Levana Hotel Lucknow: ಲಕ್ನೋದ ಹೋಟೆಲ್ ಲೆವಾನಾದಲ್ಲಿ ಅಗ್ನಿ ಅವಘಡ, ಹೊರ ಬರಲಾಗದೆ ಅತಿಥಿಗಳ ಪರದಾಟ!

ಲಕ್ನೋದ ಹಜರತ್‌ಗಂಜ್‌ನಲ್ಲಿರುವ ಹೋಟೆಲ್ ಲೆವಾನಾದಲ್ಲಿ ಸೋಮವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಂಡಾಗ ಹೊಟೇಲ್‌ನಲ್ಲಿ ಅನೇಕ ಅತಿಥಿಗಳು ಇದ್ದರು. ಅವರನ್ನು ಹೊರ ಕರೆತರಲಾಗುತ್ತಿದೆ. ಅಗ್ನಿಶಾಮಕ ದಳ ಮತ್ತು ಆಡಳಿತದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರ ನೆರವಿನಿಂದ ಜನರನ್ನು ಹೋಟೆಲ್‌ನಿಂದ ಹೊರ ತೆಗೆಯಲಾಗುತ್ತಿದೆ.

ಲಕ್ನೋದ ಹೋಟೆಲ್ ಲೆವಾನಾದಲ್ಲಿ ಅಗ್ನಿ ಅವಘಡ

ಲಕ್ನೋದ ಹೋಟೆಲ್ ಲೆವಾನಾದಲ್ಲಿ ಅಗ್ನಿ ಅವಘಡ

  • Share this:
ಲಕ್ನೋ(ಸೆ.05): ರಾಜಧಾನಿ ಲಕ್ನೋದ (Lucknow) ಹೋಟೆಲ್ ಲೆವಾನಾದಲ್ಲಿ ಸೋಮವಾರ ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ಅಪಘಾತದಲ್ಲಿ (Fire Tragedy) ಓರ್ವ ಮಹಿಳೆ ಹಾಗೂ ಓರ್ವ ಪುರುಷ ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ, 9 ಗಾಯಾಳುಗಳಿಗೆ ಸಿವಿಲ್ ಆಸ್ಪತ್ರೆಯ ಸುಟ್ಟಗಾಯ ಘಟಕದಲ್ಲಿ ಚಿಕಿತ್ಸೆ ನಡೆಯುತ್ತಿದೆ. ಹೊಟೇಲ್‌ನಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹೊಟೇಲ್‌ಗೆ ಬೆಂಕಿ ತಗುಲಿದ ಪರಿಣಾಮ ಭಾರೀ ಕೋಲಾಹಲ ಸೃಷ್ಟಿಯಾಗಿದೆ. ಸ್ಥಳಕ್ಕೆ ಹಲವು ಅಗ್ನಿಶಾಮಕ ದಳಗಳು ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಈ ಹೋಟೆಲ್ ಹಜರತ್‌ಗಂಜ್ ನಗರದ ವಿಐಪಿ ಪ್ರದೇಶದಲ್ಲಿದೆ. ಇನ್ನೂ 20ಕ್ಕೂ ಹೆಚ್ಚು ಮಂದಿ ಹೊಟೇಲ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೊಟೇಲ್‌ನ ಹೊರಗಿನ ಪ್ರತ್ಯಕ್ಷದರ್ಶಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಅಗ್ನಿಶಾಮಕ ದಳದ 15-20 ವಾಹನಗಳು ಸ್ಥಳದಲ್ಲೇ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. 

ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ, ಆದರೆ ಹೋಟೆಲ್ ಒಳಗೆ ಹೊಗೆ ಆವರಿಸಿದೆ. ಕೊಠಡಿಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಅಗ್ನಿಶಾಮಕ ದಳದ ತಂಡ ಹರಸಾಹಸ ಪಡುತ್ತಿದೆ. ರಕ್ಷಣಾ ಕಾರ್ಯಕ್ಕಾಗಿ ಹೋಟೆಲ್​ ಕಿಟಕಿಗಳನ್ನೂ ಒಡೆಯಲಾಗಿದೆ. ಕೆಲವರು ಗಾಯಗೊಂಡಿರುವ ವರದಿಗಳೂ ಇವೆ, ಆದರೆ ಇದು ಇನ್ನೂ ದೃಢಪಟ್ಟಿಲ್ಲ. ಅಗ್ನಿಶಾಮಕ ದಳದ ಅರ್ಧ ಡಜನ್‌ಗೂ ಹೆಚ್ಚು ವಾಹನಗಳು ಸ್ಥಳದಲ್ಲಿವೆ. ಇನ್ನು ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪ್ರಾಥಮಿಕವಾಗಿ ಹೇಳಲಾಗುತ್ತಿದೆ. ಈ ವಿಚಾರದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ದೇವರಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್​​ನಲ್ಲಿ ಬೆಂಕಿ ಅನಾಹುತ; ಇಬ್ಬರ ಸಾವು

ಇದಲ್ಲದೆ, ಲಕ್ನೋ ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಗಳು ಕೂಡ ಸ್ಥಳಕ್ಕೆ ತಲುಪಿದ್ದಾರೆ. ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಬೆಂಕಿ ಬಹಳಷ್ಟು ವ್ಯಾಪಿಸಿಕೊಂಡಿದೆ ಮತ್ತು ಕೊಠಡಿಗಳು ಹೊಗೆಯಿಂದ ಆವರಿಸಿಕೊಂಡಿವೆ. ಜನರು ಉಸಿರುಗಟ್ಟಿ ನರಳಾಡಲಾರಂಭಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೊಠಡಿಯಿಂದ ಜನರನ್ನು ಹೊರತರುವುದೇ ದೊಡ್ಡ ಸಮಸ್ಯೆಯಾಗಿದೆ.ಬೆಂಕಿಯಿಂದಾಗಿ ಹೋಟೆಲ್‌ನ ಎಲ್ಲಾ ಕೊಠಡಿಗಳಲ್ಲಿ ಹೊಗೆ ಆವರಿಸಿದೆ. ಇದರಿಂದಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹೋಟೆಲ್‌ನ ಗಾಜುಗಳನ್ನು ಒಡೆದು ಜನರನ್ನು ಸ್ಥಳಾಂತರಿಸುತ್ತಿದ್ದಾರೆ. ಬೆಳಗ್ಗೆ 9 ಗಂಟೆಯವರೆಗೆ ಸುಮಾರು ಎರಡು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಈವರೆಗೆ ಹಲವರನ್ನು ಹೊರತೆಗೆದಿದ್ದು, ಒಳಗೆ ಸಿಲುಕಿರುವವರನ್ನು ಹೊರತರುವ ಪ್ರಯತ್ನ ನಡೆಯುತ್ತಿದೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ. ಉಸಿರುಗಟ್ಟಿದ ಪರಿಣಾಮ ಕೆಲವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಜನರನ್ನು ಹೊರತರಲು ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ: ಅಗ್ನಿ ಅವಘಡದಿಂದ ಅಪಾರ್ಟ್​​ಮೆಂಟ್​​ ನಿವಾಸಿಗಳನ್ನು ರಕ್ಷಿಸಿದ ‘ಅಪ್ಪು’.. ಇದಪ್ಪಾ ನಿಯತ್ತು

ಸೂಕ್ತ ಚಿಕಿತ್ಸೆ ಒದಗಿಸಲು ಯೋಗಿ ಆದೇಶ

ಮತ್ತೊಂದೆಡೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಕ್ನೋ ಜಿಲ್ಲೆಯ ಲೆವಾನಾ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಹಿನ್ನೆಲೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಇದರೊಂದಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ಚುರುಕುಗೊಳಿಸುವಂತೆ ಸೂಚನೆ ನೀಡಲಾಗಿದೆ.
Published by:Precilla Olivia Dias
First published: