74 ವರ್ಷ ಬಳಿಕ ಸ್ನೇಹಿತರ ಭೇಟಿ… ಪಾಕ್ ನೆಲಕ್ಕೆ ಕಾಲಿಟ್ಟ 91 ವರ್ಷದ ಸರ್ದಾರ್ಜಿಗೆ ಆದ ಅನುಭವ

Friends reunion in Kartarpur- ಭಾರತದಲ್ಲಿರುವ ಪಂಜಾಬ್ ಮತ್ತು ಪಾಕಿಸ್ತಾನದಲ್ಲಿರುವ ಪಂಜಾಬ್​ನಲ್ಲಿನ ಗುರುದ್ವಾರಗಳನ್ನ ಸಂಪರ್ಕಸುವ ಕರ್ತಾರಪುರ್ ಕಾರಿಡಾರ್ ಇದೀಗ 74 ವರ್ಷಗಳ ಬಳಿಕ ಇಬ್ಬರು ಸ್ನೇಹಿತರ ಪುನರ್ಮಿಲನಕ್ಕೆ ವೇದಿಕೆ ಕಲ್ಪಿಸಿದೆ.

ಭಾರತ ಮತ್ತು ಪಾಕಿಸ್ತಾನ ವಿಭಜನೆ ನಂತರ ಮೊದಲ ಬಾರಿಗೆ ಭೇಟಿಯಾದ ಇಬ್ಬರು ಸ್ನೇಹಿತರು

ಭಾರತ ಮತ್ತು ಪಾಕಿಸ್ತಾನ ವಿಭಜನೆ ನಂತರ ಮೊದಲ ಬಾರಿಗೆ ಭೇಟಿಯಾದ ಇಬ್ಬರು ಸ್ನೇಹಿತರು

  • Share this:
ಭಾರತಕ್ಕೆ ಸ್ವಾತಂತ್ರ್ಯ ಬರುವ ಒಂದು ದಿನ ಮೊದಲೇ ಅಂದರೆ ಆಗಸ್ಟ್‌ 14, 1947ರಂದು ಪಾಕಿಸ್ತಾನ ಹೊಸ ದೇಶವಾಗಿ ಜನ್ಮ ತಾಳಿತು. ಇದಕ್ಕೂ ಮುನ್ನ ಎಲ್ಲರೂ ಬ್ರಿಟಿಷ್‌ ಆಡಳಿತದಲ್ಲಿ ಭಾರತೀಯರಾಗೇ ಇದ್ದರು. ದೇಶ ವಿಭಜನೆಯ ನಂತರ ಕೋಟ್ಯಂತರ ಜನ ಪಾಕಿಸ್ತಾನಕ್ಕೆ ತೆರಳಿದರು. ಆದರೆ, ಪಾಕಿಸ್ತಾನ ಭಾಗದಲ್ಲಿದ್ದ ಅನೇಕ ಹಿಂದೂಗಳು ಭಾರತಕ್ಕೆ ಮರಳಿದರು. ಈ ವೇಳೆ ಸಾಕಷ್ಟು ಜನರು ತಮ್ಮ ಪ್ರಾಣ ಕಳೆದುಕೊಂಡಿರುವುದು ನಿಮಗೆಲ್ಲ ಗೊತ್ತೇ ಇದೆ. ಆದರೆ, ಈ ವೇಳೆ ಹಲವು ಸಂಬಂಧಿಕರು, ಸ್ನೇಹಿತರು ಸಹ ಬೇರ್ಪಟ್ಟಿದ್ದಾರೆ ಎನ್ನುವುದೂ ಸತ್ಯ. ಹೀಗೆ, 7 ದಶಕಗಳ ಹಿಂದೆ ನಡೆದಿರುವ ಈ ಘಟನೆಯಲ್ಲಿ ಬೇರೆಯಾದ ಇಬ್ಬರು ಸ್ನೇಹಿತರು ಇತ್ತೀಚೆಗೆ ಒಟ್ಟಾಗಿದ್ದಾರೆ. ಇದಕ್ಕೆ ಕಾರಣ ಕರ್ತಾರ್‌ಪುರ ಕಾರಿಡಾರ್‌.

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿರುವ ಕರ್ತಾರ್‌ಪುರದಲ್ಲಿ ಐತಿಹಾಸಿಕ ಹೆಗ್ಗುರುತಾದ ಕರ್ತಾರ್‌ಪುರ ಕಾರಿಡಾರ್‌ ಉದ್ಘಾಟನೆಯಾಗಿದೆ. ಭಾರತ ಮತ್ತು ಪಾಕಿಸ್ತಾನದಲ್ಲಿ ಇರುವ ಎರಡು ಪ್ರಮುಖ ಸಿಖ್ ಗುರುದ್ವಾರಗಳನ್ನ ಸಂಪರ್ಕಿಸುವ ಮಾರ್ಗವೇ ಕರ್ತಾರ್​ಪುರ್ ಕಾರಿಡಾರ್.

ಇಬ್ಬರು ಸ್ನೇಹಿತರ ಪುನರ್ಮಿಲನ:  

1947 ರಲ್ಲಿ ಭಾರತದ ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ಈ ಇಬ್ಬರು ಸ್ನೇಹಿತರು 74 ವರ್ಷಗಳ ನಂತರ ಮತ್ತೆ ಒಂದಾಗಬಹುದು ಎಂದು ಊಹಿಸಿರಲಿಲ್ಲ. ಆದರೆ ಕರ್ತಾರ್‌ಪುರದ ಗುರುದ್ವಾರ ದರ್ಬಾರ್ ಸಾಹಿಬ್‌ನಲ್ಲಿ ಈ ಅಪೂರ್ವ ಸಂಗಮವಾಗಿದೆ.

ಭಾರತದಿಂದ 91 ವರ್ಷದ ಸರ್ದಾರ್ ಗೋಪಾಲ್ ಸಿಂಗ್ ಅವರು ಧಾರ್ಮಿಕ ವಿಧಿಗಳನ್ನು ನಿರ್ವಹಿಸಲು ಪಾಕಿಸ್ತಾನಕ್ಕೆ ತೆರಳಿದರು. ಆದರೆ, ಅವರಿಗೆ ಪಾಕಿಸ್ತಾನದ ನರೋವಲ್ ಎಂಬ ನಗರದಿಂದ ಅಲ್ಲಿಗೆ ಬಂದ ತಮ್ಮ ದೀರ್ಘಕಾಲದ ಕಳೆದುಹೋದ 91 ವರ್ಷದ ಸ್ನೇಹಿತ, ಮೊಹಮ್ಮದ್ ಬಶೀರ್ ಅವರನ್ನು ಭೇಟಿಯಾಗಬಹುದೆಂದು ತಿಳಿದಿರಲಿಲ್ಲ. ಪಾಕಿಸ್ತಾನದ 'ಡಾನ್' ಸುದ್ದಿವಾಹಿನಿಯು ಅವರ ಪುನರ್ಮಿಲನವನ್ನು ವರದಿ ಮಾಡಿದೆ ಮತ್ತು ಇಬ್ಬರೂ ತಮ್ಮ ಬಾಲ್ಯದ ಕಥೆಗಳನ್ನು ವಿವರಿಸಿದ್ದಾರೆ ಎಂದು ಹೇಳಿದೆ.

ವಿಭಜನೆ ಮತ್ತು ಪಾಕಿಸ್ತಾನದ ರಚನೆಯ ಮೊದಲು, ಸಿಂಗ್ ಮತ್ತು ಬಶೀರ್ ಇಬ್ಬರೂ ತಮ್ಮ ಯೌವನದಲ್ಲಿದ್ದಾಗ ಬಾಬಾ ಗುರುನಾನಕ್ ಅವರ ಗುರುದ್ವಾರಕ್ಕೆ ಭೇಟಿ ನೀಡುತ್ತಿದ್ದರು ಮತ್ತು ಒಟ್ಟಿಗೆ ಊಟ ಮತ್ತು ಚಹಾ ಸೇವಿಸುತ್ತಿದ್ದರು ಎಂದು ವರದಿ ಹೇಳುತ್ತದೆ.

ಇದನ್ನೂ ಓದಿ: ಕಾರ್ಯಾಚರಣೆಯಲ್ಲಿ ಹುತಾತ್ಮರಾಗುವ ಅರೆಸೇನಾ ಯೋಧರ ಕುಟುಂಬದವರಿಗೆ ಪರಿಹಾರ ಹಣ 35 ಲಕ್ಷಕ್ಕೆ ಏರಿಕೆ

ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಸಹ ವೈರಲ್‌ ಆಗಿದೆ. ಈ ಇಬ್ಬರು ಹಳೆಯ ಸ್ನೇಹಿತರ ಪುನರ್ಮಿಲನದ ಬಗ್ಗೆ ನೆಟ್ಟಿಗರು ಸಂತೋಷಪಟ್ಟಿದ್ದಾರೆ. ಇದು ಯಾವುದೋ ಚಲನಚಿತ್ರದ ಕಥೆಯಂತೆ ಎನಿಸುತ್ತದೆ ಎಂದೂ ಹಲವರು ವಿಸ್ಮಯ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್​ನಲ್ಲಿ ಭಾರೀ ಸ್ಪಂದನೆ:

ಈ ಇಬ್ಬರು ಸ್ನೇಹಿತರ ಅಪೂರ್ವ ಸಂಗಮದ ಕಥೆಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಒಬ್ಬ ಬಳಕೆದಾರರು, “ಒಂದು ಕ್ಷಣ ಧರ್ಮ ಮತ್ತು ತೀರ್ಥಯಾತ್ರೆಯನ್ನು ಬದಿಗಿಟ್ಟು ನೋಡಿದಾಗ... ಇದು ಕರ್ತಾರ್‌ಪುರ ಸಾಹಿಬ್‌ನಿಂದ ಹೃದಯ ಬೆಚ್ಚಗಾಗಿಸುವ ಕಥೆ ಆಗಿದೆ. 90 ವರ್ಷ ದಾಟಿದ ಇಬ್ಬರು ವೃದ್ಧ ಸ್ನೇಹಿತರನ್ನು ಕರ್ತಾರ್​ಪುರ್ ಕಾರಿಡಾರ್ ಮತ್ತೆ ಒಂದುಗೂಡಿಸಿದೆ…. ಭಾರತದ ಸರ್ದಾರ್ ಗೋಪಾಲ್ ಸಿಂಗ್ (94) ಮತ್ತು ಪಾಕಿಸ್ತಾನದ ಮುಹಮ್ಮದ್ ಬಶೀರ್ (91) ಅವರು 1947ರಲ್ಲಿ ಬೇರ್ಪಟ್ಟರು" ಎಂದು ಬರೆದಿದ್ದಾರೆ.

ಮತ್ತೊಬ್ಬರು "ವಿಭಜನೆಯ ಪುನರ್ಮಿಲನಗಳ ಕೊನೆಯ ನಿದರ್ಶನಗಳಲ್ಲಿ ಇದೂ ಒಂದು ಇಂಥದ್ದಕ್ಕೆ ಸಾಕ್ಷಿಯಾಗಲು ನಾವು ಅದೃಷ್ಟವಂತರು. ಒಂದು ದಶಕದಲ್ಲಿ ಈ ಪೀಳಿಗೆಯು ಕಣ್ಮರೆಯಾಗುತ್ತದೆ ಎಂದು ತಿಳಿದರೆ ದುಃಖವಾಗುತ್ತದೆ. ವಿಭಜನೆಯಿಂದ ಅವರು ಯಾವ ನೋವು ಅನುಭವಿಸಿದರು ಎಂಬುದು ಅವರಿಗೆ ಮಾತ್ರ ತಿಳಿದಿದೆ" ಎಂದೂ ಮತ್ತೊಬ್ಬರು ಬರೆದಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿರುವ ನಾನಾ ಪ್ರತಿಕ್ರಿಯೆಗಳನ್ನು ನೀವು ಇಲ್ಲಿ ಕಾಣಬಹುದು..

ಸಿಖ್ ಪವಿತ್ರ ಗುರುವಾದ ಗುರು ನಾನಕ್ ದೇವ್ ಜಿ ಜನ್ಮದಿನವಾದ ಗುರುಪುರಬ್‌ಗೆ 2 ದಿನಗಳ ಮೊದಲು ಕರ್ತಾರ್​ಪುರ್ ಕಾರಿಡಾರ್ ಅನ್ನು ಮತ್ತೆ ತೆರೆಯಲಾಗಿದೆ. ಸಿಖ್ ನಿಯೋಗವೊಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಕಾರಿಡಾರ್ ಅನ್ನು ಪುನಃ ತೆರೆಯುವಂತೆ ಮನವಿ ಮಾಡಿದ ನಂತರ ಸರ್ಕಾರದ ಈ ಕ್ರಮ ಕೈಗೊಂಡಿದೆ.

ಕೋವಿಡ್ ಕಾರಣಕ್ಕೆ ಸ್ಥಗಿತಗೊಂಡಿದ್ದ ಕಾರಿಡಾರ್:

ಪಂಜಾಬ್‌ನ ಗುರುದಾಸ್‌ಪುರದ ಡೇರಾ ಬಾಬಾ ನಾನಕ್ ಸಾಹಿಬ್‌ನಿಂದ ಪಾಕಿಸ್ತಾನದ ದರ್ಬಾರ್ ಸಿಂಗ್ ಸಾಹಿಬ್ ಗುರುದ್ವಾರ ಸಂಪರ್ಕಿಸುವ ಸಿಖ್ ತೀರ್ಥಯಾತ್ರೆ ಕಾರಿಡಾರ್ ಅನ್ನು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ 2020ರಲ್ಲಿ ಮುಚ್ಚಲಾಗಿತ್ತು. ಇದು ಸಿಖ್ ಯಾತ್ರಾರ್ಥಿಗಳಿಗೆ ವೀಸಾ ಇಲ್ಲದೆ ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಭೇಟಿ ನೀಡಲು ಪ್ರವೇಶ ನೀಡುತ್ತದೆ.

ಇದನ್ನೂ ಓದಿ: Farm Laws: ಕೃಷಿ ಮಸೂದೆ ವಾಪಸ್ ಘೋಷಣೆ ಬಳಿಕ ಮೊದಲ ಬಾರಿ ಮೋದಿ ನ. 25ಕ್ಕೆ ಉತ್ತರಪ್ರದೇಶಕ್ಕೆ ಭೇಟಿ

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೆ ತೀರ್ಥಯಾತ್ರೆಯನ್ನು ಮಾರ್ಚ್ 2020ರಲ್ಲಿ ಸ್ಥಗಿತಗೊಳಿಸಲಾಯಿತು. ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೆ ತೀರ್ಥಯಾತ್ರೆ ಬುಧವಾರ ಪುನಾರಂಭವಾಗಿದೆ ಮತ್ತು ಇದು ಕಾರಿಡಾರ್ ಮೂಲಕ ಯಾತ್ರಾರ್ಥಿಗಳ ಪ್ರಯಾಣ ಸುಗಮಗೊಳಿಸಿದೆ ಎಂದು ಲ್ಯಾಂಡ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (LPAI) ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಭಾಷಾಂತರ ನೆರವು: ಏಜೆನ್ಸಿ
Published by:Vijayasarthy SN
First published: