News18 India World Cup 2019

ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ ದೋಣಿ; ಇಬ್ಬರ ಸಾವು, 26 ಜನ ಕಣ್ಮರೆ

news18
Updated:September 5, 2018, 7:32 PM IST
ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ ದೋಣಿ; ಇಬ್ಬರ ಸಾವು, 26 ಜನ ಕಣ್ಮರೆ
news18
Updated: September 5, 2018, 7:32 PM IST
ನ್ಯೂಸ್​ 18 ಕನ್ನಡ

ಅಸ್ಸಾಂ (ಸೆ.5) : ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿಯೊಂದು ಮಗುಚಿ ಇಬ್ಬರು ಸಾವನ್ನಪ್ಪಿ, 26 ಜನ ಕಣ್ಮರೆಯಾಗಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ.

ಬ್ರಹ್ಮಪುತ್ರ ನದಿಯಲ್ಲಿ ಈ ಅವಘಡ ಸಂಭವಿಸಿದ್ದು,  ದಡದಿಂದ 200 ಮೀಟರ್​ ದೂರದಲ್ಲಿ ದೋಣಿ ಸಾಗುತ್ತಿರುವಾಗ ಈ ಅನಾಹುತ ನಡೆದಿದೆ.

ವಿದ್ಯಾರ್ಥಿಗಳನ್ನು ದಡದಿಂದ ಕರೆದೊಯ್ಯುತ್ತಿದ್ದ ಬೋಟ್​ ನಿರ್ಮಾಣ ಹಂತದ ಸೇತುವೆಯ ಪಿಲ್ಲರ್​ಗೆ ಡಿಕ್ಕಿ ಹೊಡೆದಿದೆ. ಇದರಿಂದ ಇಂಜಿನ್​ ಸ್ಥಗಿತಗೊಂಡು ಬೋಟ್​ ಎರಡು ತುಂಡಾಗಿ ನದಿಯೊಳಗೆ ಮುಳುಗಿದೆ ಎಂದು ಮೂಲಗಳು ತಿಳಿಸಿದೆ. ಮುಳುಗಿದ ಕೆಲವರು ಈಜಿ ದಡ ಸೇರಿದ್ದು, ರಾಜ್ಯ ವಿಪತ್ತು ನಿರ್ವಹಣಾ ತಂಡ ಉಳಿದವರ ರಕ್ಷಣಾ ಕಾರ್ಯಕ್ಕೆ ಮುಂದಾಗಿದೆ. ಈ ವೇಳೆ ಇಬ್ಬರ ಮೃತ ದೇಹವನ್ನು ನೀರಿನಿಂದ ಹೊರ ತೆಗೆಯಲಾಗಿದೆ ಎಂದು ಕಮ್ರೂಪ್​ ಡಿಸಿ ಕಮಲ್​ ಬೈಶ್ಯಾ ತಿಳಿಸಿದ್ದಾರೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...