HOME » NEWS » National-international » TWO HELD IN WEST DELHI FOR KILLING NEIGHBOUR MAK

Thriller Story: ಜಪ್ಪಯ್ಯ ಅಂದ್ರೂ ಕೊಲೆ ಆರೋಪ ಒಪ್ಪಿಕೊಳ್ಳದವರು ಪೊಲೀಸರ ಕಟ್ಟುಕಥೆ ನಂಬಿ ತಪ್ಪೊಪ್ಪಿಕೊಂಡರು!

ಹಲವು ದಿಕ್ಕುಗಳಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಪ್ರದೀಪ್, ರಾಜುನೇ ಕೊಲೆ ಮಾಡಿದ್ದಾರೆ ಎಂಬುವುದು ದೃಢವಾಗುತ್ತಾ ಹೋಯ್ತು. ಎರಡ್ಮೂರು ಬಾರಿ ಠಾಣೆಗೆ ಕರೆದು ವಿಚಾರಣೆ ನಡೆಸಿದ್ರೂ ಪ್ರದೀಪ್, ರಾಜು ತುಂಬ ಜಾಣ್ಮೆಯಿಂದ ನುಣುಚಿಕೊಂಡರು.

news18-kannada
Updated:April 11, 2021, 4:22 PM IST
Thriller Story: ಜಪ್ಪಯ್ಯ ಅಂದ್ರೂ ಕೊಲೆ ಆರೋಪ ಒಪ್ಪಿಕೊಳ್ಳದವರು ಪೊಲೀಸರ ಕಟ್ಟುಕಥೆ ನಂಬಿ ತಪ್ಪೊಪ್ಪಿಕೊಂಡರು!
ಪ್ರಾತಿನಿಧಿಕ ಚಿತ್ರ.
  • Share this:
ದೆಹಲಿ (ಏ.11) : ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಕ್ರೈಂ ಥ್ರಿಲ್ಲಿಂಗ್ ದೃಶ್ಯ ಸಿನಿಮಾ ಸಾಕಷ್ಟು ಮನ್ನಣೆ ಗಳಿಸಿತ್ತು. ಮಲೆಯಾಳಂನಲ್ಲಿ ದೃಶ್ಯಂ-2 ಕೂಡ ಇತ್ತೀಚೆಗೆ ರಿಲೀಸ್ ಆಗಿ ಸಿನಿ ರಸಿಕರನ್ನು ರಂಜಿಸಿತ್ತು. ಕೊಲೆ ಮಾಡಿದವರು ಪೊಲೀಸರಿಂದ ತಪ್ಪಿಸಿಕೊಳ್ಳುವುದರ ಸುತ್ತಲೇ ಹೆಣದಿರುವ ದೃಶ್ಯ ಸಿನಿಮಾವನ್ನು ಹಲವರು ಸ್ಫೂರ್ತಿಯಾಗಿ ಪಡೆದೆಕೊಂಡಿದ್ದೂ ಇದೆ. ಸಿನಿಮಾದಂತೆಯೇ ಅಪರಾಧದಿಂದ ತಪ್ಪಿಕೊಳ್ಳಲು ಯತ್ನಿಸಿ ಸಿಕ್ಕಿ ಬಿದ್ದವರೂ ಇದ್ದಾರೆ. ಈಗ ಇಂಥಹದ್ದೇ ಘಟನೆ ದೆಹಲಿಯ ಮಂಗೋಲ್ಪುರಿಯಲ್ಲಿ ನಡೆದಿದೆ. ಆದರೆ ಇಲ್ಲಿ ಚಾಲಕಿ ಆರೋಪಿಗಳಿಗೆ ಪೊಲೀಸರೇ ಮಣ್ಣು ಮುಕ್ಕಿಸಿದ್ದಾರೆ. ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳು ಪೊಲೀಸರು ಹೆಣೆದ ಬಲೆಗೆ ಬಿದ್ದು ತಪ್ಪೊಪ್ಪಿಕೊಂಡಿದ್ದಾರೆ.

ಏಪ್ರಿಲ್ 5ರಂದು ದೆಹಲಿಯ ಹೊರವಲಯದ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಹೆಣವಾಗಿ ಪತ್ತೆಯಾಗಿದ್ದರು. ಮೃತ ವ್ಯಕ್ತಿಯನ್ನು ಚಂದ್ರಬಾನ್(35) ಎಂದು ಗುರುತ್ತಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಹಲವರನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರಿಗೆ ಮೃತ ಚಂದ್ರಬಾನ್ರ ಪಕ್ಕದ ಮನೆಯ ಇಬ್ಬರ ಮೇಲೆ ತೀವ್ರ ಅನುಮಾನ ವ್ಯಕ್ತವಾಯಿತು. ಪಕ್ಕದ ಮನೆಯ ನಿವಾಸಿಗಳಾದ ಪ್ರದೀಪ್ ಹಾಗೂ ರಾಜು ಮೇಲೆ ಪೊಲೀಸರು ಕಣ್ಣಿಟ್ಟಿದ್ದರು.

ಹಲವು ದಿಕ್ಕುಗಳಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಪ್ರದೀಪ್, ರಾಜುನೇ ಕೊಲೆ ಮಾಡಿದ್ದಾರೆ ಎಂಬುವುದು ದೃಢವಾಗುತ್ತಾ ಹೋಯ್ತು. ಎರಡ್ಮೂರು ಬಾರಿ ಠಾಣೆಗೆ ಕರೆದು ವಿಚಾರಣೆ ನಡೆಸಿದ್ರೂ ಪ್ರದೀಪ್, ರಾಜು ತುಂಬ ಜಾಣ್ಮೆಯಿಂದ ನುಣುಚಿಕೊಂಡರು. ಕೊಲೆ ನಡೆದಾಗ ನಾವು ಆ ಸ್ಥಳದಲ್ಲಿ ಇರಲಿಲ್ಲ ಎಂದೇ ವಾದಿಸುತ್ತಿದ್ದರು. ಪ್ರದೀಪ್, ರಾಜು ವರಸೆ ನೋಡಿ ಪೊಲೀಸರೇ ಸುಮ್ಮನಾಗಬೇಕಾಯ್ತು. ಯಾವುದೇ ಪ್ರಬಲ ಸಾಕ್ಷ್ಯ ಇಲ್ಲದ್ದರಿಂದ ಪೊಲೀಸರು ಇಬ್ಬರನ್ನು ಬಿಟ್ಟು ಕಳುಹಿಸಿದ್ದರು.

ಇದನ್ನೂ ಓದಿ: ಮಾದರಿ ನೀತಿ ಸಂಹಿತೆಯನ್ನು ಮೋದಿ ಸಂಹಿತೆ ಎಂದು ಮರುಣಾಮಕರಣಗೊಳಿಸಿ; ಚುನಾವಣಾ ಆಯೋಗಕ್ಕೆ ಮಮತಾ ಚಾಟಿ

ದೃಶ್ಯ ಸಿನಿಮಾದಂತೆ ಆರೋಪಿಗಳು ಘಟನೆ ನಡೆದಾಗ ನಾವು ಸ್ಥಳದಲ್ಲಿ ಇರಲಿಲ್ಲ ಎಂದೇ ವಾದಿಸುತ್ತಿದ್ದನು. ಈತನ ನಟನೆ ನೋಡಿದ ಪೊಲೀಸರು ತಮ್ಮ ತನಿಖೆಯ ಶೈಲಿಯನ್ನೇ ಬದಲಿಸಿದ್ರು. ಆರೋಪಿಗಳಾದ ಪ್ರದೀಪ್, ರಾಜುರನ್ನು ಮತ್ತೆ ಠಾಣೆಗೆ ಕರೆದು ನೀವಿಬ್ಬರು ಚಂದ್ರಬಾನ್ನ ಕೊಲೆ ಮಾಡಿರೋದು ನಾಸಾದ ಸ್ಯಾಟಲೈಟ್​ನಲ್ಲಿ ರೆಕಾರ್ಡ್ ಆಗಿದೆ ಸುಮ್ಮನೆ ತಪ್ಪೊಪ್ಪಿಕೊಳ್ಳಿ ಎಂದಿದ್ದಾರೆ. ಕೊಲೆ ಮಾಡಿರೋದು ರೆಕಾರ್ಡ್ ಆಗಿದೆ ಅನ್ನತ್ತಲೇ ಆರೋಪಿಗಳಿಬ್ಬರು ಬೇರೆ ದಾರಿ ಇಲ್ಲದೆ ತಪ್ಪೊಪ್ಪಿಕೊಂಡಿದ್ದಾರೆ. ಜೊತೆಗಾಗಿ ಮದ್ಯ ಕುಡಿಯುತ್ತಿದ್ದ ವೇಳೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಯ್ತು ಅಂತ ಬಾಯ್ಬಿಟ್ಟಿದ್ದಾರೆ.

ನಾಸಾ ಸ್ಯಾಟಲೈಟ್ ಕೊಲೆ ದೃಶ್ಯವನ್ನು ಸೆರೆ ಹಿಡಿದೆ ಎಂಬ ಪೊಲೀಸರ ಒಂದೇ ಸುಳ್ಳನ್ನು ನಂಬಿದ ಆರೋಪಿಗಳು ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಪೊಲೀಸರ ಜಾಣ ನಡೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.(ವರದಿ: ಕಾವ್ಯ ವಿ)
Published by: MAshok Kumar
First published: April 11, 2021, 4:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories