ಜೈಲ್ ಬ್ರೇಕ್ ಪ್ರಕರಣದಲ್ಲಿ ಜೈಲು ಪಾಲಾಗಿ ಜೈಲಿಂದಲೇ ನಕಲಿ ಸರ್ಕಾರಿ ವೆಬ್‌ಸೈಟ್ ನಡೆಸಿದ ಆರೋಪಿಗಳು!

ಆರೋಪಿಗಳು Sdrfindia.org ಎಂಬ ಡೊಮೇನ್ ಹೆಸರಿನೊಂದಿಗೆ ನಕಲಿ ವೆಬ್‌ಸೈಟ್ ರಚಿಸುವ ಮೂಲಕ ಜನರನ್ನು ಮೋಸಗೊಳಿಸಲು ಇಬ್ಬರೂ ನಭಾ ಜೈಲಿನಲ್ಲೇ ಸಂಚು ಹೂಡಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಚಂಡೀಗಡ: ಪಂಜಾಬ್ ರಾಜ್ಯದ ನಭಾ ಜೈಲ್ ಬ್ರೇಕ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಇಬ್ಬರು ಆರೋಪಿಗಳು ಜನರನ್ನು ಮೋಸಗೊಳಿಸಲು ಮೇ ಮತ್ತು ಜೂನ್ ತಿಂಗಳಲ್ಲಿ ಪಂಜಾಬ್‌ನ ಅದೇ ಹೈ-ಸೆಕ್ಯುರಿಟಿ ಜೈಲಿನಿಂದ ಭಾರತದ ನಕಲಿ ಸರ್ಕಾರದ ವೆಬ್‌ಸೈಟ್ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ವಿಚಾರ ಇದೀಗ ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಈ ಪ್ರಕರಣದ ಇಬ್ಬರು ಆರೋಪಿಗ ಳಾದ ಕುರುಕ್ಷೇತ್ರದ ಅಮನ್ ಅಲಿಯಾಸ್ ಅರ್ಮಾನ್ ಮತ್ತು ಲುಧಿಯಾನದ ಸುನಿಲ್ ಕಲ್ರಾ ಅವರನ್ನು ನಭಾ ಜೈಲ್‌ಬ್ರೇಕ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈ ಇಬ್ಬರೂ ಆರೋಪಿಗಳು 2016 ರ ನವೆಂಬರ್‌ನಲ್ಲಿ 6 ಜನ ದಾಳಿಕೋರರು ಜೈಲಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು ಎಂಬ ಆರೋಪದ  ಮೇಲೆ ಈ ಇಬ್ಬರನ್ನೂ ಬಂಧನಕ್ಕೆ ಒಳಪಡಿಸಲಾಗಿತ್ತು.

  ಈ ಇಬ್ಬರ ವಿರುದ್ಧವೂ ಹಲವಾರು ವಂಚನೆ ಪ್ರಕರಣಗಳು ದಾಖಲಾಗಿವೆ. ಅಮನ್ ವಿಚಾರಣೆಯಲ್ಲಿದ್ದರೆ, ಸುನಿಲ್ ಕಲ್ರಾ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

  ಆರೋಪಿಗಳು Sdrfindia.org ಎಂಬ ಡೊಮೇನ್ ಹೆಸರಿನೊಂದಿಗೆ ನಕಲಿ ವೆಬ್‌ಸೈಟ್ ರಚಿಸುವ ಮೂಲಕ ಜನರನ್ನು ಮೋಸಗೊಳಿಸಲು ಇಬ್ಬರೂ ನಭಾ ಜೈಲಿನಲ್ಲೇ ಸಂಚು ಹೂಡಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

  ಪಂಜಾಬ್ ಪೊಲೀಸರ ಪ್ರಕಾರ, "ಇವರಿಬ್ಬರು ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ) ಅಡಿಯಲ್ಲಿ ಅಧಿಕಾರಿಗಳು ಮತ್ತು ಸ್ವಯಂಸೇವಕರಾಗಿ ನೇಮಕ ಮಾಡಿಕೊಳ್ಳುವ ಮೂಲಕ ಜನರಿಂದ ಹಣವನ್ನು ಪಡೆದು ಮೋಸಗೊಳಿಸಲು ಬಯಸಿದ್ದರು" ತಿಳಿಸಿದ್ದಾರೆ.

  ಅಧಿಕೃತವಾಗಿ ಭಾರತ ಸರ್ಕಾರದ ಲಾಂಛನ ಮತ್ತು ಎನ್​ಡಿಆರ್​ಎಫ್​ ವೆಬ್​ಸೈಟ್ ndrf.gov.in ವಿಚಾರವನ್ನು ನಕಲಿಯಾಗಿ ಕದ್ದು, ಮೋಡೆಸ್​ ಒಪೆರಾಂಡಿ ವೆಬ್​ಸೈಟ್​ ಮಾಲೀಕರಂತೆ ಜನರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ವೆಬ್​ಸೈಟ್​ನಲ್ಲಿ ಉದ್ಯೋಗಾವಕಾಶಗಳು, ಟೆಂಡರ್‌ಗಳು, ಪ್ರಶಸ್ತಿಗಳು ಮತ್ತು ಆರ್‌ಟಿಐ ಯಾಂತ್ರಿಕ ವ್ಯವಸ್ಥೆಗೆ ಕಾರಣವಾಗುವ ವಿವಿಧ ಲಿಂಕ್‌ಗಳನ್ನೂ ನೀಡುವ ಮೂಲಕ ಸಂಪೂರ್ಣ ಸರ್ಕಾರಿ ವೆಬ್​ಸೈಟ್ ರೀತಿಯಲ್ಲೇ ಮೋಸ ಮಾಡಿದ್ದಾರೆ ಎಂದು ಪಂಜಾಬ್ ಪೊಲೀಸ್​ ಮಹಾ ನಿರ್ದೇಶಕ ನರೇಂದ್ರ ಸೂದ್ ತಿಳಿಸಿದ್ದಾರೆ.

  ಇದನ್ನೂ ಓದಿ: Mekedatu Project| ಕರ್ನಾಟಕಕ್ಕೆ ಮೇಕೆದಾಟು ಡ್ಯಾಂ ಕಟ್ಟುವ ಹಕ್ಕಿದ್ದರೆ, ಅದನ್ನು ನಿಲ್ಲಿಸುವ ಹಕ್ಕು ನಮಗೂ ಇದೆ; ತಮಿಳುನಾಡು

  ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪಟಿಯಾಲ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಸಂದೀಪ್ ಕುಮಾರ್​ ಗರ್ಗ್​, "ಪ್ರಕರಣದ ತನಿಖೆಗಾಗಿ ಎಫ್​ಐಆರ್​ ದಾಖಲಿಸಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಪೈಕಿ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ನಾವು ಈ ಪ್ರಕರಣವನ್ನು ಅತ್ಯಂತ ಗಂಭೀರತೆಯಿಂದ ತನಿಖೆ ಮಾಡುತ್ತಿದ್ದೇವೆ. ದೊಡ್ಡ ಹಗರಣ ಮತ್ತು ನೇಮಕಾತಿ ಮಾಡುವ ಉದ್ದೇಶದಿಂದ ಇವರಿಬ್ಬರು ರಾಷ್ಟ್ರೀಯ ಸಂಘಟನೆಯ ವೆಬ್‌ಸೈಟ್ ರಚಿಸಬಹುದೆಂಬುದೇ ಆತಂಕಕಾರಿ ವಿಚಾರವಾಗಿದೆ.

  ಇದನ್ನೂ ಓದಿ: Petrol Price Today| ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಇಲ್ಲ; ಇಲ್ಲಿದೆ ನಿಮ್ಮ ನಗರದ ತೈಲ ಬೆಲೆ ವಿವರ!

  ಆರೋಪಿಗಳು ಎಸ್​ಡಿಆರ್​ಎಫ್ ಗೆ ಸ್ವಯಂಸೇವಕರಾಗಿ ಸೇರಲು ವ್ಯಕ್ತಿಗಳಿಂದ ಹಣವನ್ನು ಪಡೆಯಲು ಯೋಜಿಸಿದ್ದಾರೆ. ಆದರೆ, ಅವರು ಜೈಲಿನ ಒಳಗೆ ಹೇಗೆ ಮೊಬೈಲ್ ಫೋನ್ ಪಡೆದರು ಮತ್ತು ಜೈಲಿನ ಒಳಗಿನಿಂದ ವೆಬ್‌ಸೈಟ್ ಅನ್ನು ಹೇಗೆ ರಚಿಸಿ ನಿರ್ವಹಿಸಿದರು? ಎಂಬ ಕುರಿತು ತನಿಖೆಯಾಗಲಿದೆ" ಎಂದು ತಿಳಿಸಿದ್ದಾರೆ.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: