ಸಿಎಎ ಮತ್ತು ಎನ್​​ಆರ್​ಸಿ ತಡೆಯುವುದು ಹೇಗೆ?; ಎರಡು ದಾರಿಗಳು ಬಿಚ್ಚಿಟ್ಟ ಪ್ರಶಾಂತ್​​ ಕಿಶೋರ್​​

ಮೊದಲಿಗೆ ಪೌರತ್ವ ಕಾಯ್ದೆಗೆ ಜೆಡಿಯು ಬೆಂಬಲ ನೀಡಿತ್ತು. ಬಳಿಕ ಪ್ರಶಾಂತ್​ ಕಿಶೋರ್​ ತಮ್ಮ ಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದರು. ಈ ಬೆನ್ನಲ್ಲೇ ಎಚ್ಚೆತ್ತ ಸಿಎಂ ನಿತೀಶ್​ ಕುಮಾರ್​​ ಪೌರತ್ವ ಕಾಯ್ದೆಗೆ ನಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಪ್ರಶಾಂತ್​ ಕಿಶೋರ್​

ಪ್ರಶಾಂತ್​ ಕಿಶೋರ್​

 • Share this:
  ಬೆಂಗಳೂರು(ಡಿ.22): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟ ಮುಂದುವರೆದಿದೆ. ಭಾರತದ ರಾಜಧಾನಿ ದೆಹಲಿ ಮತ್ತು ಈಶಾನ್ಯ ರಾಜ್ಯಗಳು ಸೇರಿದಂತೆ ಕರ್ನಾಟಕದಲ್ಲೂ ಎನ್​​ಆರ್​​ಸಿ ವಿರುದ್ಧ ಹೋರಾಟದ ಕಿಚ್ಚು ಹಬ್ಬಿದೆ. ಇನ್ನೂ ಒಂದಷ್ಟು ದಿನಗಳ ಕಾಲ ದೇಶಾದ್ಯಂತ 144 ಸೆಕ್ಷನ್​​​ ನಿಷೇದಾಜ್ಞೆ ಮುಂದುವರೆಯುವ ಸಾಧ್ಯತೆಯಿದೆ. ಈಗಾಗಲೇ ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿಯಾಗಿ ಅಲ್ಪಸಂಖ್ಯಾತ ಮತ್ತು ಪ್ರಗತಿಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸುತ್ತಿವೆ. ಹಲವೆಡೆ ಪ್ರತಿಭಟನಾ ಹಿಂಸಾಚರಾಕ್ಕೆ 15ಕ್ಕೂ ಹೆಚ್ಚು ಅಮಾಯಕರು ಸಾವನ್ನಪ್ಪಿದ್ದಾರೆ. ಇದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ದೇಶದ ಬಹುತೇಕ ರಾಜ್ಯಗಳಲ್ಲಿ ಇಂಟರ್​ನೆಟ್​​ ಸ್ಥಗಿತಗೊಳಿಸಿ ಕೇಂದ್ರ ಗೃಹ ಇಲಾಖೆ ಆದೇಶಿಸಿದೆ. ಈ ಮಧ್ಯೆ ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ಕಾಯ್ದೆ ಹೇಗೆ ತಡೆಯುವುದು ಎಂದು  ಭಾರತೀಯ ರಾಜಕೀಯ ಕಾರ್ಯ ಸಮಿತಿ (ಐಪಿಸಿ) ತಂಡದ ಮುಖ್ಯಸ್ಥ ಪ್ರಶಾಂತ್​​ ಕಿಶೋರ್ ಟ್ವೀಟ್​​ ಮಾಡಿದ್ದಾರೆ.

  ಇಂದು ಬೆಳಗ್ಗೆ ಈ ಸಂಬಂಧ ಟ್ವೀಟ್​​ ಮಾಡಿರುವ ಖ್ಯಾತ ರಾಜಕೀಯ ತಜ್ಞ ಪ್ರಶಾಂತ್​ ಕಿಶೋರ್​​, ಸಿಎಎ ಮತ್ತು ಎನ್​​ಆರ್​ಸಿ ತಡೆಯಲು ಎರಡು ದಾರಿಗಳಿವೆ. ಮೊದಲನೆಯದು ಶಾಂತಿಯುತವಾಗಿ ಪೌರತ್ವ ಕಾಯ್ದೆ ವಿರುದ್ಧ ಹೋರಾಟ ಮುಂದುವರೆಸುವುದು. ಎರಡನೇಯದು ಕನಿಷ್ಠ 16 ರಾಜ್ಯಗಳ ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ನಾವು ಪೌರತ್ವ ಕಾಯ್ದೆ ಅನುಷ್ಠಾನಗೊಳಿಸುವುದಿಲ್ಲ ಎಂದು ತೀರ್ಮಾನ ತೆಗೆದುಕೊಳ್ಳುವುದು. ಹೀಗೆ ಒಟ್ಟಾಗಿ ಕೇಂದ್ರ ಸರ್ಕಾರದ ವಿರುದ್ಧ ಒಂದು ನಿಲುವು ತಾಳಿದರೆ ನಾವು ಪೌರತ್ವ ಕಾಯ್ದೆ ಅನುಷ್ಠಾನ ತಡೆಯಬಹುದು ಎಂದು ಟ್ವೀಟ್​​ನಲ್ಲಿ ಉಲ್ಲೇಖ ಮಾಡಿದ್ದಾರೆ.  ಪ್ರಶಾಂತ್​​ ಕಿಶೋರ್​​ ಭಾರತೀಯ ರಾಜಕೀಯ ಕಾರ್ಯ ಸಮಿತಿ (ಐಪಿಸಿ) ತಂಡದ ಮುಖ್ಯಸ್ಥರು ಹಾಗೂ ಜೆಡಿಯು ಪಕ್ಷದ ಮುಖಂಡರಾಗಿದ್ದಾರೆ. ಮೊದಲಿಗೆ ಪೌರತ್ವ ಕಾಯ್ದೆಗೆ ಜೆಡಿಯು ಬೆಂಬಲ ನೀಡಿತ್ತು. ಬಳಿಕ ಪ್ರಶಾಂತ್​ ಕಿಶೋರ್​ ತಮ್ಮ ಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದರು. ಈ ಬೆನ್ನಲ್ಲೇ ಎಚ್ಚೆತ್ತ ಸಿಎಂ ನಿತೀಶ್​ ಕುಮಾರ್​​ ಪೌರತ್ವ ಕಾಯ್ದೆಗೆ ನಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.

  ಇದನ್ನೂ ಓದಿ: ಪೌರತ್ವ ಕಾಯ್ದೆಯಿಂದ ಮುಸ್ಲಿಮರಿಗೆ ಹೇಗೆ ತೊಂದರೆಯಾಗಲು ಸಾಧ್ಯ?: ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ಸಿಎಂ ಪ್ರಶ್ನೆ

  ಬಿಜೆಪಿಯೇತರ ಬಹುತೇಕ ರಾಜ್ಯದ ಮುಖ್ಯಮಂತ್ರಿಗಳು ಇವರ ಮಾತಿಗೆ ದ್ವನಿಗೂಡಿಸಿದ್ದಾರೆ. ಇದಲ್ಲದೆ ಪಶ್ಚಿಮ ಬಂಗಾಳ, ದೆಹಲಿ, ಉತ್ತರಪ್ರದೇಶ ಹಾಗೂ ಕರ್ನಾಟಕದಲ್ಲಿ ದಿನೇ ದಿನೇ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದು ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಎನ್​ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾದ ಜೆಡಿಯು ಮುಖ್ಯಸ್ಥ ಹಾಗೂ ಬಿಹಾರದ ಸಿಎಂ ನಿತೀಶ್ ಕುಮಾರ್​ ಸಹ ಭಿನ್ನರಾಗ ತೆಗೆದಿರುವುದು ಬಿಜೆಪಿ ಮೈತ್ರಿಕೂಟದಲ್ಲಿ ಒಡಕು ಮೂಡಿದೆಯೇ? ಎಂಬ ಪ್ರಶ್ನೆಗೆ ಕಾರಣವಾಗಿದೆ.
  Published by:Ganesh Nachikethu
  First published: