ತಡರಾತ್ರಿ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾದ ಗೋವಾ; ಬಿಜೆಪಿ ಸೇರಿದ ಇಬ್ಬರು ಎಂಜಿಪಿ ಶಾಸಕರು

ಪಕ್ಷಾಂತರ ಮಾಡಲು ಎಂಜಿಪಿ ಶಾಸಕರಿಂದ ಮನವಿ ಬಂದಿರುವ ವಿಚಾರವನ್ನು ಮೈಖೆಲ್​ ಖಾತ್ರಿ ಪಡಿಸಿದ್ದಾರೆ. ಗೋವಾ ರಾಜ್ಯದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಶಾಸಕರು ಹೇಳಿದ್ದಾರೆ.

Rajesh Duggumane | news18
Updated:March 27, 2019, 8:11 AM IST
ತಡರಾತ್ರಿ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾದ ಗೋವಾ; ಬಿಜೆಪಿ ಸೇರಿದ ಇಬ್ಬರು ಎಂಜಿಪಿ ಶಾಸಕರು
ಸ್ಪೀಕರ್​ಗೆ ಪಕ್ಷಾಂತರ ಮಾಡುತ್ತಿರುವ ಪತ್ರ ಸಲ್ಲಿಸಿದ ಶಾಸಕರು
  • News18
  • Last Updated: March 27, 2019, 8:11 AM IST
  • Share this:
ಪಣಜಿ (ಮಾ.27): ಗೋವಾ ರಾಜಕೀಯ ವಲಯದಲ್ಲಿ ಮಂಗಳವಾರ ತಡರಾತ್ರಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮಹಾರಾಷ್ಟ್ರವಾದಿ ಗೋಮಾಂತಕ್​ ಪಾರ್ಟಿಯ (ಎಂಜಿಪಿ) ಇಬ್ಬರು ಶಾಸಕರು ಬಿಜೆಪಿ ಸೇರಿದ್ದಾರೆ. ಈ ಮೂಲಕ ಗೋವಾದಲ್ಲಿ ಬಿಜೆಪಿಯ ಬಲ 14ರಿಂದ 16ಕ್ಕೆ ಏರಿಕೆ ಆಗಿದೆ.

ಮನೋಹರ್​ ಅಜ್ಗಾಂವಕರ್​ ಹಾಗೂ ದೀಪಕ್​ ಪಾವಸ್ಕರ್​ ಬಿಜೆಪಿ ಸೇರಿದ ಶಾಸಕರು. ಎಂಜಿಪಿಯಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಕ್ಕೆ ತಡರಾತ್ರಿ 1.45ಕ್ಕೆ ಸ್ಪೀಕರ್​ ಮೈಖೆಲ್​ ಲೋಬೋ ಅವರಿಗೆ ಪತ್ರ ನೀಡಿದ್ದಾರೆ.  ಮತ್ತೋರ್ವ ಶಾಸಕ ಸುದಿನ್​ ಧವಾಲಿಕರ್​ ಅವರು ಎಂಜಿಪಿಯಲ್ಲೇ ಉಳಿದುಕೊಂಡಿದ್ದಾರೆ.

ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮನೋಹರ್ ಅವರು ಪ್ರವಾಸೋದ್ಯಮ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಸುದಿನ್ ಗೋವಾ ಉಪಮುಖ್ಯಮಂತ್ರಿ ಆಗಿದ್ದಾರೆ. ಎಂಜಿಪಿಯಲ್ಲಿ ಮೂರು ಶಾಸಕರಿದ್ದಾರೆ. ಈಗ ಎರಡು ಶಾಸಕರು ಬಿಜೆಪಿ ಸೇರಿರುವುದರಿಂದ ಪಕ್ಷಾಂತರ ಕಾಯ್ದೆಗೆ ವಿರುದ್ಧವಾಗಿಲ್ಲ. ಹಾಗಾಗಿ ಅವರ ಶಾಸಕ ಸ್ಥಾನಕ್ಕೆ ಕುತ್ತು ಬಂದಿಲ್ಲ.

ಪಕ್ಷಾಂತರ ಮಾಡಲು ಎಂಜಿಪಿ ಶಾಸಕರಿಂದ ಮನವಿ ಬಂದಿರುವ ವಿಚಾರವನ್ನು ಮೈಖೆಲ್​ ಖಾತ್ರಿ ಪಡಿಸಿದ್ದಾರೆ. ಗೋವಾ ರಾಜ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಶಾಸಕರು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ 10ನೇ ಪಟ್ಟಿ ಪ್ರಕಟ; ಜೋಷಿಗೆ ಕೊಕ್; ವರುಣ್, ಮನೇಕಾ ಕ್ಷೇತ್ರ ಬದಲು; ಕಣದಲ್ಲಿ ಜಯಪ್ರದಾ

First published: March 27, 2019, 8:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading