ಪ್ರೀತಿ, ನಂಬಿಕೆ ಮತ್ತು ತ್ಯಾಗದ ಗುಣಗಳು ನಾಯಿಗಳಲ್ಲಿ ರಕ್ತಗತವಾಗಿದೆ. ಬಹುಶ: ಯಾರೂ ಕೂಡ ಈ ಮಾತನ್ನು ಅಲ್ಲಗಳೆಯಲು ಹೋಗುವುದಿಲ್ಲ. ಮನುಷ್ಯನಿಗೆ ಅತ್ಯಂತ ಆಪ್ತ ಪ್ರಾಣಿ ಎನಿಸಿಕೊಂಡಿರುವ ಶ್ವಾನಗಳ ಒಳ್ಳೆಯ ಗುಣಗಳ ಬಗ್ಗೆ ಹಲವಾರು ಮಾತುಗಳು ವಿಶ್ವದೆಲ್ಲೆಡೆ ಚಾಲ್ತಿಯಲ್ಲಿವೆ. ಅದು ಅತಿಶಯೋಕ್ತಿಯೂ ಅಲ್ಲ. ಏಕೆಂದರೆ ನಾಯಿಗಳು ಒಡೆಯನಿಗಾಗಿ ಪ್ರಾಣ ಬಿಡಬಲ್ಲವು ಹಾಗೂ ಪ್ರಾಣ ತೆಗೆಯಲೂ ಬಲ್ಲವು. ಅಂತದ್ದೇ ಘಟನೆಯೊಂದು ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಇತ್ತೀಚೆಗೆ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಾಲೀಕನ ಮನೆಯೊಳಗೆ ಪ್ರವೇಶಿಸಲಿದ್ದ ವಿಷಕಾರಿ ಹಾವು ತಡೆದು, ಎಷ್ಟು ಬಾರಿ ಅದರಿಂದ ಕಚ್ಚಿಸಿಕೊಂಡರೂ, ಸುಮಾರು 2 ಗಂಟೆ ಅದರೊಡನೆ ಕಾದಾಡಿ, ಅದರ ಪ್ರಾಣ ತೆಗೆಯುವವರೆಗೆ ಪ್ರಾಣ ಹಿಡಿದಿಟ್ಟುಕೊಂಡು, ಅದನ್ನು ಸಾಯಿಸಿಯೇ ಪ್ರಾಣ ಬಿಟ್ಟ ನಾಯಿಗಳ ಕಥೆಯಿದು.
ಈ ಘಟನೆ ಭಾನುವಾರ ಜೈರಾಮ್ಪುರ್ ಎಂಬ ಗ್ರಾಮದಲ್ಲಿ ನಡೆದಿದ್ದು, ಹಾವು ಮತ್ತು ನಾಯಿಗಳ ಕಾದಾಟಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಕಾವಲುಗಾರ ಗುಡ್ಡು ಎಂಬುವರು ಹೇಳಿರುವ ಪ್ರಕಾರ, ಕಪ್ಪು ಬಣ್ಣದ ವಿಷಕಾರಿ ಹಾವೊಂದು ಮುಖ್ಯ ದ್ವಾರದ ಒಳಗೆ ಪ್ರವೇಶಿಸಲು ಯತ್ನಿಸುತ್ತಿದ್ದದ್ದನ್ನು ಕಂಡು, ನಾಯಿಗಳಾದ ಶೇರೂ ಮತ್ತು ಕೋಕೋ ಜೋರಾಗಿ ಬೊಗಳತೊಡಗಿದವು.
ಎರಡೂ ನಾಯಿಗಳು ಬೊಗಳುವುದನ್ನು ಮುಂದುವರೆಸಿದರೂ, ಹಾವು ಹೆದರದೆ ಮುಂದಕ್ಕೆ ಚಲಿಸುವುದನ್ನು ನಿಲ್ಲಿಸದಿದ್ದಾಗ ಶೇರೂ ಮತ್ತು ಕೋಕೋ ಅದರ ಮೇಲೆ ಆಕ್ರಮಣ ಮಾಡಿದವು.
ಇದನ್ನೂ ಓದಿ: Sonali Bendre: ಮಗನ 16ನೇ ಹುಟ್ಟುಹಬ್ಬಕ್ಕೆ ಅಪರೂಪದ ಫೋಟೋ ಶೇರ್ ಮಾಡುವ ಮೂಲಕ ವಿಶ್ ಮಾಡಿದ ಸೋನಾಲಿ ಬೇಂದ್ರೆ..!
“ನಾಯಿಗಳು ಮತ್ತು ಹಾವಿನ ನಡುವಿನ ಕಾದಾಟ ಸುಮಾರು 2 ಗಂಟೆಗಳ ಕಾಲ ನಡೆಯಿತು. ಅಂತಿಮವಾಗಿ ನಾಯಿಗಳು ಹಾವನ್ನು 2 ತುಂಡು ಮಾಡುವುದರಲ್ಲಿ ಯಶಸ್ವಿಯಾದವು. ಕಾದಾಟದ ಸಮಯದಲ್ಲಿ ಶ್ವಾನಗಳು ಕೂಡ ಹಲವು ಬಾರಿ ಹಾವಿನಿಂದ ಕಚ್ಚಿಸಿಕೊಂಡಿದ್ದವು. ಕೆಲವು ನಿಮಿಷಗಳ ನಂತರ ಎರಡೂ ನಾಯಿಗಳು ಸಾವನ್ನಪ್ಪಿದವು” ಎಂದು ಕಾವಲುಗಾರ ಗುಡ್ಡು ತಿಳಿಸಿದ್ದಾರೆ.
ಇದನ್ನೂ ಓದಿ: BBK8 Winner Manju Pavagada: ಟ್ರೋಫಿ ಗೆದ್ದ ನಂತರ ಶಿವಣ್ಣನನ್ನು ಭೇಟಿ ಮಾಡಿದ ಮಂಜು ಪಾವಗಡ
ಈ ಕಾದಾಟದ ಸುದ್ದಿ ಕೇಳುತ್ತಲೇ, ಸ್ಥಳೀಯರು ಹಾಗೂ ನಾಯಿಗಳ ಮಾಲೀಕರು ಸ್ಥಳಕ್ಕೆ ಬಂದರು. ಅವರು ಹಾವಿನಿಂದ ನಾಯಿಗಳನ್ನು ದೂರ ಎಳೆಯಲು ಪ್ರಯತ್ನಿಸಿದರೂ ಕೂಡ ಅವು ಹಾವಿನ ಮೇಲೆ ಆಕ್ರಮಣ ಮಾಡುವುದನ್ನು ನಿಲ್ಲಿಸಲಿಲ್ಲ.
ಶೇರೂ ಮತ್ತು ಕೋಕೋ, ಡಾ. ರಾಜನ್ ಎಂಬವರಿಗೆ ಸೇರಿದ ನಾಯಿಗಳು. ಅವರ ಕುಟುಂಬದವರ ಪಾಲಿಗೆ ಅವು ಅಚ್ಚುಮೆಚ್ಚಿನ ಸಂಗಾತಿಗಳಾಗಿದ್ದವು. “ಶೇರೂ ಮತ್ತು ಕೋಕೋ ಸಾವಿನ ಸಂಗತಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಅವರು ನಮ್ಮನ್ನು ರಕ್ಷಿಸಲು ತಮ್ಮ ಪ್ರಾಣ ನೀಡಿದರು ಮತ್ತು ನಾವು ಅವರ ತ್ಯಾಗವನ್ನು ಯಾವತ್ತೂ ಮರೆಯುವುದಿಲ್ಲ” ಎಂದು ಡಾ. ರಾಜನ್ ವರದಿಗಾರರಿಗೆ ಹೇಳಿದ್ದಾರೆ.
ಇದನ್ನೂ ಓದಿ: Happy Birthday Malashree Ramu: ಮಾಲಾಶ್ರೀ ಹುಟ್ಟುಹಬ್ಬಕ್ಕೆ ಮರೆಯಲಾರದ ಉಡುಗೊರೆ ಕೊಟ್ಟ ಮಕ್ಕಳು
ರಾಜನ್ ಮತ್ತು ಕುಟುಂಬದವರು ಸೋಮವಾರ ಶೇರು ಮತ್ತು ಕೋಕೋವಿನ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಇನ್ನು ಸಾಕು ನಾಯಿಗಳು ಮಾಲೀಕನ ಮೇಲಿನ ನಿಯತ್ತಿನಿಂದಾಗಿ ಅವರನ್ನು ರಕ್ಷಿಸಲು ಹೋಗಿ ತಮ್ಮ ಪ್ರಾಣ ತ್ಯಾಗ ಮಾಡಿರುವ ಘಟನೆಗಳನ್ನು ಆಗಾಗ ಕೇಳುತ್ತಿರುತ್ತೇವೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯ ಇನ್ನೂ ಸಂಪೂರ್ಣವಾಗಿ ತಪ್ಪಿಲ್ಲ. ಹೀಗಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಆದ್ದರಿಂದಲೇ ಪ್ರತಿಯೊಬ್ಬರು ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಬೇಕಾಗಿದೆ. ನಿತ್ಯ ಹೊರಗೆ ಹೋದರೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಮನೆಗೆ ಬಂದ ಕೂಡಲೆ ಕೈ ತೊಳೆಯುವುದನ್ನು ಮರೆಯಬೇಡಿ. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ