಿಮಾನ ಪತನವಾಗಿದೆ. ಕೊಚ್ಚಿಯ ತೊಪ್ಪುಂಪಾಡಿ ಸೇತುವೆ ಬಳಿ ಗ್ಲೈಡರ್ ಪತನವಾಗಿರುವುದಕ್ಕೆ ನಿಖರ ಕಾರಣವೇನೆಂದು ಪತ್ತೆಯಾಗಿಲ್ಲ. ನೌಕಾಪಡೆಯ ಅಧಿಕಾರಿಗಳಾದ ರಾಜೀವ್ ಝಾ ಮತ್ತು ಸುನೀಲ್ ಕುಮಾರ್ ಅವರನ್ನು ಕೂಡಲೇ ಸ್ಥಳೀಯ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಅವರು ಮೃತಪಟ್ಟಿದ್ದನ್ನು ವೈದ್ಯರು ಖಚಿತಪಡಿಸಿದರು.
ಇದನ್ನೂ ಓದಿ: ಉತ್ತರ ಪ್ರದೇಶ: 15 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಕೊಳೆತ ಸ್ಥಿತಿಯಲ್ಲಿ ಪತ್ತೆ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ