ಮಳೆ ನಿಲ್ಲಲಿ ಎಂದು ಮದುವೆ ಮಾಡಿಸಿದ ಕಪ್ಪೆಗಳಿಗೆ ವಿಚ್ಛೇದನ

ಎರಡು ತಿಂಗಳ ಹಿಂದೆ ಜೂನ್​ 19ರಂದು ಇಲ್ಲಿನ ಜನರೇ ಈ ಕಪ್ಪೆಗಳಿಗೆ ಮದುವೆ ಮಾಡಿಸಿದ್ದರಂತೆ. ಈಗ ಅವುಗಳನ್ನು ಕರೆತಂದ ಶಿವ ಶಕ್ತಿ ಮಂಡಲ ಸದಸ್ಯರು ವೇದಿಕ್​ ಮಂತ್ರದ ಮೂಲಕ ವಿಚ್ಛೇದನ ಕೊಡಿಸಿದ್ದಾರೆ.

Seema.R | news18-kannada
Updated:September 12, 2019, 12:33 PM IST
ಮಳೆ ನಿಲ್ಲಲಿ ಎಂದು ಮದುವೆ ಮಾಡಿಸಿದ ಕಪ್ಪೆಗಳಿಗೆ ವಿಚ್ಛೇದನ
ಸಾಂದರ್ಭಿಕ ಚಿತ್ರ
  • Share this:
ಭೂಪಾಲ್​ (ಸೆ.12): ಬರದಿಂದ ಕಂಗೆಟ್ಟ ಜನರು ಮಳೆ ಬರಲಿ ಎಂದು ಕಪ್ಪೆ, ಕತ್ತೆಗಳ ಮದುವೆ ಮಾಡಿಸಿರುವ ಅನೇಕ ಪ್ರಕರಣಗಳು ನಡೆದಿವೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಮದುವೆ ಬರಲಿ ಎಂದು ತಾವೇ ಮದುವೆ ಮಾಡಿಸಿದ ಕಪ್ಪೆಗಳಿಗೆ ಮಳೆ ನಿಲ್ಲಲಿ ಎಂದು ವಿಚ್ಛೇದನ ಕೊಡಿಸಿದ್ದಾರೆ.

ಮಧ್ಯಪ್ರದೇಶದ ಭೂಪಾಲ್​ನಲ್ಲಿ ಈ ಘಟನೆ ನಡೆದಿದೆ. ದೇಶದಲ್ಲಿ ಈ ಬಾರಿ ಅನೇಕ ರಾಜ್ಯಗಳಲ್ಲಿ ಅತಿವೃಷ್ಠಿ ಕಾಡಿದ್ದು, ಪ್ರವಾಹದಿಂದ ಜನರು ನಲುಗುವಂತೆ ಆಗಿದೆ. ಭೂಪಾಲ್​ನಲ್ಲಿಯೂ ಮಳೆಯಿಂದಾಗಿ ಜನರು ತತ್ತರಿಸಿದ್ದಾರೆ. ಸಾಮಾನ್ಯ ಮಳೆ ಋತುಮಾನ ಮುಗಿದರೂ ವರುಣನ ಅಬ್ಬರ ಮಾತ್ರ ಕಡಿಮೆಯಾಗದ ಹಿನ್ನೆಲೆ ಇಲ್ಲಿನ ಜನರು ಈ ಹಿಂದೆ ತಾವು ಮದುವೆ ಮಾಡಿಸಿದ ಕಪ್ಪೆಗಳನ್ನು ಹುಡುಕಿಕೊಂಡು ಬಂದು ವಿಚ್ಛೇದನ ನೀಡಿದ್ದಾರೆ.

ಎರಡು ತಿಂಗಳ ಹಿಂದೆ ಜೂನ್​ 19ರಂದು ಇಲ್ಲಿನ ಜನರೇ ಈ ಕಪ್ಪೆಗಳಿಗೆ ಮದುವೆ ಮಾಡಿಸಿದ್ದರಂತೆ. ಈಗ ಅವುಗಳನ್ನು ಕರೆತಂದ ಶಿವ ಶಕ್ತಿ ಮಂಡಲ ಸದಸ್ಯರು ವೇದಿಕ್​ ಮಂತ್ರದ ಮೂಲಕ ವಿಚ್ಛೇದನ ಕೊಡಿಸಿದ್ದಾರೆ.

ಇದನ್ನು ಓದಿ: Photos: ವರ್ಷದಿಂದ ವರ್ಷಕ್ಕೆ ದ್ವಿಗುಣ ಗೊಳ್ಳುತ್ತಿದೆ ತಿಮ್ಮಪ್ಪನ ಆದಾಯ; ಗೋವಿಂದನ ಸಂಪತ್ತು ಕೇಳಿದ್ರೆ ಶಾಕ್ ಆಗ್ತೀರಾ..!

ಕಳೆದ 24 ಗಂಟೆಗಳ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ 48 ಎಂಎಂ ಮಳೆಯಾಗಿದ್ದು, ಕಲಿಯಸೋತ ಅಣೆಕಟ್ಟು, ಭಡಾಡ ಹಾಗೂ  ಕೋಲಾರ್​ ಜಲಾಶಯಗಳು ಭರ್ತಿಯಾಗಿದ್ದು, ಗೇಟ್​ಗಳನ್ನು ತೆರೆಯಲಾಗಿದೆ. ಭಾನುವಾರ ಭೂಪಾಲ್​ನಲ್ಲಿ ದಾಖಲೆ ಮಳೆಯಾಗಿದ್ದು, ಅನೇಕ ಸ್ಥಳಗಳು ಪ್ರವಾಹಕ್ಕೆ ತುತ್ತಾಗಿವೆ.

First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading