8 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಇಬ್ಬರು ಆರೋಪಿಗಳಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

news18
Updated:August 21, 2018, 4:42 PM IST
8 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಇಬ್ಬರು ಆರೋಪಿಗಳಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ
  • News18
  • Last Updated: August 21, 2018, 4:42 PM IST
  • Share this:
ನ್ಯೂಸ್​18 ಕನ್ನಡ

ಮಂಡಸ್ಸೂರ್ (ಆ. 21): ದೇಶದಲ್ಲಿ ಹೆಚ್ಚುತ್ತಿರುವ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. 8 ವರ್ಷದ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಇಂದು ಮಧ್ಯಪ್ರದೇಶದ ವಿಶೇಷ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ.

ವಿಶೇಷ ನ್ಯಾಯಮೂರ್ತಿ ನಿಶಾ ಗುಪ್ತಾ ಅವರ ನ್ಯಾಯಪೀಠ ಈ ತೀರ್ಪನ್ನು ಪ್ರಕಟಿಸಿದ್ದು, 20 ವರ್ಷದ ಇರ್ಫಾನ್​ ಮತ್ತು 24 ವರ್ಷದ ಆಸಿಫ್​ ಅವರನ್ನು ಗಲ್ಲಿಗೇರಿಸಲು ತೀರ್ಪು ನೀಡಿದೆ. ಪೋಕ್ಸೋ ಕಾಯ್ದೆಯಡಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ
ಮಧ್ಯಪ್ರದೇಶದ ಮಂಡಸ್ಸೂರ್​ನ 8 ವರ್ಷದ ಬಾಲಕಿಯ ಮೇಲೆ ಜೂನ್​ 26ರಂದು ಸಾಮೂಹಿಕ ಅತ್ಯಾಚಾರವಾಗಿತ್ತು. ತನ್ನ ಅಪ್ಪನಿಗಾಗಿ ಶಾಲೆಯ ಗೇಟಿನ ಹೊರಗೆ ನಿಂತು ಕಾಯುತ್ತಿದ್ದ ಆ ಪುಟ್ಟ ಹುಡುಗಿಗೆ ಆ ದಿನ ಕರಾಳ ದಿನ. ಅನಿರೀಕ್ಷಿತವಾಗಿ ಬಂದು ಆ ಹುಡುಗಿಯನ್ನು ಎತ್ತಿಕೊಂಡು ಹೋದ ಇರ್ಫಾನ್​ ಮತ್ತು ಆಸಿಫ್​ ಆಕೆಯ ಮೇಲೆ ಅತ್ಯಾಚಾರ ಎಸಗಿ, ಕುತ್ತಿಗೆ ಸೀಳಿ ರಸ್ತೆಬದಿಯಲ್ಲಿ ಬಿಸಾಡಿ ಹೋಗಿದ್ದರು.

ಆದರೆ, ಅಷ್ಟಾದರೂ ಆ ಪುಟ್ಟ ಹುಡುಗಿಯ ಜೀವ ಇನ್ನೂ ಉಸಿರಾಡುತ್ತಿತ್ತು. ಆಕೆಗೆ ಚಿಕಿತ್ಸೆ ನೀಡಿದ ವೈದ್ಯರು ಬಾಲಕಿಯ ಮೈತುಂಬ ಹಲ್ಲಿನಿಂದ ಕಚ್ಚಿದ ಗುರುತುಗಳಿತ್ತು, ಆಕೆಯ ಮೂಗು ಜಜ್ಜಿಹೋಗಿತ್ತು, ಆಕೆಯ ಗುಪ್ತಾಂಗಕ್ಕೆ ಯಾವುದೋ ವಸ್ತುವನ್ನು ಹಾಕಿ ಹಾನಿಗೊಳಿಸಲಾಗಿತ್ತು ಎಂದು ತಿಳಿಸಿದ್ದಾರೆ. ಆ ಬಾಲಕಿ ಇನ್ನೂ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದು, ಇಂದೋರ್​ನಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆ ನಡೆದ ನಂತರ ಮಂಡಸ್ಸೂರ್​ನಲ್ಲಿ ತೀವ್ರ ರೀತಿಯ ಪ್ರತಿಭಟನೆಗಳಾಗಿ ಆ ಸಂತ್ರಸ್ತ ಬಾಲಕಿಗೆ ನ್ಯಾಯ ಸಿಗಲೇಬೇಕೆಂದು ಹೋರಾಟ ನಡೆಸಲಾಗಿತ್ತು. ಶಾಲೆಗಳು, ಮಾರ್ಕೆಟ್​, ಕಾಲೇಜುಗಳನ್ನು ಮುಚ್ಚಿ ನ್ಯಾಯಕ್ಕಾಗಿ ಆಗ್ರಹ ಮಾಡಲಾಗಿತ್ತು.ಅಮಾಯಕ ಬಾಲಕಿಯನ್ನು ಸಾವಿನ ಅಂಚಿಗೆ ತಳ್ಳಿದ್ದ ಆರೋಪಿಗಳ ವಿರುದ್ಧ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಆಕ್ರೋಶ ವ್ಯಕ್ತಪಡಿಸಿದ್ದರು. ಅಂಥವರು ಭೂಮಿಯ ಮೇಲೆ ಬದುಕಲು ಯೋಗ್ಯರಲ್ಲ. ಅವರನ್ನು ಜೀವಂತವಾಗಿ ಸುಟ್ಟುಹಾಕಬೇಕು ಎಂದು ಆಕ್ರೋಶ ಹೊರಹಾಕಿದ್ದರು.

 
First published: August 21, 2018, 4:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading