news18-kannada Updated:April 15, 2020, 3:31 PM IST
ಪ್ರಾತಿನಿಧಿಕ ಚಿತ್ರ
ಗಡಿಯುಲ್ಲಿನ ಮಂಜಕೋಟೆ ಸೆಕ್ಟರ್ನ ಲಮಿಬಾರಿ ಗ್ರಾಮದಲ್ಲಿರುವ ನಜೀರ್ ಹುಸೇನ್ ಅವರ ಮನೆಗೆ ಗುಂಡುಗಳು ತಗುಲಿದ್ದು, ಇಬ್ಬರು ವ್ಯಕ್ತಿಗಳಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನ ಸೇನೆಯು ರಾತ್ರಿಯ ಶೆಲ್ ದಾಳಿ ನಡೆಸಿದ್ದು ಅದರಲ್ಲಿ 10 ವರ್ಷದ ಬಾಲಕಿ ಸೇರಿದಂತೆ ಕುಟುಂಬದ ಇಬ್ಬರು ಸದಸ್ಯರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ತೀವ್ರವಾದ ಶೆಲ್ ದಾಳಿಯಲ್ಲಿ ಗಾಯಗೊಂಡ 70 ವರ್ಷದ ರಫೀಕ್ ಖಾನ್ ಮತ್ತು ಸೋನಿಯಾ ಶಬೀರ್ ಅವರನ್ನು ಸ್ಥಳೀಯ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಮಂಜೂರ್ ಕೊಹ್ಲಿ ನೇತೃತ್ವದ ತಂಡ ರಕ್ಷಿಸಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಪಾಕಿಸ್ತಾನ ಸೇನೆಯು ಮಂಗಳವಾರ ತಡರಾತ್ರಿ ಪೂಂಚ್ ಜಿಲ್ಲೆಯ ಬಾಲಕೋಟೆ ಮತ್ತು ಮೆಂಧರ್ ಪ್ರದೇಶಗಳ ಹಳ್ಳಿಗಳ ಮೇಲೆ ಶೆಲ್ ದಾಳಿ ನಡೆಸಿದೆ.
ಭಾರತೀಯ ಸೇನೆಯು ಪ್ರತಿ ದಾಳಿ ನಡೆಸಿದೆ ಮತ್ತು ಉಭಯ ತಂಡಗಳ ನಡುವಿನ ಚಕಾಮಕಿ ಹಲವಾರು ಗಂಟೆಗಳ ಕಾಲ ನಡೆದಿತ್ತು. ಇನ್ನು ಪ್ರತಿ ದಾಳಿಯಿಂದ ಪಾಕಿಸ್ತಾನದಲ್ಲಿ ಉಂಟಾದ ಸಾವುನೋವುಗಳ ಬಗ್ಗೆ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ 1 ವರ್ಷದ ಮಗು ಸೇರಿದಂತೆ 17 ಹೊಸ ಕೊರೋನಾ ಪ್ರಕರಣ ಪತ್ತೆ; 11 ಸಾವು, 277 ಜನರಿಗೆ ಸೋಂಕು
ಅಲ್ಲದೇ ಬೆಳಿಗ್ಗೆ ಮೆಂಧರ್ ಪಟ್ಟಣದ ವಸತಿ ಪ್ರದೇಶದ ಬಳಿ ಜೀವಂತ ಶೆಲ್ ಸ್ಫೋಟಗೊಳ್ಳದೆ ಬಿದ್ದಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದನ್ನು ತಟಸ್ಥಗೊಳಿಸಲು ಸೇನಾ ತಂಡವೊಂದು ಕಾರ್ಯನಿರತವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಟ್ರಂಪ್ ಆರ್ಥಿಕ ಸಲಹೆಗಾರರ ಪಟ್ಟಿಯಲ್ಲಿ ಗೂಗಲ್ನ ಪಿಚೈ ಮತ್ತು ಮೈಕ್ರೋಸಾಫ್ಟ್ ನಾಡೆಲ್ಲಾ ಸೇರಿದಂತೆ 6 ಭಾರತೀಯರು
ಕತುವಾ ಜಿಲ್ಲೆಯ ಹಿರಾನಗರ್ ಸೆಕ್ಟರ್ನಲ್ಲಿ ಪಾಕಿಸ್ತಾನದ ರೇಂಜರ್ಗಳು ಐಬಿ ಉದ್ದಕ್ಕೂ ಪ್ರದೇಶಗಳಿಗೆ ಶೆಲ್ ದಾಳಿ ನಡೆಸಿದ್ದು ಇದು ಗಡಿ ನಿವಾಸಿಗಳಲ್ಲಿ ಭೀತಿಯನ್ನುಂಟುಮಾಡಿತು.
ಹಿರಾನಗರದ ಚಾಂದ್ವಾ ಪ್ರದೇಶದಲ್ಲಿ ಶೆಲ್ ದಾಳಿ ಮಂಗಳವಾರ ರಾತ್ರಿ 9.30 ರ ಸುಮಾರಿಗೆ ಪ್ರಾರಂಭವಾಗಿ ರಾತ್ರಿಯಿಡೀ ಮುಂದುವರೆದಿತ್ತು ಎಂದು ಅಧಿಕಾರಿಗಳು ಹೇಳಿದರು.
(ವರದಿ: ಸಂಧ್ಯಾ ಎಂ)
First published:
April 15, 2020, 3:06 PM IST