Maharashtra: ಮಹಾರಾಷ್ಟ್ರದ ಥಾಣೆ (Thane) ಜಿಲ್ಲೆಯ ಮುಂಬ್ರಾದಲ್ಲಿ (Mumbra) ವಿದ್ಯುತ್ ಕಂಪನಿಯ (power company) ಉದ್ಯೋಗಿಗಳು ಎಂದು ಸುಳ್ಳು ಹೇಳಿಕೊಂಡು ನಟಿಸಿ 19 ಲಕ್ಷ ರೂಪಾಯಿಯನ್ನು ಜನರಿಗೆ ವಂಚಿಸಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸರ್ಕಾರಿ ವಿದ್ಯುತ್ ಕಂಪನಿಯು ತನ್ನ ಗ್ರಾಹಕರಿಂದ ದೂರುಗಳನ್ನು ಸ್ವೀಕರಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ, ಕೆಲವು ಅಪರಿಚಿತ ವ್ಯಕ್ತಿಗಳು, ಸಂಸ್ಥೆಯ ಉದ್ಯೋಗಿಗಳೆಂದು ಜನರಿಗೆ ನಂಬಿಸುತ್ತಿರುವುದಾಗಿಯೂ ಮತ್ತು ನಿಮ್ಮ ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡಲು ಒಂದಷ್ಟು ಹಣ ಖರ್ಚಾಗುತ್ತದೆ ಎಂದು ಗ್ರಾಹಕ ಬಳಿ ಹಣವನ್ನು ಸಂಗ್ರಹಿಸಲು ಮುಂದಾಗಿದ್ದರು ಹಾಗೂ ಹೀಗಾಗಲೇ ಸಾಕಷ್ಟು ಜನರಿಂದ ಹಣ ವಸೂಲಿ ಮಾಡಿ ಮೋಸ ಮಾಡಿದ್ದರು ಎಂದು ಸಹಾಯಕ ಪೊಲೀಸ್ ಆಯುಕ್ತ (ಕಲ್ವಾ) ವೆಂಕಟ್ ಅಂದಾಲೆ ಹೇಳಿದರು.
ಸಬೇಗಾಂವ್‌ನ ಡೈರಿ ಮಾಲೀಕರು ಈ ಆರೋಪಿಗಳಿಂದ ಮೋಸ ಹೋಗಿದ್ದು, ಆತ ರೂ. 68,000 ವಿದ್ಯುತ್ ಬಿಲ್ ಕಡಿಮೆ ಮಾಡಲು ಮುಂದಾಗಿದ್ದಾನೆ ಮತ್ತು ಆತನಿಂದ ಶೇ .50 ರಷ್ಟು ಮೊತ್ತವನ್ನು ಪಡೆದುಕೊಂಡಿದ್ದನು ಎಂದು ಅಧಿಕಾರಿ ತಿಳಿಸಿದ್ದಾರೆ.
ನಂತರ ಬಂದ ಬಿಲ್ನಲ್ಲಿ ಈ ಮೊದಲು ಮಾಡಿದ್ದ ಪಾವತಿ ಸರಿಹೊಂದದಿದ್ದಾಗ, ತಾನು ಬಲಿಪಶು ಆಗಿರುವುದು ಗೊತ್ತಾಗಿದೆ. ಆಗ ವಂಚನೆಗೆ ಒಳಗಾದ ಶಿಲ್ ದೈಘರ್ ಪೊಲೀಸರಿಗೆ ದೂರು ನೀಡಿದ್ದಾರೆ ಮತ್ತು ಐಪಿಸಿಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅಪರಾಧವನ್ನು ದಾಖಲಿಸಲಾಗಿದೆ. ಆನಂತರ ಕಾರ್ಯಪ್ರವೃತ್ತರಾದ ಪೊಲೀಸರು ಈ ನಕಲಿ ಅಧಿಕಾರಿಗಳನ್ನು ಬಲೆಗೆ ಬೀಳಿಸಿದ್ದಾರೆ ಹಾಗೂ ವಿಚಾರಣೆ ವೇಳೆ 19 ಲಕ್ಷ ರೂಪಾಯಿಗಳಷ್ಟು ಹಣವನ್ನು ದೋಖಾ ಎಸಗಿರುವ ಕೃತ್ಯ ಬೆಳಕಿಗೆ ಬಂದಿದೆ.
ರಫೀಕ್ ಅಹ್ಮದ್ ಶೇಖ್ (39) ಮತ್ತು ಅಬ್ದುಲ್ಲಾ ಬಿಲಾಲ್ ಶೇಖ್ (25) ಅವರನ್ನು ಪೊಲೀಸರು ಬಂಧಿಸಿರುವ ಆರೋಪಿಗಳು. ಈ ಆರೋಪಿಗಳು ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿವರಗಳನ್ನು ಸಂಗ್ರಹಿಸಿ ಅಂತಹ ಗ್ರಾಹಕರನ್ನು ಸಂಪರ್ಕಿಸಿ ಮೋಸ ಎಸಗುತ್ತಿದ್ದರು, ಅವರ ಬಿಲ್ ಮೊತ್ತವನ್ನು ಕಡಿಮೆ ಮಾಡಲು ಮತ್ತು ಅವರಿಂದ ಹಣ ಸಂಗ್ರಹಿಸಿ ಪರಾರಿಯಾಗಿದ್ದಾರೆ ಎಂದು ಅಧಿಕಾರಿ ಹೇಳಿದರು. ಇವರಿಬ್ಬರು ಸಂತ್ರಸ್ತರಿಗೆ ನಕಲಿ ಬಿಲ್‌ಗಳನ್ನು ಸಹ ನೀಡಿದ್ದಾರೆ ಎಂದು ಅವರು ಹೇಳಿದರು.
ಸುಮಾರು 25 ಗ್ರಾಹಕರು ಸುಮಾರು ರೂ .19,61,000 ಕಳೆದುಕೊಂಡಿದ್ದಾರೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ