IT Raid: ಡಿಎಂಕೆ ನಾಯಕಿ ಕನಿಮೋಳಿಗೂ ಐಟಿ ಶಾಕ್; ತೂತುಕುಡಿಯ ಮನೆ ಎದುರು ಮೋದಿಗೆ ಧಿಕ್ಕಾರ ಕೂಗುತ್ತಿರುವ ಬೆಂಬಲಿಗರು

IT Raids in Thoothukudi: ತಮಿಳಸೈ ಸೌಂದರರಾಜನ್ ತಮ್ಮ ಮನೆಯಲ್ಲಿ ನೂರಾರು ಕೋಟಿ ರೂ. ಇಟ್ಟುಕೊಂಡಿದ್ದಾರೆ. ಆದರೆ, ಅವರ ಮನೆ ಮೇಲೆ ಯಾವುದೇ ಐಟಿ ದಾಳಿಯಾಗಿಲ್ಲವೇಕೆ? ಎಂದು ಎಂ.ಕೆ. ಸ್ಟಾಲಿನ್ ಪ್ರಶ್ನಿಸಿದ್ದಾರೆ.

Sushma Chakre | news18
Updated:April 16, 2019, 10:34 PM IST
IT Raid: ಡಿಎಂಕೆ ನಾಯಕಿ ಕನಿಮೋಳಿಗೂ ಐಟಿ ಶಾಕ್; ತೂತುಕುಡಿಯ ಮನೆ ಎದುರು ಮೋದಿಗೆ ಧಿಕ್ಕಾರ ಕೂಗುತ್ತಿರುವ ಬೆಂಬಲಿಗರು
ಕನಿಮೋಳಿ
Sushma Chakre | news18
Updated: April 16, 2019, 10:34 PM IST
ಚೆನ್ನೈ (ಏ. 16): ತೂತುಕುಡಿ ಲೋಕಸಭಾ ಕ್ಷೇತ್ರದ ಡಿಎಂಕೆ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ ದಿ. ಕರುಣಾನಿಧಿ ಅವರ ಮಗಳು ಕನಿಮೋಳಿ ಮನೆ ಮೇಲೆ ಇಂದು ಸಂಜೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕರ್ನಾಟಕದ ಜೆಡಿಎಸ್​ ಸಚಿವರು ಮತ್ತು ಆಪ್ತರ ಮನೆ ಮೇಲೆ ಒಂದು ತಿಂಗಳಿಂದ ಹಲವು ಬಾರಿ ಐಟಿ ದಾಳಿ ನಡೆದಿತ್ತು. ಈ ದಾಳಿ ರಾಜಕೀಯಪ್ರೇರಿತವಾದುದು ಎಂದು ರಾಜ್ಯದ ಮೈತ್ರಿ ಸರ್ಕಾರದ ನಾಯಕರು ಬಿಜೆಪಿ ವಿರುದ್ಧ ಆರೋಪ ಹೊರಿಸಿದ್ದರು. ಇತ್ತೀಚೆಗೆ ತಮಿಳುನಾಡಿನ ವೆಲ್ಲೂರಿನಲ್ಲಿ ಡಿಎಂಕೆ ನಾಯಕ ದೊರೈ ಮುರುಗನ್ ಮನೆ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳಿಗೆ 11.53 ಕೋಟಿ ರೂ. ಹಣ ದೊರೆತಿತ್ತು. ಈ ಹಿನ್ನೆಲೆಯಲ್ಲಿ ವೆಲ್ಲೂರಿನಲ್ಲಿ ಡಿಎಂಕೆ ಮತದಾರರಿಗೆ ಹಣ ಮತ್ತು ಮದ್ಯವನ್ನು ಹರಿಸುತ್ತಿದೆ ಎಂದು ಆರೋಪಿಸಿ ಆ ಕ್ಷೇತ್ರದ ಚುನಾವಣೆಗೆ ತಡೆ ನೀಡುವಂತೆ ರಾಷ್ಟ್ರಪತಿ ಕೋವಿಂದ್ ಅವರಿಗೆ ಚುನಾವಣಾ ಆಯೋಗ ಮನವಿ ಮಾಡಿತ್ತು. ಅದರಂತೆ ಇದೀಗ ವೆಲ್ಲೂರಿನಲ್ಲಿ ಚುನಾವಣೆಯನ್ನು ರದ್ದುಗೊಳಿಸಲಾಗಿದೆ.

ಮುಂದುವರೆದ ಐಟಿ ದಾಳಿ; ದೇವೇಗೌಡರ ಕುಟುಂಬಕ್ಕೆ ಮತ್ತೆ ಶಾಕ್

ಅದರ ಬೆನ್ನಲ್ಲೇ ಇನ್ನೇನು ಚುನಾವಣೆಗೆ ಕೇವಲ 2 ದಿನಗಳಿವೆ ಎನ್ನುವಾಗಲೇ ಡಿಎಂಕೆ ನಾಯಕಿ ಕನಿಮೋಳಿ ಮನೆ ಮೇಲೆ ಇಂದು ಸಂಜೆ ದಾಳಿ ನಡೆಸಲಾಗಿದೆ. ತೂತುಕುಡಿಯಲ್ಲಿರುವ ಕನಿಮೋಳಿ ನಿವಾಸದಲ್ಲಿ ಐಟಿ ದಾಳಿ ನಡೆಸಲಾಗಿದೆ.  10ಕ್ಕೂ ಅಧಿಕ ಆದಾಯ ತೆರಿಗೆ ಅಧಿಕಾರಿಗಳು ಕನಿಮೋಳಿ ಅವರ ಮನೆಗೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಸ್ತುತ ರಾಜ್ಯಸಭಾ ಸದಸ್ಯೆಯಾಗಿರುವ ಕನಿಮೋಳಿ ಈ ಬಾರಿ ತೂತುಕುಡಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಅವರ ಎದುರಾಳಿಯಾಗಿ ಬಿಜೆಪಿಯಿಂದ ತಮಿಳಸೈ ಸೌಂದರರಾಜನ್ ಸ್ಪರ್ಧೆಗಿಳಿದಿದ್ದಾರೆ. ಇನ್ನು, ಈ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕನಿಮೋಳಿ ಅವರ ಸಹೋದರ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ಪ್ರಧಾನಿ ನರೇಂದ್ರ ಮೋದಿ ಡಿಎಂಕೆ ಪಕ್ಷವನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಯುವಂತೆ ಮಾಡಿದ್ದಾರೆ. ಆದಾಯ ತೆರಿಗೆ ಇಲಾಖೆಯನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮತ್ತು ಚುನಾವಣಾ ಆಯೋಗದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಟಿ ದಾಳಿ ಮಾಡ್ತೀವಿ ಅಂತ ಬಂದು 2 ಅಕ್ಕಿ ಮೂಟೆ ಎತ್ತಿಕೊಂಡು ಹೋಗಿದ್ದಾರೆ; ಸಚಿವ ಎಚ್​.ಡಿ. ರೇವಣ್ಣ ಗಂಭೀರ ಆರೋಪ
Loading...

ತಮಿಳಸೈ ಸೌಂದರರಾಜನ್ ತಮ್ಮ ಮನೆಯಲ್ಲಿ ನೂರಾರು ಕೋಟಿ ರೂ. ಇಟ್ಟುಕೊಂಡಿದ್ದಾರೆ. ಆದರೆ, ಅವರ ಮನೆ ಮೇಲೆ ಯಾವುದೇ ಐಟಿ ದಾಳಿಯಾಗಿಲ್ಲವೇಕೆ? ಎಂದು ಎಂ.ಕೆ. ಸ್ಟಾಲಿನ್ ಪ್ರಶ್ನಿಸಿದ್ದಾರೆ. ಕರ್ನಾಟಕದ ಕಾಂಗ್ರೆಸ್​- ಜೆಡಿಎಸ್​ ನಾಯಕರು ಕೂಡ ಇದೇ ಪ್ರಶ್ನೆಯನ್ನು ಎತ್ತಿದ್ದರು. ರಾಜ್ಯದ ಬಿಜೆಪಿ ನಾಯಕರು ನೂರಾರು ಕೋಟಿ ರೂ. ಸಾಗಾಟ ನಡೆಸುತ್ತಿದ್ದರೂ, ಮನೆಯಲ್ಲಿ ಹಣವನ್ನು ಇಟ್ಟುಕೊಂಡಿದ್ದರೂ ಅವರಾರ ಮನೆ ಮೇಲೂ ಯಾಕೆ ಐಟಿ ದಾಳಿಯಾಗಿಲ್ಲ? ಎಂದು ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪ್ರಶ್ನೆ ಮಾಡಿದ್ದರು.

ಇನ್ನು, ಡಿಎಂಕೆ ನಾಯಕಿ ಕನಿಮೋಳಿ ಮನೆ ಮೇಲೆ ಐಟಿ ದಾಳಿ ನಡೆದಿರುವುದನ್ನು ಖಂಡಿಸಿ ಕನಿಮೋಳಿ ಮನೆ ಮುಂದೆ ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೋದಿಗೆ ಧಿಕ್ಕಾರ ಎಂಬ ಸ್ಲೋಗನ್ ಹಿಡಿದು ಪ್ರತಿಭಟನೆ ನಡೆಸಲಾಗುತ್ತಿದೆ. ವಿರೋಧಪಕ್ಷದವರನ್ನು ಗುರಿಯಾಗಿಸಿ ಉದ್ದೇಶಪೂರ್ವಕವಾಗಿ ಕೇಂದ್ರ ಸರ್ಕಾರ ಐಟಿ ದಾಳಿ ನಡೆಸುತ್ತಿದೆ ಎಂದು ಆರೋಪಿಸಲಾಗುತ್ತಿದೆ.

 

First published:April 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626