Selfie Death: ಸೆಲ್ಫಿ ಹುಚ್ಚಿಗೆ ನರ್ಮದಾ ನದಿಯ ಪಾಲಾದ ಅತ್ತೆ-ಸೊಸೆ
Narmada river: ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ನೀರಿಗೆ ಬಿದ್ದು ಅತ್ತೆ-ಸೊಸೆ ಪ್ರಾಣ ಕಳೆದಕೊಂಡಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ, ಜಬಲ್ಪುರದ ಹೊಸ ಭೇರಘಾಟ್ನ ಪ್ರವಾಸಿ ತಾಣದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕಲ್ಲಿನಮೇಲೆ ನಿಂತಿದ್ದ ಇಬ್ಬರು ಮಹಿಳೆಯರು ಕಾಲು ಜಾರಿ ನರ್ಮದಾ ನದಿಗೆ ಬಿದ್ದಿದ್ದಾರೆ.
ಈಗ ಭಾರತದಲ್ಲಿ(India) ಸೆಲ್ಫಿ(Selfie) ಹುಚ್ಚು ಹೆಚ್ಚಾಗಿದೆ. ಎಲ್ಲೇ ಹೋದರು, ಏನೇ ಮಾಡಿದರೂ ಮೊಬೈಲ್(Mobile) ಮುಂದೆ ನಿಂತು ಪೋಸು ಕೊಟ್ಟು ಸೆಲ್ಫಿ ತೆಗೆದುಕೊಳ್ಳುವ ಖಯಾಲಿ ಜಾಸ್ತಿಯಾಗಿದೆ.ಕೆಲವು ವರ್ಷದಿಂದೀಚೆಗೆ ಭಾರತದಲ್ಲಿ ಸೆಲ್ಫಿ ಸಾವುಗಳು(Death) ಹೆಚ್ಚಾಗುತ್ತಿವೆ. ಭಾರತದಲ್ಲಿ ಸೆಲ್ಫಿ ಕ್ರೇಜ್ಗೆ(Selfie Craze) ಬಲಿಯಾಗುತ್ತಿರುವವರ ಸಂಖ್ಯೆ ಇಡಿ ವಿಶ್ವದಲ್ಲೇ ಗರಿಷ್ಠ ಎಂದು ಅಧ್ಯಯನ ವರದಿಗಳು ತಿಳಿಸಿವೆ. ಅಲ್ಲದೆ ಸೆಲ್ಫಿ ಹುಚ್ಚಿಗೆ ಈವರೆಗೂ ಅನೇಕ ಜನರು ತಮ್ಮ ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆದಿದ್ದರೂ ಸಹ ಜನರು ಈವರೆಗೂ ಬುದ್ದಿ ಕಲಿತಿಲ್ಲ.. ಕಂಡಕಂಡಲ್ಲಿ ಅಪಾಯದ ಅರಿವಿದ್ದರೂ ಸಹ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅನೇಕ ಜನರು ತಮ್ಮ ಪ್ರಾಣ ಹಾನಿ ಮಾಡಿಕೊಂಡಿದ್ದಾರೆ.ಅದರಲ್ಲೂ ಜಲಾನಯನ ಪ್ರದೇಶಗಳಲ್ಲಿ ಹೆಚ್ಚು ಸೂಕ್ಷ್ಮತೆಯಿಂದ ಇರಬೇಕು ಎಂಬ ಅರಿವಿದ್ದರೂ ಸಹ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅನೇಕ ಜನರು ಕಾಲುಜಾರಿ ಬಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಅವಘಡಗಳು ಸಂಭವಿಸಿವೆ.. ಹೀಗಾಗಿ ಅನೇಕ ಕಡೆ ಸ್ಥಳೀಯ ಆಡಳಿತಗಳು ಸೆಲ್ಫಿ ತೆಗೆದುಕೊಳ್ಳುವುದನ್ನು ನಿಷೇಧ ಮಾಡಿದೆ..ಹೀಗಿದ್ದರೂ ಸಹ ಜನರು ನಿರ್ಲಕ್ಷದಿಂದ ಸೆಲ್ಫಿ ತೆಗೆದುಕೊಳ್ಳಲು ಹೋಗಿ ತಮ್ಮ ಪ್ರಾಣ ಹಾನಿ ಮಾಡಿಕೊಳ್ಳುತ್ತಿದ್ದಾರೆ. ಈಗ ಅದೇ ರೀತಿಯ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ
ಸೆಲ್ಫಿ ಹುಚ್ಚಿಗೆ ನರ್ಮದಾ ನದಿಯ ಪಾಲಾದ ಅತ್ತೆ-ಸೊಸೆ
ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ನೀರಿಗೆ ಬಿದ್ದು ಅತ್ತೆ-ಸೊಸೆ ಪ್ರಾಣ ಕಳೆದಕೊಂಡಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ, ಜಬಲ್ಪುರದ ಹೊಸ ಭೇರಘಾಟ್ನ ಪ್ರವಾಸಿ ತಾಣದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕಲ್ಲಿನಮೇಲೆ ನಿಂತಿದ್ದ ಇಬ್ಬರು ಮಹಿಳೆಯರು ಕಾಲು ಜಾರಿ ನರ್ಮದಾ ನದಿಗೆ ಬಿದ್ದಿದ್ದಾರೆ. ಮೃತ ಮಹಿಳೆಯರನ್ನು ಮುಂಬೈ ನಿವಾಸಿ ಹಂಸಾ ಸೋನಿ (50) ಎಂದು ಗುರುತಿಸಲಾಗಿದ್ದು, ಆಕೆಯ ಸೊಸೆ ರಿದ್ಧಿ ಪಿಚಾಡಿಯಾ (22) ಎಂದು ಗುರುತಿಸಲಾಗಿದೆ. ಸದ್ಯ ನೀರುಪಾಲಾಗಿದ್ದ ಮಹಿಳೆಯರ ಮೃತದೇಹವನ್ನು ಹೊರ ತೆಗೆದಿರುವ ಪೊಲೀಸರು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ..
ಇನ್ನು ಘಟನೆ ಬಗ್ಗೆ ಮಾಹಿತಿ ನೀಡಿರುವ ಬರ್ಗಿ ಪ್ರದೇಶದ ನಗರ ಪೊಲೀಸ್ ವರಿಷ್ಠಾಧಿಕಾರಿ (ಸಿಎಸ್ಪಿ) ಪ್ರಿಯಾಂಕಾ ಶುಕ್ಲಾ, ಮುಂಬೈನ ನಿವಾಸಿ ಸೋನಿ ಕುಟುಂಬ ಭೇರಘಾಟ್ಗೆ ವೆಕೇಷನ್ ಗೆ ಬಂದಿದ್ದಾರೆ. ಹತ್ತಿರದ ಹೋಟೆಲ್ನಲ್ಲಿ ತಂಗಿದ್ದ ಅವರು, ಶುಕ್ರವಾರ ಸಂಜೆ, ಹೊಸ ಭೇರಘಾಟ್ಗೆ ಭೇಟಿ ನೀಡಲು ನಿರ್ಧರಿಸಿದರು.
ಮೃತ ಹಂಸಾ ಸೋನಿ ಮತ್ತು ಅವರ ಸೊಸೆ ರಿದ್ಧಿ ಪಿಚಾಡಿಯಾ ಅವರು ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಹಂಸ ನಿಯಂತ್ರಣ ತಪ್ಪಿ ನರ್ಮದಾ ನದಿಗೆ ಬಿದ್ದರು, ಅವರನ್ನ ರಕ್ಷಿಸಲು ರಿದ್ಧಿ ನೀರಿಗೆ ಹಾರಿದ್ದಾರೆ. ಬಲವಾದ ಪ್ರವಾಹದಲ್ಲಿ ಇಬ್ಬರೂ ಕೊಚ್ಚಿಕೊಂಡು ಹೋದರು. ಸ್ಥಳೀಯ ಈಜುಗಾರರ ಸಹಾಯದಿಂದ ಶೋಧ ನಡೆಸಿದಾಗ ಶುಕ್ರವಾರ ಸಂಜೆ ಹಂಸಾ ಸೋನಿ ಶವ ಪತ್ತೆಯಾಗಿದ್ದು, ಶನಿವಾರ ರಿದ್ದಿ ಶವ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇಂತಹ ಘಟನೆ ಇದೇ ಮೊದಲಲ್ಲ. ಈ ಹಿಂದೆ 2017ರಲ್ಲಿ ಭೇರ್ಘಾಟ್ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಬಾಲಕನೊಬ್ಬ ನದಿಗೆ ಜಾರಿ ಬಿದ್ದು, ಆತನನ್ನು ರಕ್ಷಿಸುವ ಪ್ರಯತ್ನದಲ್ಲಿ ಆತನ ಸಹೋದರಿ ನದಿಗೆ ಹಾರಿ ಸಾವನ್ನಪ್ಪಿದ್ದರು.ಜಿಲ್ಲಾಡಳಿತವು ಸ್ಥಳದಲ್ಲಿ ಸೆಲ್ಫಿ ನಿಷೇಧಿಸಿ ಎಚ್ಚರಿಕೆ ಫಲಕ ಹಾಕಿದ್ದು, ಜನರ ಜೀವ ಉಳಿಸಲು ಡೈವರ್ಗಳನ್ನು ನೇಮಿಸಿದೆ. ಹೀಗಿದ್ದರೂ ಸಹ ಜನರು ಸೆಲ್ಫಿ ತೆಗೆದುಕೊಂಡು ಹೋಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಸಿಎಸ್ಪಿ) ಪ್ರಿಯಾಂಕಾ ಶುಕ್ಲಾ ಬೇಸರ ಹೊರಹಾಕಿದ್ದಾರೆ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ