ಮಧ್ಯಪ್ರದೇಶದಲ್ಲೊಂದು ಅಮಾನವೀಯ ಘಟನೆ; ಮಲ ವಿಸರ್ಜನೆ ಮಾಡಿದ್ದಕ್ಕೆ ದಲಿತ ಮಕ್ಕಳನ್ನು ಹೊಡೆದು ಕೊಂದ ಜನ

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರೋಷಣಿ (12) ಮತ್ತು ಅವಿನಾಶ್ (10) ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳು ಮೃತಪಟ್ಟಿದ್ದಾರೆ.

MAshok Kumar | news18-kannada
Updated:September 25, 2019, 1:51 PM IST
ಮಧ್ಯಪ್ರದೇಶದಲ್ಲೊಂದು ಅಮಾನವೀಯ ಘಟನೆ; ಮಲ ವಿಸರ್ಜನೆ ಮಾಡಿದ್ದಕ್ಕೆ ದಲಿತ ಮಕ್ಕಳನ್ನು ಹೊಡೆದು ಕೊಂದ ಜನ
ಪ್ರಾತಿನಿಧಿಕ ಚಿತ್ರ.
  • Share this:
ಶಿವಪುರಿ (ಮಧ್ಯಪ್ರದೇಶ); ಇಲ್ಲಿನ ಶಿವಪುರಿ ಜಿಲ್ಲೆಯ ಪಂಚಾಯತ್ ಕಟ್ಟಡದ ಎದುರು ಇಬ್ಬರು ದಲಿತ ಮಕ್ಕಳು ಅವಸರಕ್ಕೆ ಮಲ ವಿಸರ್ಜನೆ ಮಾಡಿದರು ಎಂಬ ಕಾರಣಕ್ಕೆ ಕೆಲವರು ಆ ಮಕ್ಕಳನ್ನು ಥಳಿಸಿ ಕೊಂದಿರುವ ಅಮಾನವೀಯ ಘಟನೆ ಇಂದು ಬೆಳಗ್ಗೆ ನಡೆದಿದೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರೋಷಣಿ (12) ಮತ್ತು ಅವಿನಾಶ್ (10) ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳು ಮೃತಪಟ್ಟಿದ್ದಾರೆ.

ಶಿವಪುರಿ ಜಿಲ್ಲೆಯ ಭವಕೇಡಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಇಂತಹ ಅಮಾನವೀಯ ಘಟನೆ ನಡೆದಿದೆ. ಘಟನೆ ಸಂಬಂಧ ಆರೋಪಿಗಳನ್ನು ಶೀಘ್ರದಲ್ಲಿ ಪೊಲೀಸ್ ವಶಕ್ಕೆ ಪಡೆಯಲಾಗುವುದು ಎಂದು ಸಿರ್ಸೋಡಿ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್​ ಆರ್.ಎಸ್. ಧಾಕದ್ ತಿಳಿಸಿದ್ದಾರೆ.

ಕೇವಲ ಎರಡು ದಿನದ ಹಿಂದೆಯಷ್ಟೆ ಜಾರ್ಖಂಡ್​ನಲ್ಲಿ ದನದ ಮಾಂಸ ಸಾಗಿಸುತ್ತಿದ್ದಾರೆ ಎಂದು ಅನುಮಾನಿಸಿ ಇಬ್ಬರನ್ನು ಸಾಮೂಹಿಕವಾಗಿ ಥಳಿಸಿ ಕೊಲ್ಲಲಾಗಿತ್ತು. ಈ ಘಟನೆ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಪ್ರತಿರೋಧಕ್ಕೂ ಕಾರಣವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮಧ್ಯಪ್ರದೇಶದಲ್ಲಿ ಇಬ್ಬರು ದಲಿತ ಮಕ್ಕಳನ್ನು ಕೊಂದಿರುವುದು ಅಮಾನವೀಯ ದೇಶದಲ್ಲಿ ಇಂತಹ ಘಟನೆಗಳಿಗೆ ಕೊನೆ ಎಂದು ಎಂಬ ಕೂಗು ಇದೀಗ ಜೋರಾಗಿ ಕೇಳಿ ಬರುತ್ತಿದೆ.

ಇದನ್ನೂ ಓದಿ : ಜಾರ್ಖಂಡ್​​ ಸಾಮೂಹಿಕ ಹಲ್ಲೆ ಪ್ರಕರಣ: 11 ಆರೋಪಿಗಳ ವಿರುದ್ದದ ಚಾರ್ಜ್​ಶೀಟ್​ ಕೈ ಬಿಟ್ಟ ಪೊಲೀಸರು

First published:September 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ