ಮೇಕೆಗಳನ್ನು ಬಂಧಿಸಿದ ಪೊಲೀಸರು; ಮೂಕ ಪ್ರಾಣಿಗಳು ಮಾಡಿದ ತಪ್ಪೇನು?

ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನೆಟ್ಟಿದ್ದ ಸುಮಾರು 150 ಸಸಿಗಳನ್ನು ಮೇಕೆಗಳು ಮೇಯ್ದಿವೆ ಎಂದು ಮರಗಳನ್ನು ಉಳಿಸಿಸಂಸ್ಥೆಯ  ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದರು ಎನ್ನಲಾಗಿದೆ.

Latha CG | news18-kannada
Updated:September 13, 2019, 1:21 PM IST
ಮೇಕೆಗಳನ್ನು ಬಂಧಿಸಿದ ಪೊಲೀಸರು; ಮೂಕ ಪ್ರಾಣಿಗಳು ಮಾಡಿದ ತಪ್ಪೇನು?
ಪ್ರಾತಿನಿಧಿಕ ಚಿತ್ರ
  • Share this:
ತೆಲಂಗಾಣ(ಸೆ.13): ಮನುಷ್ಯರು ತಪ್ಪು ಮಾಡುವುದು ಸಾಮಾನ್ಯ. ಆ ತಪ್ಪಿಗೆ ಶಿಕ್ಷೆ ನೀಡಲು ನಾವೇ ರೂಪಿಸಿಕೊಂಡಿರುವ ಕಾನೂನಿನ ಮೊರೆ ಹೋಗುವುದು ಕೂಡ ಸಾಮಾನ್ಯವೇ. ಆದರೆ ಮೂಕ ಪ್ರಾಣಿಗಳು ತಪ್ಪು ಮಾಡಿದರೆ ಅವುಗಳಿಗೆ ಮನುಷ್ಯರ ಕಾನೂನು ಅನ್ವಯವಾಗಬಲ್ಲುದೇ? ಅಪರಾಧ ಎಸಗಿವೆ ಎಂದು ಬಂಧಿಸಿ ಜೈಲಿಗೆ ಹಾಕಲು ಸಾಧ್ಯವೇ? ಸಾಧ್ಯ ಎನ್ನುತ್ತಿದ್ದಾರೆ ತೆಲಂಗಾಣ ಪೊಲೀಸರು. ಹೌದು, ತಪ್ಪು ಎಸಗಿದ ಆರೋಪದಡಿ ಎರಡು ಮೇಕೆಗಳನ್ನು ಪೊಲೀಸರು ಬಂಧಿಸಿದ್ದರು. ಅಷ್ಟಕ್ಕೂ ಆ ಮೂಕ ಪ್ರಾಣಿಗಳು ಮಾಡಿದ ತಪ್ಪಾದರೂ ಏನು ಅಂತೀರಾ? ಮುಂದೆ ಓದಿ.

ಎನ್​ಜಿಓ ಸಂಸ್ಥೆಯೊಂದು ಬೆಳೆಸಿದ್ದ ಗಿಡಗಳನ್ನು ಈ ಎರಡು ಮೇಕೆಗಳು ತಿಂದಿವೆ ಎಂದು ತೆಲಂಗಾಣ ಪೊಲೀಸರು ಈ ಮೇಕೆಗಳನ್ನು ಬಂಧಿಸಿದ್ದಾರೆ. ಕರೀಂನಗರ ಜಿಲ್ಲೆಯ ಹುಜುರಾಬಾದ್​ ನಗರದಲ್ಲಿ ಈ ವಿಚಿತ್ರ ಪ್ರಕರಣ ವರದಿಯಾಗಿದೆ. ಎನ್​ಜಿಓ ಕಾರ್ಯಕರ್ತರು ಗಿಡ ಮೇಯ್ದ ಎರಡು ಮೇಕೆಗಳನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸ್​ ಠಾಣೆಯ ಹೊರಗೆ ಆ ಮೇಕೆಗಳನ್ನು ಕಟ್ಟಲಾಗಿತ್ತು.

ಡಿಕೆಶಿ ಪರ ಭಾರೀ ಪ್ರತಿಭಟನೆ ನಂತರ ಒಕ್ಕಲಿಗರ ಓಲೈಕೆಗೆ ಮುಂದಾದ ಬಿಜೆಪಿ; ಕೆಂಪೇಗೌಡ ಪ್ರತಿಮೆ ಸ್ಥಾಪನೆಗೆ 100 ಕೋಟಿ ಬಿಡುಗಡೆ

ಮೇಕೆಗಳ ಮಾಲೀಕ ಮುನ್ಸಿಪಲ್​ ಅಧಿಕಾರಿಗಳಿಗೆ 1 ಸಾವಿರ ರೂ. ದಂಡ ಕಟ್ಟಿದ ಬಳಿಕ ಆ ಮೇಕೆಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಇನ್ಸ್​​ಪೆಕ್ಟರ್​ ವಾಸಂಶೆಟ್ಟಿ ಮಾಧವಿ ಹೇಳಿದ್ದಾರೆ. ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನೆಟ್ಟಿದ್ದ ಸುಮಾರು 150 ಸಸಿಗಳನ್ನು ಮೇಕೆಗಳು ಮೇಯ್ದಿವೆ ಎಂದು 'ಮರಗಳನ್ನು ಉಳಿಸಿ'ಸಂಸ್ಥೆಯ  ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದರು ಎನ್ನಲಾಗಿದೆ.

ಇನ್ನು, ಈ ಘಟನೆ ಬಗ್ಗೆ ಪೊಲೀಸ್​ ಅಧಿಕಾರಿ ಸ್ಪಷ್ಟನೆ ನೀಡಿದ್ದು, ನಾವು ಪ್ರಾಣಿಗಳನ್ನು ಬಂಧಿಸಿಲ್ಲ. ಐಪಿಸಿಯಲ್ಲಿ, ಪ್ರಾಣಿಗಳನ್ನು ಬಂಧಿಸಿ ಶಿಕ್ಷೆ ನೀಡುವ ಯಾವುದೇ ಕಾಯ್ದೆ ಇಲ್ಲ ಎಂದು ಹೇಳಿದ್ದಾರೆ. "ಮೇಕೆಗಳ ಮಾಲೀಕ ದಂಡ ಕಟ್ಟಿದ ಬಳಿಕ ಅವರಿಗೆ ಮೇಕೆಗಳನ್ನು ಒಪ್ಪಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ನೆಟ್ಟಿರುವ ಸಸಿಗಳನ್ನು ಮತ್ತೊಮ್ಮೆ ಮೇಯಿಸಿದಂತೆ ಮಾಲೀಕನಿಗೆ ಎಚ್ಚರಿಕೆ ನೀಡಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading