ಆಂಧ್ರ ಮೂಲದ ಒಂದೇ ಕುಟುಂಬದ ನಾಲ್ವರು ಅಮೆರಿಕದಲ್ಲಿ ಶವವಾಗಿ ಪತ್ತೆ

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಸಂಡೂರಿನವರಾಗಿರುವ ಚಂದ್ರಶೇಖರ್​ ತಮ್ಮ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋಗಿದ್ದರು. ನಂತರ ಅಲ್ಲಿಯೇ ಉದ್ಯೋಗ ಪಡೆದು ಅಮೆರಿಕದಲ್ಲಿಯೇ ವಾಸವಾಗಿದ್ದರು. ವರ್ಷಕ್ಕೊಮ್ಮೆ ತಮ್ಮ ಕುಟುಂಬದೊಂದಿಗೆ ಹೈದರಾಬಾದ್​ಗೆ ಬಂದು ಹೋಗುತ್ತಿದ್ದರು.

Sushma Chakre | news18
Updated:June 17, 2019, 12:21 PM IST
ಆಂಧ್ರ ಮೂಲದ ಒಂದೇ ಕುಟುಂಬದ ನಾಲ್ವರು ಅಮೆರಿಕದಲ್ಲಿ ಶವವಾಗಿ ಪತ್ತೆ
ಸಾಂದರ್ಭಿಕ ಚಿತ್ರ
  • News18
  • Last Updated: June 17, 2019, 12:21 PM IST
  • Share this:
ನವದೆಹಲಿ (ಜೂ. 17): ಆಂಧ್ರಪ್ರದೇಶ ಮೂಲದ ಒಂದೇ ಕುಟುಂಬದ ನಾಲ್ವರು ಅಮೆರಿಕದ ವೆಸ್ಟ್​ ಡೆಸ್​ ಮೊಯಿನ್ಸ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇಬ್ಬರು ಗಂಡು ಮಕ್ಕಳು ಮತ್ತು ಅವರ ತಂದೆ-ತಾಯಿ ಗುಂಡೇಟಿಗೆ ಬಲಿಯಾಗಿದ್ದಾರೆ.

ಚಂದ್ರಶೇಖರ ಶಂಕರ (44), ಲಾವಣ್ಯ ಶಂಕರ (41), 15 ಮತ್ತು 10 ವರ್ಷದ ಇಬ್ಬರು ಗಂಡು ಮಕ್ಕಳು ಮೃತರಾದವರು. ಮೃತರ ದೇಹಕ್ಕೆ ಹಲವು ಬಾರಿ ಗುಂಡು ಹಾರಿಸಲಾಗಿದ್ದು, ದೇಹದ ಹಲವೆಡೆ ಗಾಯದ ಗುರುತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಂದ್ರಶೇಖರ ಶಂಕರ ಅವರ ಸಂಬಂಧಿಕರು ಮನೆಗೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಅವರು ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಅಪರಾಧಿಗಳನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.

Ind vs Pak: ಪಾಕ್​ ಮೇಲೆ ಮತ್ತೊಂದು ದಾಳಿ, ಫಲಿತಾಂಶ ಒಂದೇ; ಭಾರತ ಕ್ರಿಕೆಟ್​ ತಂಡಕ್ಕೆ ಶಹಬ್ಬಾಸ್​ ಎಂದ ಅಮಿತ್​ ಶಾ

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಸಂಡೂರಿನವರಾಗಿರುವ ಚಂದ್ರಶೇಖರ್​ ತಮ್ಮ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋಗಿದ್ದರು. ನಂತರ ಅಲ್ಲಿಯೇ ಉದ್ಯೋಗ ಪಡೆದು ಅಮೆರಿಕದಲ್ಲಿಯೇ ವಾಸವಾಗಿದ್ದರು. ಅವರ ಪೋಷಕರು ಹೈದರಾಬಾದ್​ನಲ್ಲಿ ನೆಲೆಸಿದ್ದಾರೆ. ವರ್ಷಕ್ಕೊಮ್ಮೆ ಚಂದ್ರಶೇಖರ್​ ಕುಟುಂಬಸ್ಥರು ಹೈದರಾಬಾದ್​ಗೆ ಬಂದು ಹೋಗುತ್ತಿದ್ದರು. ಶಂಕರ ಅವರ ಮನೆಯಲ್ಲೇ ಅವರ ಸಂಬಂಧಿಕರು ಕೂಡ ಇದ್ದರು. ಅಮೆರಿಕಕ್ಕೆ ತಿರುಗಾಡಲು ಬಂದಿದ್ದ ಅವರ ಸಂಬಂಧಿಕರು ಮನೆಗೆ ಬಂದಾಗ ಈ ಹತ್ಯೆಯ ವಿಷಯ ಗೊತ್ತಾಗಿದೆ ಎಂದು ಹಿಂದುಸ್ಥಾನ್​ ಟೈಮ್ಸ್​ ವರದಿ ಮಾಡಿದೆ.

Lok Sabha Session: ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭ; ನೂತನ ಸಂಸದರಿಂದ ಪ್ರಮಾಣವಚನ ಸ್ವೀಕಾರ

ಅಲ್ಲಿನ ಸ್ಥಳೀಯರು ಚಂದ್ರಶೇಖರ್​ ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಇತ್ತೀಚೆಗೆ ತೀರಾ ಖಿನ್ನತೆಗೆ ಒಳಗಾಗಿದ್ದರು. ಅವರೇ ತಮ್ಮ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಗುಂಡಿಕ್ಕಿ ಕೊಂದು ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

 
First published:June 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ