Viral Video: ನಡುರಸ್ತೆಯಲ್ಲಿ ಯುವತಿಯರ ಬೈಕ್​ ಸ್ಟಂಟ್​: 28 ಸಾವಿರ ರೂ ದಂಡ ವಿಧಿಸಿದ ಪೊಲೀಸರು

ಇನ್ನು ಈ ವಿಡಿಯೋದಲ್ಲಿ ಈ ಸಾಹನ ನಡೆಸಿರುವ ಈ ಇಬ್ಬರು ಯುವತಿಯರು 20 ವರ್ಷದೊಳಗಿನವರಾಗಿದ್ದು, ಇತ್ತೀಚೆಗಷ್ಟೆ ಅವರು ತಮ್ಮ ಚಾಲನಾ ಕಲಿಕಾ ಪರವಾನಿಗೆ ಪಡೆದಿದ್ದರು ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

ಸಾಹಸ ಪ್ರದರ್ಶಿಸಿದ ಯುವತಿಯರು

ಸಾಹಸ ಪ್ರದರ್ಶಿಸಿದ ಯುವತಿಯರು

 • Share this:
  ಬೈಕ್​ನಲ್ಲಿ ಸಾಹಸ ಪ್ರದರ್ಶನ ನಡೆಸಿದ ಇಬ್ಬರು ಯುವತಿಯರಿಗೆ ಗಾಜಿಯಾಬಾದ್​ ಪೊಲೀಸರು ದಂಡ ವಿಧಿಸಿದ್ದಾರೆ. ನಡುರಸ್ತೆಯಲ್ಲಿ ಬೈಕ್​ ಮೇಲೇರಿ ಸಾಹಸ ಪ್ರದರ್ಶನ ನಡೆಸಿದ ಯುವತಿಯರು ಈ ದೃಶ್ಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಈ ವಿಡಿಯೋ ಮೇಲೆ ಸುಮೋಟೋ ಕಾಂಗ್ನಿಜೆನನ್ಸ್​ ಆಗಿ ಪ್ರಕರಣ ದಾಖಲಿಸಿದ ಪೊಲೀಸರು ಟ್ರಾಫಿಕ್​ ನಿಯಮ ಉಲ್ಲಂಘನೆ ಆರೋಪದ ಮೇಲೆ 28 ಸಾವಿರ ರೂ ದಂಡ ವಿಧಿಸಿದ್ದಾರೆ. ಕುಸ್ತಿಪಟು ಸ್ನೇಹಾ ರಘುವಂಶಿ ಬೈಕ್​ ಚಾಲನೆ ಮಾಡುವಾಗ ಆಕೆಯ ಭುಜದ ಮೇಲೆ ಶಿವಾಂಗಿ ದಬಾಸ್​ ಕುಳಿತಿದ್ದರು. ಶನಿವಾರ ಈ ವಿಡಿಯೋ ಚಿತ್ರೀಕರಿಸಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.

  ಸ್ಟಂಟ್​ ಮಾಡಿದ ಸ್ನೇಹಾ ರಘುವಂಶಿ ತಾಯಿ ಮಂಜು ಅವರಿಗೆ 11 ಸಾವಿರ ದಂಡದ ಚಲನ್​ ಕಳುಹಿಸಲಾಗಿದ್ದು, ವಿಡಿಯೋದಲ್ಲಿ ಬಳಕೆಯಾದ ಬೈಕ್​ ಮಾಲೀಕ ಸಂಜಯ್​ ಕುಮಾರ್​ ಅವರಿಗೆ 17 ಸಾವಿರ ದಂಡ ವಿಧಿಸಲಾಗಿದೆ.
  ಇನ್ನು ಈ ವಿಡಿಯೋದಲ್ಲಿ ಈ ಸಾಹನ ನಡೆಸಿರುವ ಈ ಇಬ್ಬರು ಯುವತಿಯರು 20 ವರ್ಷದೊಳಗಿನವರಾಗಿದ್ದು, ಇತ್ತೀಚೆಗಷ್ಟೆ ಅವರು ತಮ್ಮ ಚಾಲನಾ ಕಲಿಕಾ ಪರವಾನಿಗೆ ಪಡೆದಿದ್ದರು ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

  ಇದನ್ನು ಓದಿ: 5 ಕೆಜಿ ಚಿನ್ನಾಭರಣ ಧರಿಸಿ ನಾಮಪತ್ರ ಸಲ್ಲಿಸಿದ ತಮಿಳುನಾಡು ಬಂಗಾರದ ಮನುಷ್ಯ

  ಪ್ರಕರಣ ಕುರಿತು ಮಾತನಾಡಿರುವ ಶಿವಾಂಗಿ, ಶನಿವಾರ ನಾವು ಮಧುಬನ್​ ಬಪುಧಾಮ್​ ಬಳಿ ವಿಡಿಯೋ ಚಿತ್ರೀಕರಿಸಿದ್ದೇವು. ಇದನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿದ್ದು, ವೈರಲ್​ ಆಗಿತ್ತು. ಆದರೆ, ಇದರಿಂದಾಗಿ ನಾವು ಪೊಲೀಸರ ಬಳಿ ಸಿಕ್ಕಿಬಿದ್ದಿದ್ದೇವೆ. ನಾವು ಸುರಕ್ಷಾ ಕ್ರಮ ವಹಿಸಿ ಸ್ಟಂಟ್​ ಮಾಡಿದ್ದೇವೆ. ಫನ್​ಗಾಗಿ ನಾವು ಇದನ್ನು ಮಾಡಿದೇವು. ಇದರಿಂದ ವಿವಾದ ವಾಗುತ್ತದೆ ಎಂಬ ಅರಿವಿರಲಿಲ್ಲ ಎಂದಿದ್ದಾರೆ.

  ಸಂಚಾರ ನಿಯಮ ಉಲ್ಲಂಘಿಸಿದ ವಿವಿಧ ಪ್ರಕರಣಗಳ ಅಡಿಯಲ್ಲಿ ಇಬ್ಬರಿಗೂ ದಂಡ ವಿಧಿಸಲಾಗಿದೆ, ಅಲ್ಲದೇ ಅವರ ಬಳಿ ಡ್ರೈವಿಂಗ್​ ಲೈಸೆನ್ಸ್​ ಇಲ್ಲ. ಅಧಿಕಾರಿಗಳ ಅನುಮತಿ ಇಲ್ಲದೇ ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್​ ಮಾಡಲಾಗಿದೆ ಎಂದು ಗಾಜಿಯಾಬಾದ್​ ಎಸ್​ಪಿ ತಿಳಿಸಿದ್ದಾರೆ
  Published by:Seema R
  First published: