ಶಾಲೆಯ ಶೌಚಾಲಯದಲ್ಲೇ 6 ವರ್ಷದ ಹುಡುಗಿಯ ಮೇಲೆ 10 ವರ್ಷದ ಇಬ್ಬರು ಬಾಲಕರಿಂದ ಅತ್ಯಾಚಾರ, ಮತ್ತೊಬ್ಬ ಹೊರಗೆ ಕಾವಲು!

ಕಳೆದ ಆಗಸ್ಟ್.20 ರಂದು 1ನೇ ತರಗತಿ ಬಾಲಕಿಯನ್ನು ಶಾಲೆಯ ಶೌಚಾಲಯಕ್ಕೆ ಕರೆದುಕೊಂಡು ಹೋಗಿರುವ 4ನೇ ತರಗತಿಯ ಇಬ್ಬರು ಬಾಲಕರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮೂರನೇಯ ವಿದ್ಯಾರ್ಥಿ ಇವರಿಗೆ ಕಾವಲಾಗಿ ಶೌಚಾಲಯದ ಹೊರಗೆ ನಿಂತಿದ್ದಾನೆ.

MAshok Kumar | news18
Updated:August 23, 2019, 6:31 PM IST
ಶಾಲೆಯ ಶೌಚಾಲಯದಲ್ಲೇ 6 ವರ್ಷದ ಹುಡುಗಿಯ ಮೇಲೆ 10 ವರ್ಷದ ಇಬ್ಬರು ಬಾಲಕರಿಂದ ಅತ್ಯಾಚಾರ, ಮತ್ತೊಬ್ಬ ಹೊರಗೆ ಕಾವಲು!
ಪ್ರಾತಿನಿಧಿಕ ಚಿತ್ರ.
  • News18
  • Last Updated: August 23, 2019, 6:31 PM IST
  • Share this:
ರಾಯ್ಪುರ್ (ಆಗಸ್ಟ್.23); ಒಂದನೇ ತರಗತಿಯ 6 ವರ್ಷದ ಬಾಲಕಿಯ ಮೇಲೆ 4ನೇ ತರಗತಿಯ 10 ವರ್ಷದ ಇಬ್ಬರು ಬಾಲಕರು ಸರ್ಕಾರಿ ಶಾಲೆಯ ಶೌಚಾಲಯದಲ್ಲೇ ಮತ್ತೊಬ್ಬ ಗೆಳೆಯನ ಕಾವಲಿನಲ್ಲಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಛತ್ತೀಸ್​ಘಡ್ ರಾಜ್ಯದ ರಾಜಧಾನಿ ರಾಯ್ಪುರ್ ನಲ್ಲಿ ನಡೆದಿದೆ.

ಇಲ್ಲಿನ ಖಮ್ತಾರೈ ಪೊಲೀಸ್ ಠಾಣೆ ಸರಹದ್ದಿನ ಸರ್ಕಾರಿ ಶಾಲೆಯಲ್ಲಿ ಆಗಸ್ಟ್.20 ರಂದು ಘಟನೆ ಜರುಗಿದೆ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಆಗಸ್ಟ್.20 ರಂದು 1ನೇ ತರಗತಿ ಬಾಲಕಿಯನ್ನು ಶಾಲೆಯ ಶೌಚಾಲಯಕ್ಕೆ ಕರೆದುಕೊಂಡು ಹೋಗಿರುವ 4ನೇ ತರಗತಿಯ ಇಬ್ಬರು ಬಾಲಕರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮೂರನೇಯ ವಿದ್ಯಾರ್ಥಿ ಇವರಿಗೆ ಕಾವಲಾಗಿ ಶೌಚಾಲಯದ ಹೊರಗೆ ನಿಂತಿದ್ದಾನೆ. ಇದನ್ನು ನೋಡಿದ್ದ ಶಾಲಾ ಶಿಕ್ಷಕಿ ಕೂಡಲೇ ಸ್ಥಳಕ್ಕೆ ಧಾವಿಸಿ ಬಾಲಕಿಯನ್ನು ರಕ್ಷಿಸಿ ಪ್ರಾಂಶುಪಾಲರ ಕೊಠಡಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲದೆ, ಆಕೆಯನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿದ್ದಾರೆ. ಆದರೆ, ಮನೆಗೆ ಬಂದ ಬಾಲಕಿ ಶಾಲೆಯಲ್ಲಿ ನಡೆದ ಎಲ್ಲಾ ವಿಚಾರವನ್ನು ತನ್ನ ಪಾಲಕರಿಗೆ ತಿಳಿಸಿದ್ದಾಳೆ.

ಕೂಡಲೇ ಶಾಲೆಗೆ ಆಗಮಿಸಿದ್ದ ಸಂತ್ರಸ್ತ ಬಾಲಕಿಯ ಪಾಲಕರು ತಪ್ಪಿತಸ್ಥ ಹುಡುಗರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ, ಶಾಲೆಯ ಆಡಳಿತ ಮಂಡಲಿ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗುರುವಾರ ರಾತ್ರಿ ಅತ್ಯಾಚಾರಕ್ಕೆ ಒಳಗಾದ ಹುಡುಗಿಯ ಪಾಲಕರು ಪೊಲೀಸ್ ಠಾಣೆಗೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ. ಪಾಲಕರ ದೂರಿನ ಮೇಲೆ ಕಲಂ 376 ಅತ್ಯಾಚಾರ, ಕಲಂ 354(ಎ) ಲೈಂಗಿಕ ದೌರ್ಜನ್ಯ ಹಾಗೂ ಪೋಸ್ಕೊ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದಂತೆ ಮಕ್ಕಳ ಕಲ್ಯಾಣ ಆಯೋಗದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಂತ್ರಸ್ಥ ಬಾಲಕಿಯ ಹೇಳಿಯನ್ನು ಪಡೆದಿದ್ದಾರೆ. ಅಲ್ಲದೆ ಹುಡುಗಿಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ ಅತ್ಯಾಚಾರವಾಗಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : Viral Video: ಯೋಗಿ ರಾಜ್ಯದಲ್ಲಿ ಬಿಸಿಯೂಟದ ಯಡವಟ್ಟು; ಶಾಲಾ ಮಕ್ಕಳಿಗೆ ರೊಟ್ಟಿ ಜೊತೆ ಬರೀ ಉಪ್ಪು!ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

First published:August 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ