ಸಹಾಯ ಮಾಡು ಎಂದು ಮನವಿ ಮಾಡಿದ ಬಾಲಕಿಯರ ಮೇಲೆ 11 ಯುವಕರಿಂದ ಅತ್ಯಾಚಾರ

news18
Updated:August 20, 2018, 12:37 PM IST
ಸಹಾಯ ಮಾಡು ಎಂದು ಮನವಿ ಮಾಡಿದ ಬಾಲಕಿಯರ ಮೇಲೆ 11 ಯುವಕರಿಂದ ಅತ್ಯಾಚಾರ
news18
Updated: August 20, 2018, 12:37 PM IST
ನ್ಯೂಸ್​ 18 

ಜಾರ್ಖಂಡ್​ (ಆ.20): ಸಹಾಯ ಮಾಡು ಎಂದು ಮನವಿ ಮಾಡಿಕೊಂಡ ಅಪ್ರಾಪ್ತ ಯುವತಿಯರಿಬ್ಬರ ಮೇಲೆ 11 ಜನ ಯುವಕರು ಅತ್ಯಾಚಾರ ನಡೆಸಿರುವ ಘಟನೆ ಜಾರ್ಖಂಡ್​ನ ಲೊಹರ್ದಗ ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದ 11 ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು 18 ರಿಂದ 28 ವರ್ಷದ ವಯಸ್ಸಿನವರು ಎಂದು ಅಲ್ಲಿನ ಡಿಎಸ್​ಪಿ ಅಶೀಶ್​ ಕುಮಾರ್​ ತಿಳಿಸಿದ್ದಾರೆ.

ಆಗಸ್ಟ್​ 16ರಂದು ಅಪ್ರಾಪ್ತ ಬಾಲಕಿಯರಿಬ್ಬರು ತನ್ನ ನೆರೆ ಮನೆ ಹುಡುಗನ ಜೊತೆ ದ್ವಿಚಕ್ರವಾಹನದಲ್ಲಿ ಹಿರಿಹಿ ಹರಾ ತೊಲಿ ಪ್ರದೇಶಕ್ಕೆ ಹೊರಟಿದ್ದಾರೆ. ಈ ವೇಳೆ ಮಾರ್ಗ ಮಧ್ಯೆ ವಾಹನ ಕೆಟ್ಟು ನಿಂತಿದೆ. ಆಗ ಬಾಲಕಿ ಸಹಾಯಕ್ಕಾಗಿ ತನ್ನ ಗೆಳೆಯನಿಗೆ ಕರೆ ಮಾಡಿದ್ದಾಳೆ.

ಆದರೆ, ಆತ ಸಹಾಯ ಮಾಡುವ ಬದಲು ಬಾಲಕಿಯರಿದ್ದ ಸ್ಥಳಕ್ಕೆ 11 ಹುಡುಗರನ್ನು ಕಳುಹಿಸಿದ್ದಾನೆ. ಈ 11 ಯುವಕರು ಜೊತೆಯಲ್ಲಿದ್ದ ನೆರೆಮನೆ ಹುಡುಗನ ಮೇಲೆ ಹಲ್ಲೆ ನಡೆಸಿ ದೂರು ಬಿಟ್ಟು ಬಂದಿದ್ದಾರೆ.  ಬಳಿಕ ಬಾಲಕಿಯರಿಬ್ಬರನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿ, ಅವರ ಬಳಿಯಿದ್ದ ಮೊಬೈಲ್​ಗಳನ್ನು ಕಿತ್ತುಕೊಂಡಿದ್ದಾರೆ.

ಬಾಲಕಿಯರ ಹೇಳಿಕೆ ಆಧಾರದ ಮೇಲೆ ಸದರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಆರೋಪಿಗಳ ಪತ್ತೆಗಾಗಿ ಉಪವಿಭಾಗಧಿಕಾರಿ ಅರವಿಂದ್​ ಕುಮಾರ್​ ವರ್ಮಾ ಮತ್ತು ಮಹ್ಲಿ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

 
Loading...

 
First published:August 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...