• Home
  • »
  • News
  • »
  • national-international
  • »
  • Two Sikh Businessmen Killed: ಪಾಕ್​​ನಲ್ಲಿ ಇಬ್ಬರು ಸಿಖ್ ವ್ಯಾಪಾರಿಗಳ ದಾರುಣ ಹತ್ಯೆ, ಕಾರಣವೇನು?

Two Sikh Businessmen Killed: ಪಾಕ್​​ನಲ್ಲಿ ಇಬ್ಬರು ಸಿಖ್ ವ್ಯಾಪಾರಿಗಳ ದಾರುಣ ಹತ್ಯೆ, ಕಾರಣವೇನು?

ಮೃತದೇಹ ಕಂಡು ಸಂಬಂಧಿಕರ ಕಣ್ಣೀರು

ಮೃತದೇಹ ಕಂಡು ಸಂಬಂಧಿಕರ ಕಣ್ಣೀರು

ಇಬ್ಬರನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ (Shot Dead) ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹತ್ಯೆಗೀಡಾದ ಇಬ್ಬರು ವ್ಯಕ್ತಿಗಳು ಸರ್ಬಂದ್‌ನ ಬಟಾ ತಾಲ್ ಬಜಾರ್‌ನಲ್ಲಿ ಮಸಾಲೆ ಮಾರಾಟ ಮಾಡುತ್ತಿದ್ದ ಅಂಗಡಿಯವರು ಎಂದು ಪೊಲೀಸರು ತಿಳಿಸಿದ್ದಾರೆ.

  • Share this:

ಪೇಶಾವರ(Peshawar): ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತುಂಖ್ವಾ ಪ್ರದೇಶದ ಉಪನಗರವಾದ ಪೇಶಾವರದ ಸರ್ಬಂದ್ ಪ್ರದೇಶದಲ್ಲಿ ಭಾನುವಾರ ಸಿಖ್ ಸಮುದಾಯಕ್ಕೆ (Sikh community) ಸೇರಿದ ಇಬ್ಬರನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ (Shot Dead) ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹತ್ಯೆಗೀಡಾದ ಇಬ್ಬರು ವ್ಯಕ್ತಿಗಳು ಸರ್ಬಂದ್‌ನ ಬಟಾ ತಾಲ್ ಬಜಾರ್‌ನಲ್ಲಿ ಮಸಾಲೆ ಮಾರಾಟ ಮಾಡುತ್ತಿದ್ದ ಅಂಗಡಿಯವರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಸಲ್ಜೀತ್ ಸಿಂಗ್ (42) ಮತ್ತು ರಂಜೀತ್ ಸಿಂಗ್ (38) ಎಂದು ಗುರುತಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರೋಪಿಗಳನ್ನು ಬಂಧಿಸಲು ಪ್ರದೇಶವನ್ನು ಸುತ್ತುವರೆದಿದ್ದಾರೆ. ದಾಳಿಯ ಹೊಣೆಯನ್ನು ಯಾರೂ ಇದುವರೆಗೂ ಹೊತ್ತುಕೊಂಡಿಲ್ಲ.


ಹತ್ಯೆಗೆ ತೀವ್ರ ಖಂಡನೆ


ಸುಮಾರು 15,000 ಸಿಖ್ಖರು ಪೇಶಾವರದಲ್ಲಿ ವಾಸಿಸುತ್ತಿದ್ದಾರೆ, ಹೆಚ್ಚಾಗಿ ಪ್ರಾಂತೀಯ ರಾಜಧಾನಿಯ ಜೋಗನ್ ಶಾ ನೆರೆಹೊರೆಯಲ್ಲಿ. ಪೇಶಾವರದಲ್ಲಿ ಸಿಖ್ ಸಮುದಾಯದ ಹೆಚ್ಚಿನ ಸದಸ್ಯರು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರೆ, ಕೆಲವರು ಔಷಧಾಲಯಗಳನ್ನು ನಡೆಸುತ್ತಿದ್ದಾರೆ. ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಮಹಮೂದ್ ಖಾನ್ ಅವರು ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಅಪರಾಧಿಗಳನ್ನು ತಕ್ಷಣವೇ ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.ಈ ಘಟನೆಯು ಸರ್ವಧರ್ಮ ಸೌಹಾರ್ದತೆಗೆ ಭಂಗ ತರುವ ಷಡ್ಯಂತ್ರ ಎಂದು ಬಣ್ಣಿಸಿರುವ ಅವರು, ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಲಾಗುವುದು ಎಂದರು.


ಇದನ್ನೂ ಓದಿ: Actor Ketaki Chitale: ಶರದ್ ಪವಾರ್ ಬಗ್ಗೆ ಪೋಸ್ಟ್ ಮಾಡಿದ್ದಕ್ಕೆ ಮರಾಠಿ ನಟಿ ಕೇತಕಿ ಚಿತಾಳೆ ಬಂಧನ, ಏನದು ಪೋಸ್ಟ್?


ಪಂಜಾಬ್​ ಸಿಎಂ ಖಂಡನೆ


ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಟ್ವಿಟರ್‌ನಲ್ಲಿ, "ಪಾಕಿಸ್ತಾನದ ಪೇಶಾವರ್‌ನಲ್ಲಿ ಇಬ್ಬರು ಸಿಖ್ ಯುವಕರ ಭೀಕರ ಹತ್ಯೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ನಮ್ಮ ವಿದೇಶಾಂಗ ಸಚಿವ ಜೈಶಂಕರ್​ ಜೀ ಅವರು ಪಾಕಿಸ್ತಾನದೊಂದಿಗೆ ಮಾತನಾಡಲು ಮತ್ತು ಹಿಂದೂ ಮತ್ತು ಸಿಖ್ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಿನಂತಿಸುತ್ತೇನೆ ಎಂದಿದ್ದಾರೆ.ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹತ್ಯೆಯನ್ನು ಖಂಡಿಸಿದ್ದಾರೆ.  ನೆರೆಯ ದೇಶದ ಸರ್ಕಾರವು ಸಮುದಾಯಕ್ಕೆ ಸೂಕ್ತ ರಕ್ಷಣೆ ನೀಡುತ್ತಿಲ್ಲ ಎಂದು ಟೀಕಿಸಿದರು.ಪಾಕಿಸ್ತಾನದಲ್ಲಿ ಮತ್ತೊಂದು ಸಿಖ್ಖರ ಹತ್ಯೆಯಾಗಿದೆ. ಪೇಶಾವರದಲ್ಲಿ  ಅಂಗಡಿ ಮಾಲೀಕರಾದ ರಂಜೀತ್ ಸಿಂಗ್ ಮತ್ತು ಸಲ್ಜೀತ್ ಸಿಂಗ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಇದು ಅತ್ಯಂತ ಖಂಡನೀಯ. ನಾನು ಯಾವಾಗಲೂ ಹೇಳುತ್ತಿದ್ದೆ, @GovtofPakistan ಸಿಖ್ಖರಿಗೆ ಅವರ ಭದ್ರತೆಯನ್ನು ಖಾತ್ರಿಪಡಿಸದೆ ಲಿಪ್ ಸರ್ವಿಸ್ (ಕೇವಲ ಮಾತು ನೀಡಿದೆ ಅಷ್ಟೇ) ಮಾಡುತ್ತದ. ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ಮೋದಿ ಅವರನ್ನು ವಿನಂತಿಸುವೆ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.


ಸರಣಿ ಹತ್ಯೆಗಳು


ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಪೇಶಾವರದ ಅವರ ಕ್ಲಿನಿಕ್‌ನಲ್ಲಿ ಸುಪ್ರಸಿದ್ಧ ಸಿಖ್ 'ಹಕೀಮ್' (ಯುನಾನಿ ವೈದ್ಯ ವೃತ್ತಿಗಾರ) ಅಪರಿಚಿತ ಬಂದೂಕುಧಾರಿಗಳಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟರು. 2018 ರಲ್ಲಿ, ಪೇಶಾವರದಲ್ಲಿ ಪ್ರಮುಖ ಸಿಖ್ ಸಮುದಾಯದ ಸದಸ್ಯರಾದ ಚರಂಜಿತ್ ಸಿಂಗ್ ಅವರನ್ನು ಅಪರಿಚಿತ ವ್ಯಕ್ತಿಗಳು ಕೊಂದರು. ಅದೇ ರೀತಿ, ರವೀಂದರ್ ಸಿಂಗ್ ಎಂಬ ಸುದ್ದಿ ವಾಹಿನಿ ನಿರೂಪಕನನ್ನು 2020 ರಲ್ಲಿ ನಗರದಲ್ಲಿ ಕೊಲ್ಲಲಾಯಿತು. 2016 ರಲ್ಲಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ರಾಷ್ಟ್ರೀಯ ಅಸೆಂಬ್ಲಿ ಸದಸ್ಯ ಸೋರೆನ್ ಸಿಂಗ್ ಕೂಡ ಪೇಶಾವರದಲ್ಲಿ ಕೊಲ್ಲಲ್ಪಟ್ಟರು.


2017 ರ ಜನಗಣತಿಯ ಪ್ರಕಾರ, ಹಿಂದೂಗಳು ಪಾಕಿಸ್ತಾನದಲ್ಲಿ ಅತಿದೊಡ್ಡ ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದಾರೆ. ಕ್ರಿಶ್ಚಿಯನ್ನರು ಎರಡನೇ ಅತಿದೊಡ್ಡ ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದಾರೆ. ಪಾಕಿಸ್ತಾನ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಅಹ್ಮದೀಯರು, ಸಿಖ್ಖರು ಮತ್ತು ಪಾರ್ಸಿಗಳೂ ಸೇರಿದ್ದಾರೆ.

Published by:Kavya V
First published: