• Home
  • »
  • News
  • »
  • national-international
  • »
  • Royal Family: ರಾಯಲ್ ಫ್ಯಾಮಿಲಿಯಲ್ಲಿ ಈ ವರ್ಷ ಇಬ್ಬರು ರಾಜರು! ತಜ್ಞರು ಹೀಗಂದಿದ್ಯಾಕೆ?

Royal Family: ರಾಯಲ್ ಫ್ಯಾಮಿಲಿಯಲ್ಲಿ ಈ ವರ್ಷ ಇಬ್ಬರು ರಾಜರು! ತಜ್ಞರು ಹೀಗಂದಿದ್ಯಾಕೆ?

ಕಿಂಗ್ ಚಾರ್ಲ್ಸ್

ಕಿಂಗ್ ಚಾರ್ಲ್ಸ್

ಬ್ರ್ಯಾಂಡ್ ಎಕ್ಸ್‌ಪರ್ಟ್ ನಿಕ್ ಅಡೆ ಹೇಳುವಂತೆ ಬ್ರ್ಯಾಂಡ್ ಟಿಂಡಾಲ್‌ಗೆ ಉತ್ತಮ ಮುನ್ನಡೆ ಇದಾಗಿದ್ದು, ಅವರ ಸೆಲೆಬ್ರಿಟಿ ಈಕ್ವಿಟಿಯು ಹತ್ತುಪಟ್ಟು ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ. ಎಲ್ಲರ ಕಣ್ಣು ಈ ವರ್ಷ ಮೈಕ್ ಅವರ ಮೇಲಿರಲಿದೆ ಎಂದು ನಿಕ್ ತಿಳಿಸಿದ್ದಾರೆ. ಈ ವರ್ಷ ನಾಡನ್ನಾಳುವ ಒಬ್ಬ ದೊರೆ ಹಾಗೂ ಕಾಡನ್ನಾಳುವ ಒಬ್ಬ ದೊರೆ ಹೀಗೆ ರಾಜಮನೆತನದಲ್ಲಿ ಇಬ್ಬರು ರಾಜರು ತಮ್ಮ ಪ್ರಭಾವವನ್ನು ಮೆರೆಯಲಿದ್ದಾರೆ ಎಂದು ನಿಕ್ ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ರಾಣಿ ಎಲಿಜಬೆತ್ II  (Queen Elizabeth II) ಮರಣದ ನಂತರ ಅವರ ಪುತ್ರ ಕಿಂಗ್ ಚಾರ್ಲ್ಸ್ III ತನ್ನ ಮುಂಬರುವ ಪಟ್ಟಾಭಿಷೇಕದೊಂದಿಗೆ ಗಮನ ಸೆಳೆಯಲಿದ್ದರೆ, ರಾಜಮನೆತನದ ಇನ್ನೊಬ್ಬ ಸದಸ್ಯ ಕೂಡ ಕಾಡಿನ ಪರಿಸರದಲ್ಲಿ ನಡೆಯುವ ರಿಯಾಲಿಟಿ ಶೋ (Reality Show) ಒಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆಯಲಿದ್ದಾರೆ ಎಂದು ವರದಿಯಾಗಿದೆ. ರಾಣಿ ಎಲಿಜಬೆತ್ II ಅವರ ಮೊಮ್ಮಗಳು ಜಾರಾ ಟಿಂಡಾಲ್ ಅವರನ್ನು ವಿವಾಹವಾಗಿರುವ (Marriage) ಮೈಕ್ ಟಿಂಡಾಲ್ ಅವರು ಐಯಾಮ್ ಎ ಸೆಲೆಬ್ರಿಟಿ ಗೆಟ್‌ ಮಿ ಔಟ್ ಆಫ್ ಹಿಯರ್ ಎಂಬ ರಿಯಾಲಿಟಿ ಟಿವಿ ಶೋದ ಮುಂದಿನ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ವರದಿಯಾಗಿದೆ.


ಈ ಪ್ರದರ್ಶನದಲ್ಲಿ 43 ರ ಹರೆಯದ ಮೈಕ್ ಟಿಂಡಾಲ್ ಅವರು ಆರು ಅಂಕಿಯ ವೇತನವನ್ನು ಹೊಂದಲಿದ್ದು, ಚಕ್ರವರ್ತಿಯ ಅನುಮತಿಯನ್ನು ಪಡೆದಿಲ್ಲ ಎಂಬುದು ವರದಿಯಾಗಿದೆ.


ರಾಜಮನೆತನದ ಇಬ್ಬರು ರಾಜರ ಆಳ್ವಿಕೆ
ಬ್ರ್ಯಾಂಡ್ ಎಕ್ಸ್‌ಪರ್ಟ್ ನಿಕ್ ಅಡೆ ಹೇಳುವಂತೆ ಬ್ರ್ಯಾಂಡ್ ಟಿಂಡಾಲ್‌ಗೆ ಉತ್ತಮ ಮುನ್ನಡೆ ಇದಾಗಿದ್ದು, ಅವರ ಸೆಲೆಬ್ರಿಟಿ ಈಕ್ವಿಟಿಯು ಹತ್ತುಪಟ್ಟು ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ. ಎಲ್ಲರ ಕಣ್ಣು ಈ ವರ್ಷ ಮೈಕ್ ಅವರ ಮೇಲಿರಲಿದೆ ಎಂದು ನಿಕ್ ತಿಳಿಸಿದ್ದಾರೆ. ಈ ವರ್ಷ ನಾಡನ್ನಾಳುವ ಒಬ್ಬ ದೊರೆ ಹಾಗೂ ಕಾಡನ್ನಾಳುವ ಒಬ್ಬ ದೊರೆ ಹೀಗೆ ರಾಜಮನೆತನದಲ್ಲಿ ಇಬ್ಬರು ರಾಜರು ತಮ್ಮ ಪ್ರಭಾವವನ್ನು ಮೆರೆಯಲಿದ್ದಾರೆ ಎಂದು ನಿಕ್ ತಿಳಿಸಿದ್ದಾರೆ.


ಟಿವಿ ರಿಯಾಲಿಟಿ ಶೋ ಕುರಿತು
'ಐಯಾಮ್‌ ಎ ಸೆಲೆಬ್ರಿಟಿ ಗೆಟ್‌ ಮಿ ಔಟ್ ಆಫ್ ಹಿಯರ್' ಇದೊಂದು ರಿಯಾಲಿಟಿ ಟಿವಿ ಶೋ ಆಗಿದ್ದು, ಲಂಡನ್ ವೀಕೆಂಡ್, ಈ ಟೆಲಿವಿಶನ್ ಶೋವನ್ನು ರಚಿಸಿದರೆ, ಐಟಿವಿ ಸ್ಟುಡಿಯೋಸ್ ನಿರ್ಮಿಸುತ್ತಿದೆ. ಕಿಂಗ್ ಆಫ್ ದಿ ಜಂಗಲ್ ಇಲ್ಲವೇ ಕ್ವೀನ್ ಆಫ್ ದಿ ಜಂಗಲ್ ಕಿರೀಟವನ್ನು ತಮ್ಮದಾಗಿಸಿಕೊಳ್ಳಲು ಸೆಲೆಬ್ರಿಟಿಗಳ ಗುಂಪು ಕಾಡಿನ ಪರಿಸರದಲ್ಲಿ ಹಲವಾರು ವಾರಗಳ ಕಾಲ ಜೊತೆಯಾಗಿ ವಾಸಿಸುತ್ತಾರೆ. ಅಂತಿಮ ಸಂಚಿಕೆಯ ಮತಗಳು ಸರಣಿಯನ್ನು ಗೆಲ್ಲುವವರನ್ನು ನಾಮನಿರ್ದೇಶನ ಮಾಡುತ್ತವೆ.


ಇದನ್ನೂ ಓದಿ:  Britain Royal Family: ಬ್ರಿಟನ್ ರಾಜಮನೆತನದ ಕಥೆ ನಿಮಗೆ ಗೊತ್ತಾ? ಇಲ್ಲಿದೆ ಓದಿ ರಾಯಲ್ ಕಹಾನಿ


ರಗ್ಬಿ ಆಟಗಾರರಾಗಿರುವ ಮೈಕ್ ಟಿಂಡಾಲ್
ಅಂತರರಾಷ್ಟ್ರೀಯ ರಗ್ಬಿ ಆಟಗಾರರಾಗಿರುವ ಮೈಕ್ ಟಿಂಡಾಲ್, ಇಂಗ್ಲೆಂಡ್ ತಂಡ 2003 ರಲ್ಲಿ ಗೆದ್ದುಕೊಂಡ ವಿಶ್ವಕಪ್‌ನ ಭಾಗವೆನಿಸಿದ್ದಾರೆ. ರಾಜಮನೆತನದ ಭಾಗವಾಗಿದ್ದರೂ ಟಿಂಡಾಲ್ ತೆರೆಮರೆಯಲ್ಲಿಯೇ ಇದ್ದವರಾಗಿದ್ದಾರೆ. ತಮ್ಮ ಪತ್ನಿಯೊಂದಿಗೆ ಟಿಂಡಾಲ್ ರಾಜಮನೆತನದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಹಾಗೂ ರಾಯಲ್ ಅಸ್ಕಾಟ್ ಮತ್ತು ಚೆಲ್ಟೆನ್‌ಹ್ಯಾಮ್ ಉತ್ಸವದಲ್ಲೂ ಪಾಲ್ಗೊಳ್ಳುತ್ತಾರೆ.


ಎಲಿಜಬೆತ್ II ಅಂತ್ಯಕ್ರಿಯೆಯಲ್ಲಿ ಕೂಡ ಮೈಕ್ ಪತ್ನಿ ಜರಾ ಜತೆಗೂಡಿ ರಾಣಿಗೆ ಅಂತಿಮ ವಿದಾಯ ಸಮರ್ಪಿಸಿದ್ದರು ಹಾಗೂ ರಾಣಿಯ ಮರಣ ರಾಜಮನೆತನಕ್ಕೆ ಭರಿಸಲಾಗದ ನಷ್ಟ ಎಂದು ತಿಳಿಸಿದ್ದಾರೆ. ರಾಣಿ ತಮ್ಮ ಕೊನೆಗಾಲದಲ್ಲಿ ಕೂಡ ಸಂಪೂರ್ಣ ಕುಟುಂಬ ಒಟ್ಟಾಗಿ ಕಾಲಕಳೆಯುವಂತೆ ಮಾಡಿದರು ಎಂದು ಮೈಕ್ ತಿಳಿಸಿದ್ದರು.


ಹಲವಾರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಮೈಕ್ ಟಿಂಡಾಲ್
ಮೈಕ್ 1987 ರಲ್ಲಿ ಪ್ರಿನ್ಸ್ ಎಡ್ವರ್ಡ್, ಪ್ರಿನ್ಸೆಸ್ ಅನ್ನಿ, ಪ್ರಿನ್ಸ್ ಆಂಡ್ರ್ಯೂ ಮತ್ತು ಸಾರಾ, ಡಚೆಸ್ ಆಫ್ ಯಾರ್ಕ್, ಇಟ್ಸ್ ಎ ರಾಯಲ್ ನಾಕೌಟ್ ಎಂಬ ಚಾರಿಟಿ-ನೇತೃತ್ವದ ರಿಯಾಲಿಟಿ ಟಿವಿ ಶೋ ಒಂದರಲ್ಲಿ ಭಾಗವಹಿಸಿದ್ದರು. ರಾಣಿಯವರು ಈ ಶೋಗೆ ತಮ್ಮ ಸಂಪೂರ್ಣ ಒಪ್ಪಿಗೆಯನ್ನು ನೀಡಿರಲಿಲ್ಲ ಅದಾಗ್ಯೂ ಈ ಶೋ 18 ಮಿಲಿಯನ್ ವೀಕ್ಷಕರನ್ನು ಪಡೆದುಕೊಂಡಿತು ಹಾಗೂ 1.5 ಮಿಲಿಯನ್ ಸಂಗ್ರಹಿಸಿತು.


ಇದನ್ನೂ ಓದಿ:   Queen Elizabeth: ಬ್ರಿಟನ್ ರಾಣಿಯ ಸೌಂದರ್ಯದ ಗುಟ್ಟು ಈ ಪಾನೀಯಗಳಂತೆ


ಬಾಯ್ ಜಾರ್ಜ್, ಲವ್ ಐಲ್ಯಾಂಡ್ ತಾರೆ ಒಲಿವಿಯಾ ಅಟ್ವುಡ್ ಮತ್ತು DJ ಕ್ರಿಸ್ ಮೊಯ್ಲ್ಸ್ ಸೇರಿದಂತೆ ಇತರ ಪ್ರಸಿದ್ಧ ವ್ಯಕ್ತಿಗಳು ರಿಯಾಲಿಟಿ ಶೋದಲ್ಲಿ ಮೈಕ್ ಅವರೊಂದಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬುದು ವರದಿಯಾಗಿದೆ. ಟಿವಿ ಸೀರೀಸ್‌ನ 22 ನೇ ಕಂತಿನಲ್ಲಿ ಟಿಂಡಲ್ ಸಾಕಷ್ಟು ವೋಟ್‌ಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಊಹಿಸಲಾಗಿದೆ.

Published by:Ashwini Prabhu
First published: