Carbon Dioxide: ಇಂಗಾಲದ ಡೈಆಕ್ಸೈಡ್ ಬಳಕೆ ಹೇಗೆ? ಇನ್ನು ಮುಂದೆ ಸುಲಭವಾಗಲಿದೆ ಅಧ್ಯಯನ!

ಎರಡು ಉನ್ನತ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಇಂಗಾಲದ ಡೈಆಕ್ಸೈಡ್‍(Carbon Dioxide)ನ ಉಗುಳುವಿಕೆಯಿಂದ ಜಾಗತಿಕ ತಾಪಮಾನ(Global Warming) ಮತ್ತು ಹವಾಮಾನ ಬದಲಾವಣೆಯಾಗುತ್ತಿದ್ದು, ವಿಜ್ಞಾನಿಗಳು(Scientist)ಕೈಗಾರಿಕೆಗಳು ಉಗುಳುವ ಇಂಗಾಲವನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಲು ಮತ್ತು ಮರು ಬಳಕೆ ಮಾಡುವ ವಿಧಾನಗಳು ಮತ್ತು ತಂತ್ರಜ್ಞಾನವನ್ನು ಸೃಷ್ಟಿಸಲು ಆಳವಾದ ಸಂಶೋಧನೆಗಳಲ್ಲಿ ತೊಡಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹವಾಮಾನ ಬದಲಾವಣೆ(Climate Change)ಗೆ ಸಿದ್ಧವಾಗಿರಲು ವಿಜ್ಞಾನ(Science) ಮತ್ತು ತಂತ್ರಜ್ಞಾನ(Technology) ಇಲಾಖೆಯು ಈ ವಲಯದಲ್ಲಿ ನೀಲನಕ್ಷೆ ಹಾಗೂ ತ್ವರಿತ ಆವಿಷ್ಕಾರ ನಡೆಸಲು ಮುಂಬೈ(Mumbai) ಮತ್ತು ಬೆಂಗಳೂರಿ(Bengaluru)ನಲ್ಲಿ ಎರಡು ಉನ್ನತ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಇಂಗಾಲದ ಡೈಆಕ್ಸೈಡ್‍(Carbon Dioxide)ನ ಉಗುಳುವಿಕೆಯಿಂದ ಜಾಗತಿಕ ತಾಪಮಾನ(Global Warming) ಮತ್ತು ಹವಾಮಾನ ಬದಲಾವಣೆಯಾಗುತ್ತಿದ್ದು, ವಿಜ್ಞಾನಿಗಳು(Scientist)ಕೈಗಾರಿಕೆಗಳು ಉಗುಳುವ ಇಂಗಾಲವನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಲು ಮತ್ತು ಮರು ಬಳಕೆ ಮಾಡುವ ವಿಧಾನಗಳು ಮತ್ತು ತಂತ್ರಜ್ಞಾನವನ್ನು ಸೃಷ್ಟಿಸಲು ಆಳವಾದ ಸಂಶೋಧನೆಗಳಲ್ಲಿ ತೊಡಗಿದ್ದಾರೆ. ಈಗಾಗಲೇ ಕೈಗಾರಿಕೆಗಳು ಉಗುಳುವ ಇಂಗಾಲವನ್ನು ಸಂಗ್ರಹಿಸುವ ತಂತ್ರಜ್ಞಾನಗಳು ಅಸ್ತಿತ್ವದಲ್ಲಿದ್ದರೂ, ಅವು ದುಬಾರಿ ಮತ್ತು ಆರ್ಥಿಕವಾಗಿ ಹೊರೆಯಾಗಿವೆ.

ಇಂಗಾಲದ ಡೈಆಕ್ಸೈಡ್‍ನ ಸಂಗ್ರಹದ ಅಧ್ಯಯನ ಕೇಂದ್ರ

ಇಂಗಾಲದ ಸಂಗ್ರಹ ಮತ್ತು ಬಳಕೆಯ ತಂತ್ರಜ್ಞಾನದ ಸಿದ್ಧತೆಯನ್ನು ಮತ್ತಷ್ಟು ಹಿಗ್ಗಿಸಲು ಮತ್ತು ಕೈಗಾರಿಕೆ ಕೇಂದ್ರಿತ ಆವಿಷ್ಕಾರಗಳು ಮತ್ತು ವಿಧಾನಗಳನ್ನು ಸೃಷ್ಟಿಸಲು ಐಐಟಿ ಬಾಂಬೆಯಲ್ಲಿ ಸ‍್ಥಾಪನೆಯಾಗಲಿರುವ ಉನ್ನತ ಅಧ್ಯಯನ ಕೇಂದ್ರ ಗಮನ ಹರಿಸಲಿದೆ. ಸಂಗ್ರಹ ಮಾತ್ರವಲ್ಲದೆ, ಈ ಕೇಂದ್ರವು ಸಂಗ್ರಹಿಸಲಾದ ಇಂಗಾಲವನ್ನು ರಾಸಾಯನಿಕವಾಗಿ ಪರಿವರ್ತನೆ, ಸ್ವತಂತ್ರ ಇಂಗಾಲವನ್ನು ಪಡೆಯುವುದು, ಸಂಗ್ರಹಗೊಂಡ ಇಂಗಾಲದ ಮೌಲ್ಯವನ್ನು ವರ್ಧಿಸಲು ಅದನ್ನು ಘನೀಕರಿಸಿ ಸಾಗಣೆ ಮಾಡುವ ವಿಧಾನಗಳ ಕುರಿತು ಕೆಲಸ ಮಾಡಲಿದೆ.

ಇದನ್ನೂ ಓದಿ: ಅದೆಷ್ಟೇ ರೂಪಾಂತರಿಗಳು ಬಂದ್ರೂ ಈ ಲಸಿಕೆ ಮುಂದೆ ಆಟ ನಡೆಯಲ್ವಂತೆ!

ಈ ಕುರಿತು ಪ್ರಕಟಣೆ ಹೊರಡಿಸಿರುವ ಸಚಿವಾಲಯವು ಐಐಟಿ ಬಾಂಬೆಯು ಇಂಧನ ಮತ್ತು ಜೈವಿಕ ಅನಿಲ ಘಟಕಗಳಿಂದ ಹೊರಬಿಡಲಾಗುವ ತ್ಯಾಜ್ಯ ಅನಿಲದಿಂದ ದಕ್ಷವಾಗಿ ಇಂಗಾಲವನ್ನು ಸಂಗ್ರಹಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ, ಪ್ರದರ್ಶಿಸಲಿದೆ ಎಂದು ಹೇಳಿದೆ.

ದೊಡ್ಡ ಪ್ರಮಾಣದಲ್ಲಿ ರಾಸಾಯನಿಕ, ಇಂಧನ ಉತ್ಪಾದನೆ

ಬೆಂಗಳೂರಿನ ಜವಾಹರಲಾಲ್ ನೆಹರೂ ಸುಧಾರಿತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಇಂಗಾಲದ ಸಂಗ್ರಹ ಮತ್ತು ಬಳಕೆಗೆ ಅಗತ್ಯವಾದ ವಿಧಾನಗಳು ಮತ್ತು ವಸ್ತುಗಳ ಅಭಿವೃದ್ಧಿ ನಡೆಯಲಿದೆ. ಈ ಕೇಂದ್ರವು ಪ್ರಾಯೋಗಿಕ ಹಂತದಲ್ಲಿ ಅಗತ್ಯವಾದ ವಿಧಾನಗಳನ್ನು ಅಭಿವೃದ್ಧಿಪಡಿಸಲಿದ್ದು, ನಂತರ ಹೈಡ್ರೋಕಾರ್ಬನ್ಸ್‍, ಓಲಿಫಿನ್ಸ್‍ (ಪ್ಲಾಸ್ಟಿಕ್ ಮತ್ತು ಅಂಟಿನಂತಹ ಹಲವಾರು ವಸ್ತುಗಳಲ್ಲಿ ನಿರ್ಮಾಣ ಹಂತವಾಗಿ ಕೆಲಸ ಮಾಡುವ ಹೈಡ್ರೋಕಾರ್ಬನ್ಸ್) ಮತ್ತು ಇನ್ನಿತರ ಮೌಲ್ಯವರ್ಧಿತ ರಾಸಾಯನಿಕ ಮತ್ತು ಇಂಧನಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಿದೆ.

ಅಂತಾರಾಷ್ಟ್ರೀಯ ಪ್ರವೃತ್ತಿಯ ಮೇಲೆ ನಿಗಾ!

“ಈ ಕೇಂದ್ರವು ಕೈಗಾರಿಕಾ ಮಟ್ಟದಲ್ಲಿ ಅಗತ್ಯವಾದ ವಾಣಿಜ್ಯ ಅಗತ್ಯತೆಯ ತಂತ್ರಜ್ಞಾನವನ್ನು ಸಿದ್ಧತೆಯ ಹಂತದಲ್ಲಿ ತಲುಪುವಂತೆ ಕೆಲಸ ಮಾಡಲಿದೆ. ಈ ಕೇಂದ್ರವು, ಸಿಸಿಯು ಸಂಶೋಧನೆಗಳನ್ನು ಉತ್ತೇಜಿಸಲಿದ್ದು, ತರಬೇತಿ ಹಾಗೂ ಸಮಾಲೋಚನೆಯನ್ನು ಒದಗಿಸಲಿದೆ. ಇದರೊಂದಿಗೆ ಜಾಗತಿಕ ಆರ್ಥಿಕತೆ ಮತ್ತು ಸಾಮಾಜಿಕ ಪರಿಣಾಮಗಳಿಗೆ ತನ್ನ ಉನ್ನತ ಸಂಶೋಧನೆಗಳ ಪರಿಹಾರ ನೀಡುವಂತೆ ಪರಿವರ್ತಿಸಲಿದೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಈ ಕೇಂದ್ರವು ಅಂತಾರಾಷ್ಟ್ರೀಯ ಪ್ರವೃತ್ತಿಯ ಮೇಲೆ ನಿಗಾ ಇಡಲಿದ್ದು, ಸಾಧ್ಯತಾ ಸಹಭಾಗಿತ್ವದ ಬಗ್ಗೆ ಸಲಹೆಯನ್ನೂ ನೀಡಲಿದೆ.

ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಬೈಡೆನ್, ಟ್ರೂಡೋ ಹಿಂದಿಕ್ಕಿದ PM Modi

"ಇಂಗಾಲದ ಡೈಆಕ್ಸೈಡ್ ಸಂಗ್ರಹ ಮತ್ತು ಬಳಕೆಯಂತಹ ಪ್ರಮುಖ ವಲಯದಲ್ಲಿ ಉನ್ನತ ಅಧ್ಯಯನ ಕೇಂದ್ರ ಸ್ಥಾಪಿಸುವುದು ಮತ್ತು ಅದನ್ನು ಜಾಗತಿಕ ನಾಯಕನನ್ನಾಗಿಸುವ ದೂರದೃಷ್ಟಿ ಈ ಕೇಂದ್ರದ ಸ್ಥಾಪನೆ ಹಿಂದಿದೆ. ಭಾರಿ ಸಾಮಾಜಿಕ-ಆರ್ಥಿಕ ಪರಿಣಾಮ ಬೀರುವ ಸಂಶೋಧನೆಗಳು, ಭಾರಿ ಪರಿಣಾಮ ಬೀರುವ ಪ್ರಕಟಣೆಗಳು ಮತ್ತು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಪರ್ಕಗಳ ಮೂಲಕ ಎಲ್ಲರನ್ನು ತಲುಪಬಲ್ಲ ಕಾರ್ಯಕ್ರಮಗಳನ್ನು ರೂಪಿಸಿ ಯುವ ಆಕಾಂಕ್ಷೆಗಳನ್ನು ತಲುಪುವ ದೂರದೃಷ್ಟಿ ಹೊಂದಲಾಗಿದೆ" ಎಂದು ಮೂಲಗಳು ತಿಳಿಸಿವೆ.
Published by:Vasudeva M
First published: